ಮಡಿಕೇರಿ, ಜು. 28: ಕೊಡಗಿನಲ್ಲಿ ಕಕ್ಕಡ ಮಾಸ ಅಡಿಯಿಡುವದರೊಂದಿಗೆ ಜುಲೈ ತಿಂಗಳು ಮುಗಿಯುತ್ತಾ ಬಂದರೂ; ಮುಂಗಾರು ಮಳೆ ಕ್ಷೀಣಗೊಂಡಿರುವ ಪರಿಣಾಮ ಭತ್ತದ ಗದ್ದೆಗಳಲ್ಲಿ ನೀರಿನ ಅಭಾವದಿಂದ; ರೈತರು ಆಮೆ ವೇಗದಲ್ಲಿ ನಾಟಿಗೆ ಮುಂದಾಗಿದ್ದಾರೆ. ನೀರಿನ ಅಭಾವದಿಂದ ಈಗಷ್ಟೇ ಸಸಿಮಡಿ ಸಿದ್ಧಗೊಳಿಸಲಾಗುತ್ತಿದೆ.ಅಲ್ಲಲ್ಲಿ ಸಸಿ ಮಡಿ ಕೈಗೆ ಬಂದಿದ್ದರೂ ಗದ್ದೆಗಳಲ್ಲಿ ನಾಟಿಗೆ ನೀರಿನ ಅಭಾವ ಎದುರಾಗಿದೆ. ಹೀಗಾಗಿ ಕೆಲವೆಡೆ ಕೆರೆ, ತೋಡುಗಳ ನೀರನ್ನು ಗದ್ದೆಗೆ ಹಾಯಿಸುವ ಮೂಲಕ ನಾಟಿಗೆ ಚಾಲನೆ ನೀಡಲಾಗಿದೆ. ಸಸಿಮಡಿ ಅಗಡಿಗಳಲ್ಲಿ ಪೈರು ತೆಗೆಯಲು ನೀರಿಲ್ಲದೆ ಕೃಷಿ ಹಿನ್ನೆಡೆಯಾಗಿದೆ.

ಮುಂದುವರಿದ ಆತಂಕ : ಪ್ರಸಕ್ತ ವರ್ಷದ ಜನವರಿಯಿಂದ ಇಂದಿನ ತನಕ ಜಿಲ್ಲೆಯಲ್ಲಿ ಮುಂಗಾರು ಕೊರತೆಯಿಂದಾಗಿ; ಕೇವಲ ಸರಾಸರಿ 36 ಇಂಚು ಮಳೆಯಾಗಿದ್ದು; ಮಾನಿಗದ್ದೆಗಳನ್ನು ಉಳುಮೆ ಮಾಡಿದ್ದರೂ ಕೂಡ ನಾಟಿ ಕಾರ್ಯ ಸಾಧ್ಯವಾಗಿಲ್ಲ. ಹೀಗಾಗಿ ಅನ್ನದಾತನಲ್ಲಿ ಆತಂಕ ಮುಂದು ವರಿದಿದೆ.

(ಮೊದಲ ಪುಟದಿಂದ) ತಾಲೂಕುವಾರು ಮಳೆಯಲ್ಲಿಯೂ ಭಾರೀ ವ್ಯತ್ಯಾಸ ಎದುರಾಗಿದೆ. ಕಳೆದ ವರ್ಷ ಈ ಹೊತ್ತಿಗೆ ಮಡಿಕೇರಿ ತಾಲೂಕಿನಲ್ಲಿ 140 ಇಂಚು ಮಳೆಯಾಗಿತ್ತು. ಈ ಬಾರಿ (ಮೊದಲ ಪುಟದಿಂದ) ತಾಲೂಕುವಾರು ಮಳೆಯಲ್ಲಿಯೂ ಭಾರೀ ವ್ಯತ್ಯಾಸ ಎದುರಾಗಿದೆ. ಕಳೆದ ವರ್ಷ ಈ ಹೊತ್ತಿಗೆ ಮಡಿಕೇರಿ ತಾಲೂಕಿನಲ್ಲಿ 140 ಇಂಚು ಮಳೆಯಾಗಿತ್ತು. ಈ ಬಾರಿ ಕೇವಲ 37.79 ಇಂಚು ಮಳೆ ಯಾಗಿದೆ. ಇನ್ನು ಸೋಮವಾರ ಪೇಟೆ ತಾಲೂಕಿನಲ್ಲಿ ಕಳೆದ ವರ್ಷ ಈ ಅವಧಿಗೆ ಸರಾಸರಿ 59 ಇಂಚು ಮಳೆ ದಾಖಲಾಗಿತ್ತು. ಪ್ರಸಕ್ತ ಸಾಲಿನಲ್ಲಿ ಜುಲೈ ಕೊನೆಗೆ ಕೇವಲ 20.92 ಇಂಚು ಮಳೆಯಾಗಿದೆ.

ಹಾರಂಗಿ ಸಾಕ್ಷ್ಯ : ವರ್ಷಂಪ್ರತಿ ಮುಂಗಾರುವಿನಲ್ಲಿ ಈ ವೇಳೆಗೆ ದಕ್ಷಿಣ ಕೊಡಗಿನ ಲಕ್ಷ್ಮಣತೀರ್ಥ, ಬರಪೊಳೆ, ಕೊಡಗಿನ ಜೀವನದಿ ಕಾವೇರಿ ಸೇರಿದಂತೆ ಉತ್ತರ ಕೊಡಗಿನ ಹಟ್ಟಿಹೊಳೆ, ಮಾದಾಪುರ ಹೊಳೆ ಸಹಿತ ಇತರ ತೋಡುಗಳು ತುಂಬಿ ಹರಿಯುತ್ತಿದ್ದವು. ಜಿಲ್ಲೆಯ ಏಕೈಕ ಅಣೆಕಟ್ಟು ಹಾರಂಗಿ ಮೈದುಂಬಿ ಕೊಂಡು ಕೊಡಗಿನ ಮಳೆಗೆ ಸಾಕ್ಷಿಯಂತಿತ್ತು. ಪ್ರಸಕ್ತ ಈ ಅಣೆಕಟ್ಟೆಯಲ್ಲಿ ಗರಿಷ್ಠ 2859 ಅಡಿಗಳಿಗಿಂತಲೂ 25.25 ಅಡಿ ನೀಡಿ ಕಡಿಮೆಯಿದೆ. ಜಲಾಶಯ ದಲ್ಲಿ ಕೇವಲ 2833.75 ಅಡಿ ನೀರು ಸಂಗ್ರಹವಾಗಿದೆ.

ಹೀಗಾಗಿ ಜಿಲ್ಲೆಯಲ್ಲಿ ನಾಟಿ ಕಾರ್ಯಕ್ಕೆ ತೀವ್ರ ಹಿನ್ನಡೆಯೊಂದಿಗೆ ಕಳೆದ ವರ್ಷ ಆಗಸ್ಟ್‍ನಲ್ಲಿ ಎದುರಾಗಿದ್ದ ಪ್ರಾಕೃತಿಕ ವಿಕೋಪದ ಭಯ ಒಂದೆಡೆಯಾದರೆ; ಕೈಕೊಟ್ಟಿರುವ ಮುಂಗಾರು ಹಿನ್ನೆಡೆ ಅನ್ನದಾತನಲ್ಲಿ ಇನ್ನಷ್ಟು ಆತಂಕ ಹೆಚ್ಚಿಸಿದೆ.