ಶನಿವಾರಸಂತೆ, ಜು. 28: ರೋಟರಿ ಸಾಮಾಜಿಕ ಜವಾಬ್ದಾರಿ ಯನ್ನು ಹೆಚ್ಚಿಸುವಂತಹ ಜಾಗತಿಕ ಸಂಸ್ಥೆಯಾಗಿದೆ ಎಂದು ರೋಟರಿ ವಲಯ 6ರ ಮಾಜಿ ಸಹಾಯಕ ಗÀವರ್ನರ್ ಸದಾನಂದ್ ಅಭಿಪ್ರಾಯಪಟ್ಟರು.
ಸಮೀಪದ ಕೊಡ್ಲಿಪೇಟೆ ಮರಡಿಕೆರೆ ರೆಸಾಟ್ರ್ಸ್‍ನಲ್ಲಿ ನಡೆದ ಹೇಮಾವತಿ ಕೊಡ್ಲಿಪೇಟೆ ರೋಟರಿ ಸಂಸ್ಥೆಯ ಪದಗ್ರಹಣ ಹಾಗೂ ಕೌಟುಂಬಿಕ ಸಮ್ಮಿಲನ ಕಾರ್ಯಕ್ರಮ ದಲ್ಲಿ ಅವರು ಮಾತನಾಡಿದರು.
ಸಂಸ್ಥೆಯ ಸದಸ್ಯರಾಗುವ ಮೂಲಕ ಸಾಮಾಜಿಕ ಸೇವಾ ಕಾರ್ಯಗಳೊಂದಿಗೆ ಜಾಗತಿಕ ಸಂಸ್ಥೆಯ ಸದಸ್ಯರಾದ ತೃಪ್ತಿ ದೊರೆಯುತ್ತದೆ. ಗ್ರಾಮೀಣ ಪ್ರದೇಶದಲ್ಲಿ ವಿಜ್ಞಾನ ಪಠ್ಯಕ್ಕೆ ಸಂಬಂಧಿಸಿದ ಪರಿಕರಗಳ ಸೌಲಭ್ಯ ವಂಚಿತ ಸರಕಾರಿ ಶಾಲೆಗಳನ್ನು ಗುರುತಿಸಿ ಜಿಲ್ಲೆಯ 3 ತಾಲೂಕುಗಳಿಗೆ ಒಂದೊಂದು ಸಂಚಾರಿ ವಾಹನವನ್ನು ನೀಡಲಾಗಿದೆ. ಗ್ರಾಮೀಣ ವಿದ್ಯಾರ್ಥಿಗಳಿಗೂ ಉತ್ತಮ ಶಿಕ್ಷಣ ಒದಗಿಸುವ ಸಂಸ್ಥೆಯ ಯೋಜನೆ ಫಲಕಾರಿಯಾಗಿದೆ ಎಂದರು.
ಸಹಾಯಕ ಗವರ್ನರ್ ಪಿ. ನಾಗೇಶ್ ಮಾತನಾಡಿ, ಇಂದಿನ ಆಧುನಿಕ ದಿನಗಳಲ್ಲಿ ಮನುಷ್ಯ ಮಾನವೀಯ ಗುಣಗಳನ್ನೇ ಮರೆತು ಯಾಂತ್ರಿಕ ಬದುಕು ಸಾಗಿಸುತ್ತಿದ್ದಾನೆ. ಹೀಗಿರುವಾಗ ರಾಷ್ಟ್ರಕವಿ ಕುವೆಂಪು ಸಾರಿದ ವಿಶ್ವ ಮಾನವ ಸಂದೇಶ ರೋಟರಿ ಸಂಸ್ಥೆಯಲ್ಲಿ ಅಕ್ಷರಶಃ ಪಾಲನೆಯಾಗುತ್ತಿದೆ ಎಂದರು.
ರೋಟರಿ ವಲಯ ಕಾರ್ಯದರ್ಶಿ ಎಚ್.ಟಿ. ಅನಿಲ್, ವಲಯ ಸೇನಾನಿ ಎಚ್.ಎನ್. ವಸಂತ್ ಕುಮಾರ್, ಸದಸ್ಯತ್ವ ಸಂಘಟನಾಕಾರ ಪಿ.ಕೆ. ರವಿ ಮಾತನಾಡಿದರು.
ಈ ಸಂದರ್ಭ ಹೇಮಾವತಿ ಕೊಡ್ಲಿಪೇಟೆ ರೋಟರಿ ಸಂಸ್ಥೆಯ ನೂತನ ಅಧ್ಯಕ್ಷರಾಗಿ ಎಚ್.ಜೆ. ಪ್ರವೀಣ್, ಕಾರ್ಯದರ್ಶಿಯಾಗಿ ಎಚ್.ಎಂ. ದಿವಾಕರ್, ಸದಸ್ಯರಾಗಿ ಸುಬ್ರಹ್ಮಣ್ಯಾಚಾರ್, ಸಿದ್ದೇಶ್, ದಿವಾಕರ್ ಅಧಿಕಾರ ಸ್ವೀಕರಿಸಿದರು.
ಸೋಮವಾರಪೇಟೆ ರೋಟರಿ ಹಿಲ್ಸ್ ಕೊಡ್ಲಿಪೇಟೆ, ಶನಿವಾರಸಂತೆ, ಆಲೂರು ಸಿದ್ದಾಪುರ, ಕುಶಾಲನಗರ ರೋಟರಿ ಸದಸ್ಯರು ಉಪಸ್ಥಿತರಿದ್ದರು. ಮಹಿಳೆಯರು ಮತ್ತು ಮಕ್ಕಳಿಗೆ ವಿವಿಧ ಮನೋರಂಜನಾ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು.