*ಗೋಣಿಕೊಪ್ಪಲು, ಜು.29: ಅಂತರಾಷ್ಟ್ರೀಯ ಹುಲಿ ಸಂರಕ್ಷಣಾ ದಿನಾಚರಣೆ ಅಂಗವಾಗಿ ನಾಗರಹೊಳೆ ಹುಲಿ ಸಂರಕ್ಷಣಾ ಯೋಜನೆ ವತಿಯಿಂದ ಆನೆಚೌಕೂರು ವನ್ಯಜೀವಿ ವಲಯದ ಸಹಕಾರದೊಂದಿಗೆ ತಿತಿಮತಿ ಪ್ರೌಢಶಾಲೆಯಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಹುಲಿ ಯೋಜನೆ ಕ್ಷೇತ್ರ ನಿರ್ದೇಶಕ ನಾರಾಯಣಸ್ವಾಮಿ ಅವರ ಮಾರ್ಗದರ್ಶನದಲ್ಲಿ ಆನೆಚೌಕೂರು ವಲಯ ಅರಣ್ಯಾಧಿಕಾರಿ ಶಿವಾನಂದ ಲಿಂಗಾಣಿ ಕಾರ್ಯಕ್ರಮ ಆಯೋಜಿಸಿದ್ದರು. ವಿದ್ಯಾರ್ಥಿಗಳಿಗೆ ಹುಲಿಯ ಮಹತ್ವ, ಅದರ ಸಂರಕ್ಷಣೆ ಹಾಗೂ ಅದರ ಬಗ್ಗೆ ವಹಿಸಬೇಕಾದ ಎಚ್ಚರದ ಬಗ್ಗೆ ಮಾಹಿತಿ ನೀಡಲಾಯಿತು. ಡಿಆರ್ ಎಫ್‍ಒ ಶಿವಪ್ರಸಾದ್, ಸತೀಶ್, ಸಂದೀಪ್, ಯೋಗೇಶ್ವರಿ,ಶಿವಲಿಂಗ ಹಾಜರಿದ್ದರು.