ಮಡಿಕೇರಿ, ಜು. 28: ಮಡಿಕೇರಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ 10ನೇ ತಾಲೂಕು ಸಾಹಿತ್ಯ ಸಮ್ಮೇಳನ ಹಮ್ಮಿಕೊಂಡಿದ್ದು, ಇದೇ ತಾ. 31ರಂದು ಬೇಂಗೂರು ಗ್ರಾ.ಪಂ. ವ್ಯಾಪ್ತಿಯ ಚೇರಂಬಾಣೆಯ ಬೇಂಗ್‍ನಾಡ್ ಕೊಡವ ಸಮಾಜದಲ್ಲಿ ನಡೆಯಲಿದೆ. ಸಮ್ಮೇಳನಕ್ಕೆ ಸ್ಥಳೀಯ ಗ್ರಾಮದ ಪ್ರಮುಖರನ್ನೊಳಗೊಂಡ ಉಪ ಸಮಿತಿಗಳನ್ನು ರಚಿಸಿದ್ದು, ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ. ಸಮ್ಮೇ¼ನದ ಸರ್ವಾಧ್ಯಕ್ಷರಾಗಿ ಹಿರಿಯ ಸಾಹಿತಿ, ಮಾಜಿ ಯೋದ, ಕಿಗ್ಗಾಲು ಗಿರೀಶ್ ಅವರು ಆಯ್ಕೆಯಾಗಿದ್ದಾರೆ. ಬೆಳಿಗ್ಗೆಯಿಂದ ಸಂಜೆವರೆಗೆ ವೈವಿಧ್ಯಮಯ ಸಾಹಿತ್ಯಕ ಕಾರ್ಯಕ್ರಮಗಳು ಜರುಗಲಿವೆ.ಧ್ವಜಾರೋಹಣ ಸಮ್ಮೇಳನದ ಅಂಗವಾಗಿ ಅಂದು ಕೊಡವ ಸಮಾಜದ ಆವರಣದಲ್ಲಿ ಬೆಳಿಗ್ಗೆ ಧ್ವಜಾರೋಹಣ ಕಾರ್ಯಕ್ರಮ ನಡೆಯಲಿದ್ದು, ಬೇಂಗೂರು ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಚೋಂದಕ್ಕಿ ಧ್ವಜಾರೋಹಣ ಮಾಡುವರು. ಅರುಣ ಪದವಿಪೂರ್ವ ಕಾಲೇಜು ವಿಜ್ಞಾನ ವಿಭಾಗದ ವಿದ್ಯಾರ್ಥಿಗಳು ರಾಷ್ಟ್ರಗೀತೆ ಹಾಡಲಿದ್ದಾರೆ. ಕ.ಸಾ.ಪ. ಜಿಲ್ಲಾಧ್ಯಕ್ಷ ಬಿ.ಎಸ್. ಲೋಕೇಶ್ ಸಾಗರ್ ನಾಡ ಧ್ವಜಾರೋಹಣ ಮಾಡಲಿದ್ದು, ಮಡಿಕೇರಿ ತಾಲೂಕು ಅಧ್ಯಕ್ಷ ಕುಡೆಕಲ್ ಸಂತೋಷ್ ಪರಿಷತ್ ಧ್ವಜಾರೋಹಣ ಮಾಡುವರು. ಅರುಣ ಪ.ಪೂ. ಕಾಲೇಜು ಪ್ರೌಢಶಾಲೆ ವಿದ್ಯಾರ್ಥಿಗಳು ನಾಡಗೀತೆ ಹಾಡುವರು.
ದ್ವಾರ ಉದ್ಘಾಟನೆ : ಚೇರಂಬಾಣೆಯಿಂದ ಕೊಡವ ಸಮಾಜಕ್ಕೆ ತೆರಳುವ ಮುಖ್ಯ ರಸ್ತೆಗೆ ಹುತಾತ್ಮ ಯೋಧ ಕುಟ್ಟನ ರವೀಂದ್ರ ಅವರ ಜ್ಞಾಪಕಾರ್ಥ ಮಹಾದ್ವಾರದ ಉದ್ಘಾಟನೆ ಬೆಳಿಗ್ಗೆ 8.30ಕ್ಕೆ ನಡೆಯಲಿದೆ. ಗ್ರಾ.ಪಂ. ಉಪಾಧ್ಯಕ್ಷೆ ಟಿ.ಪಿ. ಲಕ್ಷ್ಮಿ ಉದ್ಘಾಟಿಸುವರು. ಅತಿಥಿಗಳಾಗಿ ಗ್ರಾ.ಪಂ. ಸದಸ್ಯರುಗಳಾದ ಬಿ.ಪಿ. ಸುಮನ್, ಲೈಲ ಪಿ.ಎಸ್. ಹಾಗೂ ಎ.ಎ. ಚೀಯಣ್ಣ ಅವರುಗಳು ಉಪಸ್ಥಿತರಿರುವರು.
ಅಧ್ಯಕ್ಷರ ಮೆರವಣಿಗೆ : ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಕಿಗ್ಗಾಲು ಗಿರೀಶ್ ಅವರನ್ನೊಳಗೊಂಡ ಅಧ್ಯಕ್ಷರ ಮೆರವಣಿಗೆ 9 ಗಂಟೆಗೆ ನಡೆಯಲಿದೆ. ತಾಲೂಕು ತಹಶೀಲ್ದಾರ್ ಕುಸುಮ ಅವರು ಮೆರವಣಿಗೆ ಉದ್ಘಾಟಿಸಲಿದ್ದಾರೆ. ಅತಿಥಿಗಳಾಗಿ ಗ್ರಾ.ಪಂ. ಸದಸ್ಯರುಗಳಾದ ಬಿ.ಎಸ್. ನೀಲಮ್ಮ, ಸಂತೋಷ್ ಕುಮಾರ್ ಉಪಸ್ಥಿತರಿರುವರು.
ಪುಸ್ತಕ ಮಳಿಗೆ ಉದ್ಘಾಟನೆ : ಬೆಳಿಗ್ಗೆ 10 ಗಂಟೆಗೆ ಪುಸ್ತಕ ಮಳಿಗೆಯನ್ನು ತಾ.ಪಂ. ಸದಸ್ಯ ದಬ್ಬಡ್ಕ ಶ್ರೀಧರ್ ಉದ್ಘಾಟಿಸುವರು. ಅತಿಥಿಗಳಾಗಿ ಗ್ರಾ.ಪಂ. ಸದಸ್ಯೆ ಬಿ.ಸಿ. ದಮಯಂತಿ ಉಪಸ್ಥಿತರಿರುವರು.
(ಮೊದಲ ಪುಟದಿಂದ)
ಸಭಾಂಗಣ ಉದ್ಘಾಟನೆ
ಕೊಡವ ಸಮಾಜದ ಭಾರತೀಸುತ ಸಭಾಂಗಣವನ್ನು 10.15ಕ್ಕೆ ಜಿ.ಪಂ. ಸದಸ್ಯ ಕೆ.ಕೆ. ಕುಮಾರ್ ಉದ್ಘಾಟಿಸುವರು. ಮುಖ್ಯ ಅತಿಥಿಗಳಾಗಿ ಗ್ರಾ.ಪಂ. ಸದಸ್ಯರಾದ ಎಂ.ಸಿ. ಪದ್ಮಾವತಿ, ಎಂ.ಕೆ. ಪೂರ್ಣಿಮಾ ಉಪಸ್ಥಿತರಿರುವರು.
ವೇದಿಕೆ ಉದ್ಘಾಟನೆ
ಪಂಜೆ ಮಂಗೇಶರಾಯ ವೇದಿಕೆಯನ್ನು 10.30 ಗಂಟೆಗೆ ಬೇಂಗೂರು ಗ್ರಾ.ಪಂ. ಅಧ್ಯಕ್ಷ ಕೆ.ಬಿ. ಅಶೋಕ್ ಉದ್ಘಾಟಿಸುವರು. ಅತಿಥಿಗಳಾಗಿ ಗ್ರಾ.ಪಂ. ಸದಸ್ಯರುಗಳಾದ ಮಿತ್ರ ಚಂಗಪ್ಪ, ಕೆ.ಎಂ. ಸುಗುಣ ಉಪಸ್ಥಿತರಿರುವರು.
ಉದ್ಘಾಟನಾ ಸಮಾರಂಭ
11 ಗಂಟೆಗೆ ನಡೆಯಲಿರುವ ಸಮ್ಮೇಳನವನ್ನು ಕ್ಷೇತ್ರದ ಶಾಸಕ ಕೆ.ಜಿ. ಬೋಪಯ್ಯ ಉದ್ಘಾಟಿಸುವರು. 9ನೇ ಸಮ್ಮೇಳದನ ಅಧ್ಯಕ್ಷೆ ಮೊಣ್ಣಂಡ ಶೋಭಾ ಸುಬ್ಬಯ್ಯ ಅವರು ನಿಕಟಪೂರ್ವ ಅಧ್ಯಕ್ಷರ ನುಡಿಯಾಡಲಿದ್ದು, 10ನೇ ಸಮ್ಮೇಳನದ ಅಧ್ಯಕ್ಷ ಕಿಗ್ಗಾಲು ಗಿರೀಶ್ ಅವರು ಸಮ್ಮೇಳನಾಧ್ಯಕ್ಷರ ಭಾಷಣ ಮಾಡುವರು. ಕಿಗ್ಗಾಲು ಗಿರಿಶ್ ಅವರು ಬರೆದಿರುವ ಪುಸ್ತಕ ಗಳನ್ನು ಇದೇ ಸಂದರ್ಭ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಅವರು ಬಿಡುಗಡೆಗೊಳಿಸುವರು.
ಮುಖ್ಯ ಅತಿಥಿಗಳಾಗಿ ಜಿ.ಪಂ. ಅಧ್ಯಕ್ಷ ಬಿ.ಎ. ಹರೀಶ್, ವಿಧಾನಪರಿಷತ್ತು ಸದಸ್ಯರುಗಳಾದ ಶಾಂತೆಯಂಡ ವೀಣಾ ಅಚ್ಚಯ್ಯ, ಎಂ.ಪಿ. ಸುನಿಲ್ ಸುಬ್ರಮಣಿ, ತಾ.ಪಂ. ಅಧ್ಯಕ್ಷೆ ತೆಕ್ಕಡೆ ಶೋಭಾ ಮೋಹನ್, ಜಿ.ಪಂ. ಸದಸ್ಯ ಕೆ.ಕೆ. ಕುಮಾರ್, ಸದಸ್ಯೆ ಕವಿತಾ ಪ್ರಭಾಕರ್, ತಾ.ಪಂ. ಸದಸ್ಯರಾದ ದಬ್ಬಡ್ಕ ಶ್ರೀಧರ್, ಕು.ಸಂಧ್ಯಾ, ಗ್ರಾ.ಪಂ. ಅಧ್ಯಕ್ಷ ಕೆ.ಬಿ. ಅಶೋಕ್, ಕ.ಸಾ.ಪ. ನಿಕಟಪೂರ್ವ ಅಧ್ಯಕ್ಷ ಟಿ.ಪಿ. ರಮೇಶ್, ಜಾನಪದ ಪರಿಷತ್ತು ಅಧ್ಯಕ್ಷ ಬಿ.ಜಿ. ಅನಂತಶಯನ, ಲೇಖಕರ ಮತ್ತು ಕಲಾವಿದರ ಬಳಗದ ಅಧ್ಯಕ್ಷ ಎಂ.ಪಿ. ಕೇಶವಕಾಮತ್, ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷೆ ಬಿ.ಆರ್. ಸವಿತಾ ರೈ, ಕೊಡಗು ಪ್ರೆಸ್‍ಕ್ಲಬ್ ಅಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ,, ಬೇಂಗೂರು ಕೊಡವ ಸಮಾಜದ ಅಧ್ಯಕ್ಷ ಕುಟ್ಟೇಟಿರ ಮಣಿ ಕುಂಞಪ್ಪ, ನಗರಸಭೆ ಆಯುಕ್ತರಾದ ಎಂ.ಎಲ್. ರಮೇಶ್ ಭಾಗವಹಿಸುವರು.
ಕ.ಸಾ.ಪ. ಸೋಮವಾರಪೇಟೆ ಅಧ್ಯಕ್ಷ ಎಸ್.ಡಿ. ವಿಜೇತ್, ವೀರಾಜಪೇಟೆಯ ಮಧೋಶ್ ಪೂವಯ್ಯ, ಕುಶಾಲನಗರದ ಎಂ.ಡಿ. ರಂಗಸ್ವಾಮಿ, ಪೊನ್ನಂಪೇಟೆಯ ಡಾ. ಚಂದ್ರಶೇಖರ್, ಮಡಿಕೇರಿ ಗೌ.ಕಾರ್ಯದರ್ಶಿಗಳಾದ ಡಾ. ಕೂಡಕಂಡಿ ದಯಾನಂದ, ಬಾಳೆಯಡ ಕಿಶನ್ ಪೂವಯ್ಯ, ಗೌರವ ಕೋಶಾಧಿಕಾರಿ ಬಾಳೆಕಜೆ ಯೋಗೇಂದ್ರ, ಮೂರ್ನಾಡು ಹೋಬಳಿ ಅಧ್ಯಕ್ಷ ಪಿ.ಪಿ.ಸುಕುಮಾರ್, ಸಂಪಾಜೆಯ ಹೆಚ್.ಎಸ್. ಕುಮಾರ್, ನಾಪೋಕ್ಲುವಿನ ಸಿ.ಎಸ್. ಸುರೇಶ್, ಭಾಗಮಂಡಲ ಅಧ್ಯಕ್ಷ ಎ.ಎಸ್. ಶ್ರೀಧರ್, ಜಿಲ್ಲಾ ನಿರ್ದೇಶಕರಾದ ಫಿಲಿಪ್‍ವಾಸ್, ಕೆ.ಕೆ. ನಾಗರಾಜಶೆಟ್ಟಿ ಉಪಸ್ಥಿತರಿರುವರು.
ವಿಚಾರಗೋಷ್ಠಿ
ಮಧ್ಯಾಹ್ನ 12 ಗಂಟೆಗೆ ಉಪನ್ಯಾಸಕ ಡಾ. ಮಾಧವರಾವ್ ಅವರ ಅಧ್ಯಕ್ಷತೆಯಲ್ಲಿ ವಿಚಾರಗೋಷ್ಠಿ ನಡೆಯಲಿದೆ. ಅತಿಥಿಗಳಾಗಿ ನಿವೃತ್ತ ಶಿಕ್ಷಕ ಅಯ್ಯಂಡ ರಾಮಕೃಷ್ಣ, ಬೆಳೆಗಾರ ಪೊಡನೋಳಂಡ ಸುಬ್ಬಯ್ಯ ಉಪಸ್ಥಿತರಿರುವರು. ‘ಕೃಷಿ ತೋಟಗಾರಿಕೆಯಲ್ಲಿ ರೈತರು ಎದುರಿಸುತ್ತಿರುವ ಸವಾಲುಗಳು’ ಎಂಬ ವಿಷಯದಡಿ ಚೇರಂಬಾಣೆಯ ಮಧು ಬೋಪಣ್ಣ ಹಾಗೂ ‘ವಿಪತ್ತು ನಿರ್ವಹಣೆ- ಸುರಕ್ಷತೆಯ ಸಂಸ್ಕøತಿ’ ಈ ವಿಷಯದಡಿ ಪ್ರಭಾತ್ ಕಲ್ಕುರ ಅವರುಗಳು ವಿಷಯ ಮಂಡನೆ ಮಾಡುವರು.
ಬಹಿರಂಗ ಅಧಿವೇಶನ
ಅಪರಾಹ್ನ 3.30 ಗಂಟೆಗೆ ಕ.ಸಾ.ಪ. ಮಡಿಕೇರಿ ತಾಲೂಕು ಅಧ್ಯಕ್ಷ ಕುಡೆಕಲ್ ಸಂತೋಷ್ ಅಧ್ಯಕ್ಷತೆಯಲ್ಲಿ ಬಹಿರಂಗ ಅಧಿವೇಶನ ನಡೆಯಲಿದೆ. ಗೌ.ಕಾರ್ಯದರ್ಶಿ ಬಾಳೆಯಡ ಕಿಶನ್ ಪೂವಯ್ಯ ನಿರ್ಣಯ ಮಂಡನೆ ಮಾಡುವರು.
ಸಮಾರೋಪ
ಆ ಬಳಿಕ ಸಂಜೆ 4 ಗಂಟೆಗೆ ಕುಡೆಕಲ್ ಸಂತೋಷ್ ಅಧ್ಯಕ್ಷತೆಯಲ್ಲಿ ಸಮಾರೋಪ ಸಮಾರಂಭ, ಸಾಧಕರಿಗೆ ಸನ್ಮಾನ, ಸಾಂಸ್ಕøತಿಕ ಕಾರ್ಯಕ್ರಮಗಳು ಜರುಗಲಿವೆ.
ಸಮ್ಮೇಳನಾಧ್ಯಕ್ಷ ಕಿಗ್ಗಾಲು ಗಿರೀಶ್ ಆಶಯ ನುಡಿಗಳನ್ನಾಡುವರು. ಶಕ್ತಿ ದಿನಪತ್ರಿಕೆ ಸಹಾಯಕ ಸಂಪಾದಕ ಚಿ.ನಾ. ಸೋಮೇಶ್ ಸಮಾರೋಪ ಭಾಷಣ ಮಾಡುವರು. ಲೋಕೇಶ್ ಸಾಗರ್ ಸಮ್ಮೇಳನಾಧ್ಯಕ್ಷರನ್ನು ಸನ್ಮಾನಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಕರ್ನಾಟಕ ಅರೆಭಾಷೆ ಸಂಸ್ಕøತಿ ಮತ್ತು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಪಿ.ಸಿ. ಜಯರಾಮ, ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಪೆಮ್ಮಂಡ ಕೆ. ಪೊನ್ನಪ್ಪ, ತಲಕಾವೇರಿ ಭಾಗಮಂಡಲ ದೇವಾಲಯ ಸಮಿತಿ ಅಧ್ಯಕ್ಷ ಬಿದ್ದಾಟಂಡ ತಮ್ಮಯ್ಯ, ಕ.ಸಾ.ಪ. ನಿಕಟಪೂರ್ವ ಅಧ್ಯಕ್ಷ ಎಸ್.ಐ.ಮುನೀರ್ ಅಹಮದ್, ಜಿಲ್ಲಾ ಗೌ. ಕಾರ್ಯದರ್ಶಿ ಡಾ. ಸುಭಾಷ್ ನಾಣಯ್ಯ, ಕೆ.ಎಸ್. ರಮೇಶ್, ಗೌ. ಕೋಶಾಧಿಕಾರಿ ಎಸ್.ಎ. ಮುರಳೀಧರ, ಪ್ರತಿನಿಧಿ ಎನ್.ಎ. ಅಶ್ವತ್ಥ್ ಕುಮಾರ್, ಪ.ಪೂ. ಶಿಕ್ಷಣ ಇಲಾಖೆ ಸಹಾಯಕ ನಿರ್ದೇಶಕ ಕೆಂಚಪ್ಪ, ಮಾಜಿ ಸೈನಿಕರ ಸಂಘದ ಅಧ್ಯಕ್ಷ ಮುಕ್ಕಾಟಿ ಎನ್.ಮಾದಪ್ಪ ಉಪಸ್ಥಿತರಿರುವರು.
ಸಾಂಸÀ್ಕøತಿಕ ಕಾರ್ಯಕ್ರಮ
ಸಂಜೆ 6 ಗಂಟೆಗೆ ನಡೆಯುವ ಸಾಂಸ್ಕøತಿಕ ಕಾರ್ಯಕ್ರಮವನ್ನು ಹಿರಿಯ ಸಾಹಿತಿ ಬಾಚರಣಿಯಂಡ ಅಪ್ಪಣ್ಣ ಅವರು ಉದ್ಘಾಟಿಸುವರು. ಗ್ರಾ.ಪಂ. ಅಧ್ಯಕ್ಷ ಕೆ.ಬಿ. ಅಶೋಕ್ ಅವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಸಾಂಸ್ಕøತಿಕ ಸಮಿತಿ ಸಂಚಾಲಕಿ ಎ.ಟಿ. ಇಂದಿರಾ, ತಾ.ಪಂ. ಸದಸ್ಯೆ ಕು.ಸಂಧ್ಯಾ, ಕ.ಸಾ.ಪ. ನಿರ್ದೇಶಕ ಎಂ.ಎಸ್. ಜಯಚಂದ್ರ, ವಾರ್ತಾಧಿಕಾರಿ ಚಿನ್ನಸ್ವಾಮಿ ಉಪಸ್ಥಿತರಿರುವರು.