ಮಡಿಕೇರಿ, ಜು. 27: ವಿಜಯಲತ. ಸಿ, ಆಯ್ಕೆ ಶ್ರೇಣಿ ಗ್ರಂಥಪಾಲಕರು, ಫೀಲ್ಡ್ ಮಾರ್ಷಲ್ ಕೆ ಎಂ ಕಾರ್ಯಪ್ಪ ಕಾಲೇಜು, ಮಡಿಕೇರಿ, ಇವರು ಸಾದರಪಡಿಸಿದ ‘ಎ ಸ್ಟಡಿ ಆಫ್ ಕಮ್ಯೂನಿಟಿ ಇನ್ಫಾರ್ಮೆಶನ್ ಸರ್ವಿಸಸ್ ಎಂಡ್ ಜಿ2ಸಿ (ಗವರ್ನಮೆಂಟ್ ಟು ಸಿಟಿಜನ್) ಇನ್ಫಾರ್ಮೆಶನ್ ಸರ್ವಿಸಸ್ ಅಂಡರ್ ಇ-ಗವರ್ನೆನ್ಸ್ ಇನೀಶಿಯೇಟಿವ್ಸ್ ಇನ್ ಕೊಡಗು ಡಿಸ್ಟ್ರಿಕ್ಟ್, ಕರ್ನಾಟಕ’ ಎಂಬ ಮಹಾಪ್ರಬಂಧಕ್ಕೆ ಮಂಗಳೂರು ವಿಶ್ವವಿದ್ಯಾನಿಲಯ ಡಾಕ್ಟರೇಟ್ ಪದವಿ ನೀಡಿದೆ. ಇವರು ನಿವೃತ್ತ ಪ್ರೊಫೆಸರ್ ಕೈಸರ್ ಎಂ ಖಾನ್ ಇವರ ಮಾರ್ಗದರ್ಶನದಲ್ಲಿ ಸಂಶೋಧನೆ ಮಾಡಿದ್ದಾರೆ. ಇವರು ಪಾಲಂಗಾಲ ಪಿ.ಎನ್. ಹರಿಶಂಕರ್ ಪ್ರಸಾದ್ ಅವರ ಪತ್ನಿ.