ಸೋಮವಾರಪೇಟೆ, ಜು. 27: ಪಟ್ಟಣದ ಶಾಖಾ ಗ್ರಂಥಾಲಯದಲ್ಲಿ ಸೇವೆ ಸಲ್ಲಿಸಿ ಇದೀಗ ನಿವೃತ್ತರಾಗಿರುವ ಗ್ರಂಥಪಾಲಕ ಕೆ.ವಿ.ಮೂರ್ತಿ ಅವರನ್ನು ಗ್ರಾಮ ಪಂಚಾಯಿತಿ ಗ್ರಂಥಾಲಯಗಳ ಮೇಲ್ವಿಚಾರಕರುಗಳು ಸನ್ಮಾನಿಸಿದರು.
ಆರೋಗ್ಯ ಇಲಾಖೆಯ ನಿವೃತ್ತ ಮೇಲ್ವಿಚಾರಕರಾದ ಎಂ.ಸಿ. ಲಲಿತ, ಗ್ರಂಥಾಲಯಗಳ ಮೇಲ್ವಿಚಾರಕರುಗಳಾದ ಗಂಗಮ್ಮ, ಚೇತನ, ಪುಷ್ಪಲತಾ, ಪದ್ಮಾವತಿ, ಹೇಮಾವತಿ ಅವರುಗಳು ಉಪಸ್ಥಿತರಿದ್ದರು. ಮೂರ್ತಿ ಅವರು ಸಕಲೇಶಪುರ ತಾಲೂಕಿನ ಕಲ್ಲಹಳ್ಳಿ ಗ್ರಾಮದವರಾಗಿದ್ದು, ಮಂಡ್ಯ, ಮದ್ದೂರು, ಸೋಮವಾರಪೇಟೆಯಲ್ಲಿ ಒಟ್ಟು 33 ವರ್ಷಗಳ ಸೇವೆ ಸಲ್ಲಿಸಿದ್ದಾರೆ. ಇಲಾಖೆಯ ಎರಡು ಸೇವಾ ಪ್ರಶಸ್ತಿಗಳನ್ನು ಗಳಿಸಿದ್ದಾರೆ.