ಸೋಮವಾರಪೇಟೆ, ಜು. 29: ಇಲ್ಲಿನ ಎಸ್‍ವೈಎಸ್ ಸಂಘಟನೆಯಿಂದ ಪಟ್ಟಣದ ಕರ್ಕಳ್ಳಿಯಲ್ಲಿ ವನಮಹೋತ್ಸವ ಕಾರ್ಯಕ್ರಮ ನಡೆಯಿತು. ಸಂಘಟನೆಯ ಕಚೇರಿ ಆವರಣದಲ್ಲಿ ವಿವಿಧ ಜಾತಿಯ ಗಿಡಗಳನ್ನು ನೆಡಲಾಯಿತು. ಇದರೊಂದಿಗೆ ಎಸ್‍ವೈಎಸ್‍ನ ವಿವಿಧ ಘಟಕಗಳಿಗೆ ತಲಾ 25 ಸಸಿಗಳನ್ನು ವಿತರಿಸಲಾಯಿತು. ಈ ಸಂದರ್ಭ ವಲಯ ಅರಣ್ಯಾಧಿಕಾರಿ ಲಕ್ಷ್ಮೀಕಾಂತ್, ಎಸ್‍ವೈಎಸ್ ಜಿಲ್ಲಾಧ್ಯಕ್ಷ ಅಬ್ದುಲ್ ಹಫೀಳ್ ಸಅದಿ, ಎಸ್‍ಎಸ್‍ಎಫ್ ರಾಷ್ಟ್ರೀಯ ಕಾರ್ಯದರ್ಶಿ ಅಬೂಬಕರ್ ಸಿದ್ದೀಕ್ ಮೋಂಟುಗೋಳಿ, ಎಸ್‍ಎಸ್‍ಎಫ್ ಜಿಲ್ಲಾಧ್ಯಕ್ಷ ಅಬ್ದುಲ್ ಅಜೀಜ್ ಸಖಾಫಿ, ಜಿ.ಪಂ. ಸದಸ್ಯ ಲತೀಫ್, ಮಹಮ್ಮದ್ ಆಲಿ ಸಖಾಫಿ, ಸಮ್ಮದ್ ನಿಜಾಮಿ, ಕರ್ಕಳ್ಳಿ ಅಬ್ಬಾಸ್ ಸೇರಿದಂತೆ ಇತರರು ಉಪಸ್ಥಿತರಿದ್ದರು.