*ಗೋಣಿಕೊಪ್ಪಲು, ಜು. 29: 72ನೇ ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ಕೈಕೇರಿಯ ಪತಾಂಜಲಿ ಯೋಗ ಕೇಂದ್ರ, ಗೋಣಿಕೊಪ್ಪಲು ವಿವೇಕ ಜಾಗೃತ ಬಳಗ ವತಿಯಿಂದ ಗೋಣಿಕೊಪ್ಪಲು ಸರ್ಕಾರಿ ಆರೋಗ್ಯ ಕೇಂದ್ರದಲ್ಲಿ ರಕ್ತದಾನ ಶಿಬಿರವನ್ನು ನಡೆಸಲಾಗುವದು ಎಂದು ಸಂಚಾಲಕ ಕುಮಾರ್ ಮಾಹಿತಿ ನೀಡಿದ್ದಾರೆ. ಅಂದು ಬೆಳಿಗ್ಗೆ 9.30ರಿಂದ ಮಧ್ಯಾಹ್ನ 1.30ರ ಸಮಯದವರೆಗೆ ರಕ್ತದಾನ ಶಿಬಿರ ನಡೆಯಲಿದೆ ಎಂದು ತಿಳಿಸಿದರು.