ವೀರಾಜಪೇಟೆ, ಜು. 30: ಮಗ್ಗುಲ ಶನೀಶ್ವರ ದೇವಾಲಯದಲ್ಲಿ ಪ್ರತಿವರ್ಷ ನಡೆಯುವ ಶ್ರಾವಣ ಮಾಸದ ಪೂಜೆಗಳು ಆ.3ರಿಂದ ಆರಂಭಗೊಂಡು 24ರವರೆಗೆ ನಡೆಯಲಿದ್ದು ಪ್ರತಿ ಶನಿವಾರ ಬೆಳಗಿನಿಂದಲೇ ನವಗ್ರಹ ಪೂಜೆ, ಶನಿಶಾಂತಿ, ಜಪತಪಗಳು ನಡೆಯಲಿದೆ. ನಾಲ್ಕು ಶನಿವಾರಗಳು ಅಪರಾಹ್ನ ಭಕ್ತಾದಿಗಳಿಗೆ ಅನ್ನದಾನ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದು ದೇವಾಲಯದ ಆಡಳಿತ ಮಂಡಳಿ ಪ್ರಕಟಣೆ ತಿಳಿಸಿದೆ.