ಸೋಮವಾರಪೇಟೆ, ಜು. 27: ಇಲ್ಲಿನ ರೋಟರಿ ಸಂಸ್ಥೆಯ ಜೀವ ರಕ್ಷ ಯೋಜನೆಯಡಿ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯ ಒಳರೋಗಿಗಳಿಗೆ ಹಣ್ಣುಹಂಪಲು ವಿತರಿಸಲಾಯಿತು.

ಈ ಸಂದರ್ಭ ರೋಟರಿ ಅಧ್ಯಕ್ಷ ಡಿ.ಪಿ. ರಮೇಶ್, ಸಹಾಯಕ ರಾಜ್ಯಪಾಲ ಪಿ. ನಾಗೇಶ್, ಮಾಜಿ ಸಹಾಯಕ ರಾಜ್ಯಪಾಲ ಬಿ.ಎಸ್. ಸದಾನಂದ್, ನಿಕಟಪೂರ್ವ ಅಧ್ಯಕ್ಷ ಪಿ.ಕೆ. ರವಿ, ಹೆಚ್.ಸಿ. ನಾಗೇಶ್, ಕೆ.ಡಿ. ಬಿದ್ದಪ್ಪ, ಕಾರ್ಯದರ್ಶಿ ಎಂ.ಎಂ. ಪ್ರಕಾಶ್ ಕುಮಾರ್ ಇದ್ದರು.