*ಗೋಣಿಕೊಪ್ಪಲು, ಜು. 26 : ಪಟ್ಟಣದ ವಾಹನ ಚಾಲಕರ ಸಂಘದ ಅಧ್ಯಕ್ಷರಾಗಿ ಸಿ.ಕೆ. ಬೋಪಣ್ಣ ಅವರು ಸತತ 8ನೇ ಬಾರಿಗೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಇಲ್ಲಿನ ಮಹಿಳಾ ಸಮಾಜ ಸಭಾಂಗಣದಲ್ಲಿ ನಡೆದ ವಾಹನ ಚಾಲಕರ ಸಂಘದ ವಾರ್ಷಿಕ ಮಹಾಸಭೆಯಲ್ಲಿ ಈ ಆಯ್ಕೆ ಮಾಡಲಾಗಿದೆ.
ಉಪಾಧ್ಯಕ್ಷರಾಗಿ 6ನೇ ಬಾರಿಗೆ ಪಿ.ಎಸ್. ಶರತ್ಕಾಂತ್ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು. ಕಾರ್ಯದರ್ಶಿಯಾಗಿ ಜಿ.ಆರ್. ಕೃಷ್ಣೇಗೌಡ, ಸಹ ಕಾರ್ಯದರ್ಶಿ ಕೆ.ಬಿ. ರೇಣುಕುಮಾರ್, ಕೋಶಾಧಿಕಾರಿ ಯು.ಟಿ. ವೆಂಕಟೇಶ್ ಮತ್ತು ಕಾರ್ಯಕಾರಿ ಮಂಡಳಿಯ ನಿರ್ದೇಶಕರಾಗಿ ಎಂ.ಎನ್. ಸುಬ್ರಮಣಿ, ಸ್ಟ್ಯಾನಿ ಫರ್ನಾಂಡಿಸ್, ವಿ.ಟಿ. ಕೃಷ್ಣ, ಕೆ.ಪಿ. ಪ್ರವೀಣ್, ಎ.ಎಂ. ಅಖಿಲ್, ಎಂ. ಆಂಟೋನಿ, ಸಿ.ಎಂ. ಶರ್ಫುದ್ದೀನ್, ಎ.ಕೆ. ಸುಬ್ರಮಣಿ, ಎ.ಕೆ. ಅಶೋಕ್, ಬಿ.ಕೆ. ಸೋಮಪ್ಪ, ಎ.ಕೆ. ಅನಿಸ್, ಟಿ.ಜೆ. ಸಂತೋಷ್, ಹೆಚ್.ಜೆ. ಅಪ್ಪಣ್ಣ, ವಿ.ಟಿ. ಯೋಗೀಶ್ ಇವರುಗಳನ್ನು ಸಭೆಯಲ್ಲಿ ಆಯ್ಕೆ ಮಾಡಲಾಯಿತು.
ಈ ಸಂದರ್ಭ ಅಧ್ಯಕ್ಷರಾಗಿ ಆಯ್ಕೆಯಾದ ಸಿ.ಕೆ. ಬೋಪಣ್ಣ ಮಾತನಾಡಿ ವಾಹನ ಚಾಲಕರ ಸಂಘದ ವತಿಯಿಂದ ಸಮಾಜಮುಖಿ ಕಾರ್ಯಗಳನ್ನು ನಡೆಸುತ್ತಿದ್ದೇವೆ. ಅಂಬ್ಯೂಲೆನ್ಸ್ ಸೇವೆ ಮತ್ತು ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಬೈಸಿಕಲ್ ಸ್ಪರ್ಧೆಗಳನ್ನು ಏರ್ಪಡಿಸುತ್ತಿದ್ದೇವೆ. ಮುಂದಿನ ದಿನಗಳಲ್ಲಿ ಉತ್ತಮ ಕಾರ್ಯಕ್ರಮಗಳ ಮೂಲಕ ಸಾರ್ವಜನಿಕರಿಗೆ ಸೇವೆ ನೀಡುತ್ತೇವೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ 2018-19ನೇ ಸಾಲಿನಲ್ಲಿ ಎಸ್.ಎಸ್.ಎಲ್.ಸಿಯಲ್ಲಿ ಹೆಚ್ಚು ಅಂಕ ಪಡೆದ ಸಂಘದ ಸದಸ್ಯರ ಮಕ್ಕಳಿಗೆ ಪೆÇ್ರೀತ್ಸಾಹ ಧನ ನೀಡಲಾಯಿತು.