ಮಡಿಕೇರಿ, ಜು. 28: ನಗರದ ಶ್ರೀ ರಾಜರಾಜೇಶ್ವರಿ ವಿದ್ಯಾಸಂಸ್ಥೆಯಲ್ಲಿ ವಿದ್ಯಾಸಂಸ್ಥೆಯ ಸಂಸ್ಥಾಪಕ ಕಾರ್ಯದರ್ಶಿ ದಿ. ಡಾ. ಹೆಚ್. ವಾಸುದೇವ್ ಅವರ ಜನ್ಮ ದಿನಾಚರಣೆ ಪ್ರಯುಕ್ತ ಮಡಿಕೇರಿ ರೋಟರಿ ಕ್ಲಬ್, ಅರಣ್ಯ ಇಲಾಖೆ ಮತ್ತು ವಿದ್ಯಾಸಂಸ್ಥೆಯ ಸಂಯುಕ್ತ ಆಶ್ರಯದಲ್ಲಿ ವನಮಹೋತ್ಸವ ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ಮಡಿಕೇರಿ ರೋಟರಿ ಕ್ಲಬ್‍ನ ಅಧ್ಯಕ್ಷರು ರೊಟೇರಿಯನ್ ರತನ್ ತಮ್ಮಯ್ಯ, ಅರಣ್ಯ ಅಧಿಕಾರಿ ಜಗದೀಶ್, ರೋಟೆರಿಯನ್ ಕೆ.ಸಿ. ಕಾರ್ಯಪ್ಪ, ರೊಟೇರಿಯನ್ ಸುರೇಶ್ ಚಂಗಪ್ಪ, ಎಂ.ಎಂ. ಕಾರ್ಯಪ್ಪ, ಅನಿಲ್ ಕೃಷ್ಣನೀ, ಲಲಿತಾ ರಾಘವ, ಅರಣ್ಯ ಇಲಾಖೆಯ ಬಾಬುರಾವ್, ವಿದ್ಯಾಸಂಸ್ಥೆಯ ಮೇನೆಜಿಂಗ್ ಟ್ರಸ್ಟಿ ಸಚಿನ್ ವಾಸುದೇವ್, ಸಂಸ್ಥೆಯ ಉಪಾಧ್ಯಕ್ಷ ದಾಕ್ಷಾಯಿಣಿ ವಾಸುದೇವ್, ನಿರ್ದೇಶಕ ದೇವರಾಜ್, ನಗರಸಭೆ ಮಾಜಿ ಸದಸ್ಯರು ಮತ್ತು ಮೂಡಾದ ಮಾಜಿ ಅಧ್ಯಕ್ಷರು ಹಾಗೂ ಆಡಳಿತ ಮಂಡಳಿ ಸದಸ್ಯ ಚುಮ್ಮಿ ದೇವಯ್ಯ ಮುಂತಾದ ಗಣ್ಯರು ಭಾಗವಹಿಸಿದ್ದರು.
ಮಡಿಕೇರಿ ರೋಟರಿ ಕ್ಲಬ್ ಅಧ್ಯಕ್ಷ ರತನ್ ತಮ್ಮಯ್ಯ, ಪಿ.ಡಿ.ಓ. ಸುರೇಶ್ ಚಂಗಪ್ಪ, ಅರಣ್ಯ ಇಲಾಖೆ ಅಧಿಕಾರಿ ಜಗದೀಶ್, ಸಂಸ್ಥೆಯ ಮ್ಯಾನೇಜಿಂಗ್ ಟ್ರಸ್ಟಿ ಸಚಿನ್ ವಾಸುದೇವ್ ವನಮಹೋತ್ಸವದ ಕುರಿತು ವಿದ್ಯಾರ್ಥಿಗಳಿಗೆ ತಿಳಿಸಿದರು. ಪ್ರಾಂಶುಪಾಲ ಪಿ.ಕೆ. ಮಂದಣ್ಣ ಸ್ವಾಗತಿಸಿ, ಆಂಗ್ಲ ಮಾಧ್ಯಮ ಮುಖ್ಯೋಪಾಧ್ಯಾಯಿನಿ ತಾಜಿನಾ ಫಾತಿಮಾ ನಿರೂಪಿಸಿ, ಕನ್ನಡ ಮಾಧ್ಯಮ ಮುಖ್ಯೋಪಾಧ್ಯಾಯ ವೆಂಕಟೇಶ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಕಾರ್ಯಕ್ರಮದ ಪ್ರಯುಕ್ತ ವಿದ್ಯಾಸಂಸ್ಥೆಯ ಆವರಣ ಮತ್ತು ಸುತ್ತಲಿನ ಅರಣ್ಯದಲ್ಲಿ ಹಲವಾರು ರೀತಿಯ ಗಿಡಗಳನ್ನು ನೆಡಲಾಯಿತು.