ಶನಿವಾರಸಂತೆ, ಜು. 26: ಮಾನವೀಯ ಮೌಲ್ಯಗಳನ್ನು ಬದುಕಿ ನಲ್ಲಿ ಅಳವಡಿಸಿಕೊಂಡು ಉತ್ತಮ ಜೀವನ ಸಾಗಿಸಲು ಪ್ರತಿಯೊಬ್ಬರಿಗೂ ಕಾನೂನಿನ ಅರಿವು ಅತ್ಯಗತ್ಯವಾಗಿದೆ ಎಂದು ಸೋಮವಾರಪೇಟೆ ತಾಲೂಕು ಕಾನೂನು ಸೇವಾ ಪ್ರಾಧಿಕಾರದ ಅಧ್ಯಕ್ಷ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶ ಶಿವಪುತ್ರ ದಿಂಡಲಕೊಪ್ಪ ಅಭಿಪ್ರಾಯಪಟ್ಟರು.

ಗುಡುಗಳಲೆಯ ಬಸಪ್ಪ ಕಲ್ಯಾಣ ಮಂಟಪದಲ್ಲಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಮಾನವಹಕ್ಕು ಹಾಗೂ ಭ್ರಷ್ಟಾಚಾರ ವಿರೋಧಿ ಸಂಸ್ಥೆ ಮತ್ತು ತಾಲೂಕು ವಕೀಲರ ಸಂಘದ ಸಹಭಾಗಿತ್ವದಲ್ಲಿ ನಡೆದ ಕಾನೂನು ಅರಿವು ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿ ದರು.

ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಕಾರ್ಯದರ್ಶಿ ಹಾಗೂ ಸಿವಿಲ್ ನ್ಯಾಯಾಧೀಶ ನೂರುನ್ನೀಸಾ ಮಾತನಾಡಿ, ಹೆಣ್ಣಿಗೆ ಪ್ರಕೃತಿದತ್ತವಾಗಿ ದೇವತಾ ಸ್ಥಾನ ದೊರೆತಿದೆ. ಕೀಳರಿಮೆಯ ಭಾವನೆಯಿಂದಲೇ ಹೆಣ್ಣಿನ ಮನಸ್ಸಿನಲ್ಲಿ ಅಬಲೆ ಎಂಬ ಭಾವನೆ ಬೇರೂರುತ್ತದೆ. ಹೆಣ್ಣಿನಲ್ಲಿ ರುವ ಆತ್ಮವಿಶ್ವಾಸದ ಕೊರತೆಯೇ ಸಮಸ್ಯೆಗೆ ದೌರ್ಜನ್ಯಕ್ಕೆ ಕಾರಣ. ಸಕಾರಾತ್ಮಕ ಆಲೋಚನೆಗಳಿಂದ ತನ್ನನ್ನು ತಾನು ರಕ್ಷಿಸಿಕೊಳ್ಳುವ ಸಾಮಥ್ರ್ಯ ಹೆಣ್ಣಿಗಿರಬೇಕು ಎಂದರು.

ತಾಲೂಕು ಕಾನೂನು ಸೇವಾ ಪ್ರಾಧಿಕಾರದ ಕಾರ್ಯದರ್ಶಿ ಹಾಗೂ ಪ್ರಧಾನ ಸಿವಿಲ್ ನ್ಯಾಯಾಧೀಶೆ ಪ್ರತಿಭಾ ಮಾತನಾಡಿ, ಜನನ-ಮರಣದಿಂದ ಹಿಡಿದು ಯಾವದೇ ಪ್ರಕರಣಗಳಾಗಲಿ ಪ್ರತಿಯೊಬ್ಬರಿಗೂ ಕಾನೂನಿನ ಅರಿವು ಅಗತ್ಯ ಎಂದರು.

ತಾಲೂಕು ವಕೀಲರ ಸಂಘದ ಅಧ್ಯಕ್ಷ ತಿಮ್ಮಯ್ಯ ಮಾತನಾಡಿ, 900ಕ್ಕೂ ಅಧಿಕ ಕಾಯ್ದೆಗಳಿವೆ ಯಾದರೂ ಎಲ್ಲದರ ಅರಿವು ದೊರೆಯಲಾರದು. ಕಾರ್ಯಾಗಾರ ಗಳಲ್ಲಿ ಪಾಲ್ಗೊಳ್ಳುವದರಿಂದ ಕಾನೂನಿನ ಅರಿವು ಮೂಡಿಸಿಕೊಳ್ಳ ಬಹುದು. ಸರಿ-ತಪ್ಪಿನ ಪ್ರಜ್ಞೆ ಮುಖ್ಯ ವಾಗಿರುತ್ತದೆ ಎಂದರು.

ವಕೀಲ ಶಂಕರ್ ಮಾತನಾಡಿ, 18 ವರ್ಷ ವಯಸ್ಸಿನೊಳಗಿನ ಮಕ್ಕಳನ್ನು ಅಪ್ರಾಪ್ತರೆನ್ನುತ್ತಾರೆ. ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಮಾಡುವ ಕಾಯ್ದೆಯೇ ಫೋಕ್ಸೊ ಕಾಯ್ದೆ. ಪ್ರಚೋದನೆಯೇ ಹೆಣ್ಣು ಬಲಿಯಾಗಲು ಕಾರಣ. ಅಶ್ಲೀಲ ಚಿತ್ರ ತೆಗೆಯುವದು, ಕಳುಹಿಸುವದು ಕೂಡ ಅಪರಾಧವೇ ಎಂದರು. ಅಧ್ಯಕ್ಷತೆ ವಹಿಸಿದ್ದ ವಿಘ್ನೇಶ್ವರ ಎಎಸ್‍ಐ ನಂಜುಂಡೇಗೌಡ, ಮಾನವ ಹಕ್ಕು ಮತ್ತು ಭ್ರಷ್ಟಾಚಾರ ವಿರೋಧಿ ಸಂಸ್ಥೆ, ತಾಲೂಕು ಘಟಕದ ಅಧ್ಯಕ್ಷ ಪಿ. ಮಧು, ಉಪಾಧ್ಯಕ್ಷ ಬಿ.ಎಸ್. ಮೋಹನ್. ವಕೀಲರಾದ ಹೇಮಚಂದ್ರ, ಮಂಜುನಾಥ್, ವಿಘ್ನೇಶ್ವರ ವಿದ್ಯಾಸಂಸ್ಥೆ ನಿರ್ದೇಶಕಿ ನಿತ್ಯಾನಿಧಿ ಉಪನ್ಯಾಸಕರಾದ ಕೆ.ಪಿ. ಜಯಕುಮಾರ್, ಝಹಿರ್, ಸರ್ಪ್‍ರಾಜ್ ಉಪಸ್ಥಿತರಿದ್ದರು. ಜಯಕುಮಾರ್ ನಿರೂಪಿಸಿ, ಜಯಪ್ಪ ವಂದಿಸಿದರು.