ಗೋಣಿಕೊಪ್ಪ ವರದಿ, ಜು. 30: ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ವತಿಯಿಂದ ಅಜ್ಜಮಾಡ ಕುಟುಂಬಸ್ಥರಿಗೆ ಕಲಾ ಪರಿಕರಗಳನ್ನು ವಿತರಣೆ ಮಾಡಲಾಯಿತು. ಕುರ್ಚಿ ಗ್ರಾಮದ ಅಜ್ಜಮಾಡ ಐನ್‍ಮನೆಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ 4 ದುಡಿ ಹಾಗೂ 12 ಜೊತೆ ಕೋಲು ವಿತರಿಸಲಾಯಿತು.

ಕೊಡವ ಅಕಾಡೆಮಿ ಅಧ್ಯಕ್ಷ ಪೆಮ್ಮಂಡ ಪೊನ್ನಪ್ಪ ವಿತರಿಸಿ ಮಾತನಾಡಿ, ಕೊಡವರ ಆಚರಣೆಯಲ್ಲಿ ದುಡಿ ಪ್ರಮುಖ ಪಾತ್ರವಹಿಸುತ್ತದೆ. ಪುತ್ತರಿ ಕೋಲಾಟ್‍ಗೆ ಬಳಕೆ ಮಾಡುವ ಕೋಲು ನೀಡಲಾಗುತ್ತಿದೆ. ಹಿಂದಿನ ಆಚರಣೆಯನ್ನು ಉಳಿಸಿಕೊಳ್ಳಲು ಅಕಾಡೆಮಿ ಪರಿಕರ ವಿತರಣೆ ಕಾರ್ಯದಲ್ಲಿ ತೊಡಗಿಕೊಂಡಿದೆ ಎಂದರು. ಈ ಸಂದರ್ಭ ಅಜ್ಜಮಾಡ ಕುಟುಂಬದ ಅಧ್ಯಕ್ಷ ಲವ ಕುಶಾಲಪ್ಪ, ಕಾರ್ಯದರ್ಶಿ ಅಜ್ಜಮಾಡ ಬೋಪಣ್ಣ, ಖಜಾಂಚಿ ಚಂಗಪ್ಪ, ಕೊಡವ ಅಕಾಡೆಮಿ ಸದಸ್ಯರುಗಳಾದ ಅಜ್ಜಮಾಡ ಕುಶಾಲಪ್ಪ, ತೋರೇರ ಮುದ್ದಯ್ಯ, ಹಂಚೇಟೀರ ಮನು, ಬೊಳ್ಳಜೀರ ಅಯ್ಯಪ್ಪ, ಚಂಗುಲಂಡ ಸೂರಜ್ ಉಪಸ್ಥಿತರಿದ್ದರು.