ಮಡಿಕೇರಿ, ಜು. 28: ಕೌಶಲ್ಯ ಅಭಿವೃದ್ಧಿ ಯೋಜನೆಯಡಿ ಪ್ರವಾಸೋದ್ಯಮ ಇಲಾಖೆಯ ಸಹಯೋಗದೊಂದಿಗೆ ಅರ್ಹ ನಿರುದ್ಯೋಗಿ ಯುವಕ-ಯುವತಿಯರಿಗೆ ಕೌಶಲ್ಯ ಅಭಿವೃದ್ಧಿ ತರಬೇತಿಯನ್ನು ಉಚಿತವಾಗಿ ಪ್ರಾರಂಭಿಸಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ಫುಡ್ ಪ್ರೊಡಕ್ಷನ್ 18 ವಾರ, ಬೇಕರಿ ಅಂಡ್ ಕನ್‍ಫೆಕ್ಷನರಿ 6 ವಾರ, ಫುಡ್ ಅಂಡ್ ಬೆವರೇಜ್ ಸರ್ವಿಸ್ 12 ವಾರ, ಫ್ರೆಂಟ್ ಆಫೀಸ್ 14 ವಾರ ಹಾಗೂ ಹೌಸ್ ಕೀಪಿಂಗ್ 12 ವಾರಗಳ ತರಬೇತಿ ನೀಡಲಾಗುವದು. ತರಬೇತಿಯ ಅವಧಿಯಲ್ಲಿ ಮಧ್ಯಾಹ್ನದ ಊಟ, ಸಮವಸ್ತ್ರ ಹಾಗೂ ಕಲಿಕಾ ಸಾಮಗ್ರಿಗಳನ್ನು ಉಚಿತವಾಗಿ ನೀಡಲಾಗುವದು. ಯಶಸ್ವಿಯಾಗಿ ತರಬೇತಿ ಪೂರ್ಣಗೊಳಿಸಿದ ಅಭ್ಯರ್ಥಿಗಳಿಗೆ ಪ್ರವಾಸೋದ್ಯಮ ಇಲಾಖೆ ಹಾಗೂ ಫುಡ್ ಕ್ರಾಫ್ಟ್ ಸಂಸ್ಥೆಯಿಂದ ಜಂಟಿಯಾಗಿ ಪ್ರಮಾಣಪತ್ರ ನೀಡಲಾಗುವದು. ಶೇ. 80 ಪ್ರಾಯೋಗಿಕ ತರಬೇತಿ, ಪಾರ್ಟ್ ಟೈಂ ಕೆಲಸದ ವ್ಯವಸ್ಥೆ. ಶೇ. 100 ಉದ್ಯೋಗಾವಕಾಶ. ತರಬೇತಿಯು ಫುಡ್ ಕ್ರಾಫ್ಟ್ ಇನ್ಸ್‍ಸ್ಟಿಟ್ಯೂಟ್, ದಸರಾ ವಸ್ತು ಪ್ರದರ್ಶನ ಆವರಣ, ದೊಡ್ಡಕೆರೆ ಮೈದಾನ, ಇಂದಿರಾನಗರ, ಮೈಸೂರು-570010. ದೂ. 6362018821, 0821-2445388, 2974388 ಇಲ್ಲಿ ನಡೆಯಲಿದೆ ಎಂದು ಪ್ರವಾಸೋದ್ಯಮ ಇಲಾಖೆಯ ಉಪ ನಿರ್ದೇಶಕರು ಹಾಗೂ ಫುಡ್ ಕ್ರಾಫ್ಟ್ ಇನ್‍ಸ್ಟಿಟ್ಯೂಟ್‍ನ ಪ್ರಾಂಶುಪಾಲ ಹೆಚ್.ಪಿ. ಜನಾರ್ಧನ್ ತಿಳಿಸಿದ್ದಾರೆ.