ಅಮ್ಮತ್ತಿ, ಜು. 27: ಸ್ವಚ್ಛ ಮನಸ್ಸುಗಳು ಸೃಷ್ಟಿಯಾಗಲಿ ಎಂದು ನಿವೃತ್ತ ಕಂದಾಯ ನಿರೀಕ್ಷಕರಾದ ಟಿ.ಸಿ ಚಂದ್ರನ್ ಕರೆ ನೀಡಿದರು. ಅಮ್ಮತ್ತಿಯಲ್ಲಿ ನೂತವಾಗಿ ಲೋಕಾರ್ಪಣೆ ಗೊಂಡಿರುವ ಅಮ್ಮತ್ತಿ ಸ್ನೇಹಿತರ ಬಳಗದ ವತಿಯಿಂದ ಹಲವಾರು ಸಮಾಜಮುಖಿ ಕಾರ್ಯಕ್ರಮಗಳು ನಡೆಯುತ್ತಿದ್ದು, ಇದರ ಮುಂದುವರೆದ ಭಾಗವಾಗಿ ಅಮ್ಮತ್ತಿಯ ವಿವಿಧ ಶಾಲೆಗಳ ವಿದ್ಯಾರ್ಥಿಗಳಿಗೆ “ಸ್ವಚ್ಛತೆಯಲ್ಲಿ ಯುವ ಪೀಳಿಗೆಯ ಪಾತ್ರ” ಎಂಬ ವಿಷಯದಲ್ಲಿ ಭಾಷಣ ಸ್ಪರ್ಧೆಯಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದ ಅವರು ಸ್ವಚ್ಛ ಮನಸ್ಸುಗಳ ಸೃಷ್ಟಿ ದೇಶದ ಅಭಿವೃದ್ಧಿಗೆ ಕಾರಣವಾಗಲಿದೆ ಎಂದರು.

ಅಮ್ಮತ್ತಿ ಪ್ರೌಢ ಶಾಲೆಯ ಮುಖ್ಯೋಪಾಧ್ಯಾಯ ಸದಾನಂದ ಅವರು ಮಾತನಾಡಿದರು. ಸಭಾಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಹೆಚ್.ಎ. ಅಭಿಜಿತ್ ವಹಿಸಿದ್ದರು. ಸಂಘದ ಉಪಾಧ್ಯಕ್ಷ ಆಶಿಫ್ ಪ್ರಾಸ್ತಾವಿಕ ನುಡಿಯಾಡಿದರು.

ಸ್ಪರ್ಧೆಯಲ್ಲಿ ವಿವಿಧ ಶಾಲೆಗಳ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಅಮ್ಮತ್ತಿ ಪ್ರೌಢಶಾಲೆಯ ಹರ್ಶಿತ್ ಪ್ರಥಮ ಸ್ಥಾನ, ತಿಮ್ಮರಾಜು ದ್ವಿತೀಯ ಹಾಗೂ ನೇತಾಜಿ ಶಾಲೆಯ ನವ್ಯ ತೃತೀಯ ಸ್ಥಾನ ಪಡೆದುಕೊಂಡರು.

ವೇದಿಕೆಯಲ್ಲಿ ತೀರ್ಪುಗಾರರಾದ ನೆಕ್ಸ್ಟ್ ಜೆನೆರೇಷನ್ ಶಾಲೆಯ ಮುಖ್ಯೋಪಾಧ್ಯಾಯಿನಿ ವಿಶಾಲಾಕ್ಷಿ, ಕೃಷಿ ಯಂತ್ರಧಾರೆಯ ವ್ಯವಸ್ಥಾಪಕಿ ರೂಪ ಹಾಗೂ ಅಮ್ಮತ್ತಿ ಆರಕ್ಷಕ ಅಧಿಕಾರಿ ರಮೇಶ್ ಉಪಸ್ಥಿತರಿದ್ದರು.

-ತೌಸಿಫ್ ಅಹ್ಮದ್