ಸಿದ್ದಾಪುರ, ಜು. 30: ವೀರಾಜಪೇಟೆ ತಾಲೂಕು ಸಿ.ಐ.ಟಿಯು ಪ್ರಥಮ ಸಮ್ಮೇಳನ ಸಿದ್ದಾಪುರದ ಎಸ್.ಎನ್.ಡಿ.ಪಿ ಸಭಾಂಗಣದಲ್ಲಿ ನಡೆಯಿತು.

ಸಭೆಯ ಅಧ್ಯಕ್ಷತೆಯನ್ನು ಸಿ.ಐ.ಟಿ.ಯು ಸಂಘಟನೆಯ ಜಿಲ್ಲಾಧ್ಯಕ್ಷ ಡಾ. ದುರ್ಗಪ್ರಸಾದ್ ವಹಿಸಿದ್ದರು. ಸಿ.ಐ.ಟಿ.ಯು. ಸಂಘಟನೆಯ ರಾಜ್ಯ ಉಪಾಧ್ಯಕ್ಷ ಜಯರಾಂ ಭಾಗವಹಿಸಿ, ಸದಸ್ಯರಿಗೆ ಸಂಘಟನೆಯ ಬಗ್ಗೆ ಮಾಹಿತಿಯನ್ನು ನೀಡಿದರು.

ಈ ಸಂದರ್ಭ ತಾಲೂಕು ಸಮಿತಿಯ ನೂತನ ಪದಾಧಿಕಾರಿಗಳ ಆಯ್ಕೆ ನಡೆದಿದ್ದು, ಅಧ್ಯಕ್ಷರಾದ ರಾಚಪ್ಪಾಜಿ, ಕಾರ್ಯದರ್ಶಿಯಾಗಿ ಎ.ಸಿ. ಸಾಬು, ಖಜಾಂಚಿಯಾಗಿ ಜಾನಕಿ, ಉಪಾಧ್ಯಕ್ಷರಾಗಿ ಓಮನ ಹಾಗೂ ಶಾಜಿ ರಮೇಶ್, ಉಪ ಕಾರ್ಯದರ್ಶಿಗಳಾಗಿ ಡೇವಿಡ್ ಹಾಗೂ ಹರೀಶ್ ಆಯ್ಕೆಯಾದರು. ಸಮಿತಿ ಸದಸ್ಯರಾಗಿ ಕೆ. ವಿನೋದ್, ಎನ್. ಮಹೇಶ್, ಅಬ್ದುಲ್ ರಹಮಾನ್, ಟಿ.ವಿ. ಮಧು ಹಾಗೂ ನ್ಯಾನ್ಸಿ ಅವರನ್ನು ಆಯ್ಕೆ ಮಾಡಲಾಯಿತು.

ಈ ಸಂದರ್ಭ ಸಂಘಟನೆಯ ಪದಾಧಿಕಾರಿಗಳಾದ ಹೆಚ್.ಬಿ. ರಮೇಶ್, ಮಹದೇವ್, ಕೃಷ್ಣ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.