ಮಡಿಕೇರಿ, ಜು. 27: ಪ್ರಸಕ್ತ ಶೈಕ್ಷಣಿಕ ಸಾಲಿನಲ್ಲಿ ದ್ವಿತೀಯ ಪಿಯುಸಿ ತರಗತಿಗಳಿಗೆ ದಾಖಲಾಗಲು ವಿದ್ಯಾರ್ಥಿಗಳ ಹಾಗೂ ಪೋಷಕರುಗಳ ಮನವಿ ಪುರಸ್ಕರಿಸಿ, ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಟಿಯಿಂದ ದ್ವಿತೀಯ ಪಿಯುಸಿ ತರಗತಿಗೆ ದಾಖಲಾಗಲು ಕೊನೆಯ ದಿನಾಂಕವನ್ನು ವಿಶೇಷ ದಂಡ ಶುಲ್ಕದೊಂದಿಗೆ (ರೂ.2890, ರೂ.2220+ ರೂ.670) ತಾ. 29 ರವರೆಗೆ ವಿಸ್ತರಿಸಲಾಗಿದೆ ಎಂದು ಪದವಿಪೂರ್ವ ಶಿಕ್ಷಣ ಇಲಾಖೆಯ ನಿರ್ದೇಶಕ ಕೆಂಚಪ್ಪ ತಿಳಿಸಿದ್ದಾರೆ.