ಮಡಿಕೇರಿ, ಜು. 27 : ಪತ್ರಕರ್ತರು ಸಾಮಾಜಿಕ ನ್ಯಾಯಕ್ಕೆ ಧಕ್ಕೆ ತರದ ರೀತಿಯಲ್ಲಿ ವರದಿಗಳನ್ನು ಮಾಡುವಂತೆ ವಕೀಲ ಪಿ. ಕೃಷ್ಣಮೂರ್ತಿ ಕರೆ ನೀಡಿದರು.

ಕೊಡಗು ಜಿಲ್ಲಾ ಪತ್ರಕರ್ತರ ಸಂಘ ಹಾಗೂ ಕೊಡಗು ಪ್ರೆಸ್ ಕ್ಲಬ್ ಆಶ್ರಯದಲ್ಲಿ ನಡೆದ ಪತ್ರಿಕಾ ದಿನಾಚರಣೆ ಹಾಗೂ ಪತ್ರಕರ್ತರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮುಖ್ಯ ಭಾಷಣ ಮಾಡಿ ಶ್ರೀಯುತರು ಪ್ರಜಾಪ್ರಭುತ್ವದ ನಾಲ್ಕನೇ ಅಂಗವಾಗಿಯೂ ಪತ್ರಿಕಾ ರಂಗಕ್ಕೆ ಸಂವಿಧಾನದಲ್ಲಿ ಭದ್ರ ಬುನಾದಿ ಇಲ್ಲವಾದ್ದರಿಂದ ಪ್ರಜಾಪ್ರಭುತ್ವ ಕುಸಿಯುತ್ತಿದೆ ಎಂದರು,.ಈ ನಿಟ್ಟಿನಲ್ಲಿ ಪತ್ರಿಕಾ ಕ್ಷೇತ್ರಕ್ಕೆ ಸಮಗ್ರವಾದ ಕಾಯ್ದೆಯೊಂದನ್ನು ತರಲು ಜಿಲ್ಲೆಯಿಂದ ಆಂದೋಲನ ಆರಂಭವಾಗಲಿ ಎಂದು ಅವರು ಆಶಿಸಿದರು. ಸಮಾಜಕ್ಕೆ ಅವಶ್ಯವಿಲ್ಲದೆ ವೈಯಕ್ತಿಕ ವಿಷಯಗಳು ಹಾಗೂ ಬೇರೆಯವರ ಚಾರಿತ್ರ್ಯವನ್ನು ಹರಣ ಮಾಡುವ ವರದಿಗಾರಿಕೆ ಅಗತ್ಯವಿಲ್ಲ ವೆಂದು ಕೃಷ್ಣಮೂರ್ತಿ ಪ್ರತಿ ಪಾದಿಸಿದರು. ವೈವಾಹಿಕ ವಿಚಾರಗಳ ಕುರಿತು ಇರುವ ವ್ಯಾಜ್ಯಗಳಲ್ಲಿ ಹೆಸರುಗಳನ್ನು ನ್ಯಾಯಾಲಯಗಳು ಪ್ರಸ್ತಾಪಿಸುತ್ತಿಲ್ಲವೆಂದು ಅವರು ಮಾಹಿತಿ ನೀಡಿ ನ್ಯಾಯಾಂಗದ ಆದೇಶಗಳ ಅರಿವು ವರದಿ ಮಾಡುವದಕ್ಕೆ ಮುಂಚೆ ಇರಬೇಕೆಂದು ನೆನಪಿಸಿದರು.

ವೃತ್ತಿ ಒಳ್ಳೆಯದು : ಪತ್ರಕರ್ತರ ಸಾಮಾಜಿಕ ಜವಾಬ್ದಾರಿ ಹಾಗೂ ವಿಶೇಷ ವರದಿಯ ಮಹತ್ವದ

ಕುರಿತು ಸಾಹಿತಿ ಹಾಗೂ ಪತ್ರಕರ್ತ ಕೆ. ಭಾರಧ್ವಜ್ ಆನಂದತೀರ್ಥ ಮಾತನಾಡುತ್ತಾ, ವೃತ್ತಿ ಧರ್ಮದಲ್ಲಿ ಯಾರ ಹಂಗಿಗೆ ಒಳಗಾಗದೆ ಕರ್ತವ್ಯ ನಿರತರಾಗಿದ್ದರೆ ಪತ್ರಕರ್ತರ ಗೌರವ ಕಾಪಾಡಿಕೊಳ್ಳಲು ಸಾಧ್ಯವೆಂದು ವ್ಯಾಖ್ಯಾನಿಸಿದರು. ವೃತ್ತಿ ಧರ್ಮ ಹೊರತು

(ಮೊದಲ ಪುಟದಿಂದ) ರಾಜಕೀಯ ಮುಲಾಜಿಗೆ ಒಮ್ಮೆ ಒಳಗಾದರೆ ನಿರಂತರ ಆ ಸುಳಿಯಲ್ಲಿ ಸಿಲುಕಬೇಕಾದೀತು ಎಂದು ಸೂಚ್ಯವಾಗಿ ನುಡಿಯುತ್ತಾ, ಹೊಣೆ ಗಾರಿಕೆಯಿಂದ ನಡೆದುಕೊಂಡರೆ ಉತ್ತಮ ಕ್ಷೇತ್ರ ಇದಾಗಿರಲಿದೆ ಎಂದು ಮಾರ್ನುಡಿದರು.

ಇಂದು ಪತ್ರಕರ್ತರಲ್ಲಿ ಅಭದ್ರತೆ ಕಾಡುತ್ತಿದೆ. ಪತ್ರಕರ್ತರ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆ ತರುವ ಕಾನೂನುಗಳೇ ಇದ್ದು, ಜನಸೇವೆಯಲ್ಲಿ ಪತ್ರಕರ್ತರಿಗೆ ಭ್ರಮೆ ಇರಬಾರದು ಎಂದು ಭಾರಧ್ವಜ್ ಸಲಹೆ ನೀಡಿದರು.

ಲೇವಡಿಗೆ ಒಳಗಾಗಬಾರದು : ಪತ್ರಿಕೆಗಳಲ್ಲಿ ಕಾರ್ಯನಿರತ ವರದಿಗಾರರು ಜಾಗರೂಕರಾಗಿ ಕೆಲಸ ಮಾಡಬೇಕೆಂದು ಅಭಿಪ್ರಾಯ ವ್ಯಕ್ತಪಡಿಸಿದ ಸಂಘದ ಮಾಜೀ ಅಧ್ಯಕ್ಷ ಹಾಗೂ ರಂಗಕರ್ಮಿ ಅಡ್ಡಂಡ ಸಿ. ಕಾರ್ಯಪ್ಪ, ಪತ್ರಕರ್ತರು ಒಗ್ಗಟ್ಟಿನಿಂದ ಜವಾಬ್ದಾರಿ ನಿರ್ವಹಿಸದೆ ಸಾಮಾಜಿಕ ಜಾಲತಾಣಗಳಲ್ಲಿ ಪರಸ್ಪರ ಕಾಲೆಳೆಯುವ ಬೆಳವಣಿಗೆ ಒಳಿತಲ್ಲವೆಂದು ನೆನಪಿಸಿದರು.

ಸಮಾಜಕ್ಕೆ ಒಳಿತು ನೀಡೋಣ : ಜಿಲ್ಲಾ ಪತ್ರಕರ್ತರ ಸಂಘದ ಮಾಜೀ ಅಧ್ಯಕ್ಷ ಹಾಗೂ ಪ್ರೆಸ್‍ಕ್ಲಬ್ ಅಧ್ಯಕ್ಷರಾಗಿರುವ ರಾಜ್ಯ ಸಮಿತಿ ಸದಸ್ಯ ಅಜ್ಜಾಮಾಡ ರಮೇಶ್ ಕುಟ್ಟಪ್ಪ ಮಾತನಾಡಿ, ಪತ್ರಕರ್ತರು ಅಪ್ರಸ್ತುತ ವಿಚಾರಗಳಿಗೆ ಮಹತ್ವ ನೀಡದೆ ಮತ್ತು ಕೈಬೆರಳೆಣಿಕೆ ಮಂದಿಯ ಮೂಗಿನ ನೇರಕ್ಕೆ ಸುದ್ದಿ ಮಾಡದೆ ಸಮಾಜಕ್ಕೆ ಒಳಿತಾಗುವ ದಿಸೆಯಲ್ಲಿ ವರದಿಗಾರಿಕೆ ಮಾಡುವಂತೆ ಸಲಹೆಯಿತ್ತರು. ಪತ್ರಿಕೆಗಳಲ್ಲಿನ ವರದಿಗಳು ಸಭೆಗಳ ನಡಾವಳಿಕೆ ಪುಸ್ತಕ ಗಳಂತಾಗಬಾರದು ಎಂದು ಅವರು ತಿಳಿಸಿದರು.

ಕೊಡಗು ಜಿಲ್ಲಾ ಪತ್ರಕರ್ತರ ಸಂಘ, ಪ್ರಸ್‍ಕ್ಲಬ್, ಪತ್ರಿಕಾಭವನ ಟ್ರಸ್ಟ್ ಸಂಸ್ಥೆಗಳ ಪ್ರಮುಖರು ಪರಸ್ಪರ ಸಮಾಲೋಚಿಸಿ ಸಣ್ಣ ಪುಟ್ಟ ಬಿನ್ನಾಭಿ ಪ್ರಾಯಗಳನ್ನು ಸರಿಪಡಿಸಿ ಕೊಂಡು ಏಕತೆ ಕಾಪಾಡಿಕೊಳ್ಳುವಂತೆ ‘ಶಕ್ತಿ’ ಸಂಪಾದಕ ಜಿ. ಚಿದ್ವಿಲಾಸ್ ಕರೆ ನೀಡಿದರು.

ಉದ್ಘಾಟನಾ ಭಾಷಣ ಮಾಡಿದ ಅವರು, ಮೂರು ಸಂಘಟನಾ ವ್ಯವಸ್ಥೆ ಯಲ್ಲಿ ಹಲವಷ್ಟು ಗೊಂದಲ ಗಳನ್ನು ಪರಸ್ಪರ ಸಮಾಲೋಚನೆ ಮುಖಾಂತರ ಸರಿಪಡಿಸಿಕೊಳ್ಳುವಂತೆ ಸಲಹೆ ನೀಡಿದರು. ಇಂದಿನ ಸಮಾಜ ವ್ಯವಸ್ಥೆಯಲ್ಲಿ ಶಾಂತಿ ಸೌಹಾದರ್Àತೆ, ಆರೋಗ್ಯಪೂರ್ಣ ವಾತಾವರಣ ರೂಪಿಸುವಲ್ಲಿ ಪತ್ರಿಕೆಗಳು ಹಾಗೂ ದೃಶ್ಯ ಮಾಧ್ಯಮಗಳ ಪಾತ್ರ ಅತೀ ಮುಖ್ಯವೆಂದು ನೆನಪಿಸಿದರು.

ಸಂಘದ ಭರವಸೆ : ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷೆ ಸವಿತಾ ರೈ ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ, ಹಿರಿಯರ ಸಲಹೆ, ಮಾರ್ಗದರ್ಶನದೊಂದಿಗೆ ಉತ್ತಮ ವಾತಾವರಣದತ್ತ ಎಲ್ಲರೂ ಮುನ್ನೆಡೆಯಲು ಪ್ರಯತ್ನಿಸುವದಾಗಿ ಭರವಸೆಯ ನುಡಿಯಾಡಿದರು.

ಪತ್ರಿಕಾ ಬಳಗದ ಪತ್ತಿಭಾನ್ವಿತ ಮಕ್ಕಳಿಗೆ ಈ ವೇಳೆ ಪುರಸ್ಕರಿಸುವ ಮುಖಾಂತರ ಪ್ರತಿಭೆಗಳನ್ನು ಪ್ರೋತ್ಸಾಹಿಸಲಾಯಿತು. ವಿದ್ಯಾರ್ಥಿನಿ ಸಮೃದ್ಧಿ ವಾಸು ಪ್ರಾರ್ಥನೆ ಯೊಂದಿಗೆ ಪ್ರಧಾನ ಕಾರ್ಯದರ್ಶಿ ಅನು ಕಾರ್ಯಪ್ಪ ಸ್ವಾಗತಿಸಿದರು. ಕಾರ್ಯದರ್ಶಿ ಆನಂದ್ ಕೊಡಗು ನಿರೂಪಿಸಿ, ಬೊಳ್ಳಜಿರ ಅಯ್ಯಪ್ಪ ವಂದಿಸಿದರು.