ಚೆಟ್ಟಳ್ಳಿ, ಜು. 29: ಕರ್ನಾಟಕ ರಾಜ್ಯ ಸುನ್ನಿ ಸ್ಟುಡೆಂಟ್ಸ್ ಫೆಡರೇಶನ್ ಕೌನ್ಸಿಲ್ ಕಾರ್ಯಕ್ರಮವು ಗುಂಡಿಗರೆ ಶಾದಿ ಮಹಲ್ನಲ್ಲಿ ನಡೆಯಿತು. ಡಿವಿಷನ್ ಸಮಿತಿ ಅಧ್ಯಕ್ಷ ಝುಬೈರ್ ಸಅದಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಗುಂಡಿಗರೆ ಜುಮಾ ಮಸೀದಿ ಖತೀಬ ಅಝೀಝ್ ಸಖಾಫಿ ದುಆ ನೆರವೇರಿಸಿ ಉದ್ಘಾಟಿಸಿದರು.
ಎಸ್ಸೆಸ್ಸೆಫ್ ಕೊಡಗು ಜಿಲ್ಲಾ ಸಮಿತಿ ಕ್ಯಾಂಪಸ್ ಕಾರ್ಯದರ್ಶಿ ಮುಜೀಬ್ ಕೊಂಡಂಗೇರಿ, ಸದಸ್ಯ ರಫೀಕ್ ಲತೀಫಿ ತರಬೇತಿ ನೀಡಿದರು. ಸಮಿತಿ ಪ್ರ. ಕಾರ್ಯದರ್ಶಿ ಯೂಸುಫ್ ಝೈನಿ ಅರ್ಧ ವಾರ್ಷಿಕ ವರದಿ ಹಾಗೂ ಕೋಶಾಧಿಕಾರಿ ಜಲೀಲ್ ಅಮೀನಿ ಲೆಕ್ಕ ಪತ್ರ ಮಂಡಿಸಿದರು. ನಿಝಾಂ ಮಟ್ಟಂ ವರದಿ ಮಂಡಿಸಿದರು.
ಎಸ್ಸೆಸ್ಸೆಫ್ ರಾಜ್ಯ ಸಮಿತಿ ಸದಸ್ಯ ರಫೀಕ್ ಉಪಾಧ್ಯಕ್ಷರುಗಳಾದ ಹಾರಿಸ್ ಸಖಾಫಿ , ಶಕೀರ್ ಮಾಸ್ಟರ್, ಜಿಲ್ಲಾ ಸಮಿತಿ ಕಾರ್ಯದರ್ಶಿ ನಿಸಾರ್, ಜಿಲ್ಲಾ ಸದಸ್ಯರಾದ ಉಬೈದ್, ಸಿದ್ದೀಕ್ , ಜುನೈದ್, ಅಬ್ಬಾಸ್ ಹಾಜಿ, ಎಅಹ್ಮದ್ ಮದನಿ, ಶಿಹಾಬ್ ಸಖಾಫಿ ಇದ್ದರು. ಕಾರ್ಯದರ್ಶಿ ಯೂಸುಫ್ ಝೈನಿ ಸ್ವಾಗತಿಸಿ, ಕಾರ್ಯದರ್ಶಿ ಅಶ್ಕರ್ ಝೈನಿ ವಂದಿಸಿದರು.