ಚೆಟ್ಟಳ್ಳಿ, ಜು. 30: ಪವಿತ್ರ ಹಜ್ಜ್ ಯಾತ್ರೆಗೆ ಮಕ್ಕಾಗೆ ತೆರಳುವ ಕರ್ನಾಟಕ ರಾಜ್ಯ ಹಜ್ ಸಮಿತಿ ಸದಸ್ಯರು, ಎಸ್.ಎಸ್.ಎಫ್. ರಾಷ್ಟ್ರೀಯ ನಾಯಕ ಮೌಲಾನಾ ಕೆ.ಎಂ. ಸಿದ್ದೀಕ್ ಮೋಂಟುಗೋಳಿ ಅವರಿಗೆ ಸುನ್ನಿ ಸಂಘದಿಂದ ಬೀಳ್ಕೊಡುಗೆ ಹಮ್ಮಿಕೊಳ್ಳಲಾಯಿತು. ಕರ್ಕಳ್ಳಿ ಮದ್ರಸಾ ವಠಾರದಲ್ಲಿ ನಡೆದ ಸಮಾರಂಭದಲ್ಲಿ ಎಸ್.ವೈ.ಎಸ್. ಜಿಲ್ಲಾಧ್ಯಕ್ಷ ಹಫೀಲ್ ಸಅದಿ ಅಧ್ಯಕ್ಷತೆ ವಹಿಸಿದರು. ಜಿ.ಪಂ. ಸದಸ್ಯ ಲತೀಫ್, ಎಸ್.ವೈ.ಎಸ್. ನಾಯಕರುಗಳಾದ ಅಲಿ ಸಖಾಫಿ, ಸಮದ್ ನಿಝಾಮಿ, ಸೈದು ಹಾಜಿ, ಹಬೀಬ್, ಇಬ್ರಾಹಿಂ, ಅಬ್ಬಾಸ್, ಯಾಕೂಬ್ ಹಾಗೂ ಕಾರ್ಯಕರ್ತರು ಪಾಲ್ಗೊಂಡಿದ್ದರು. ಸಭೆಯಲ್ಲಿ ಎಸ್.ಎಸ್.ಎಫ್. ಜಿಲ್ಲಾಧ್ಯಕ್ಷ ಅಝೀಝ್ ಸಖಾಫಿ ಸ್ವಾಗತಿಸಿ, ವಂದಿಸಿದರು.