ಮೂರ್ನಾಡು, ಜು. 26: ಮೂರ್ನಾಡು ಲಯನ್ಸ್ ಕ್ಲಬ್‍ನ ನೂತನ ಪದಾಧಿಕಾರಿಗಳ ಪದಗ್ರಹಣ ಮೂರ್ನಾಡು ಕೊಡವ ಸಮಾಜದ ಸಭಾಂಗಣದಲ್ಲಿ, ಬಡುವಂಡ ಬೋಪಣ್ಣ ಗಣಪತಿ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಬಿದ್ದಂಡ ಗಗನ್ ಮುತ್ತಣ್ಣ ನೂತನ ಅಧ್ಯಕ್ಷರಾಗಿ, ಮುಲ್ಲೆರ ಪಾಪ ಕಾವೇರಪ್ಪ ಗೌರವ ಕಾರ್ಯದರ್ಶಿಯಾಗಿ, ಪಳಂಗಂಡ ಪ್ರಕಾಶ್ ಕಾವೇರಪ್ಪ ಅವರು ಖಜಾಂಚಿಯಾಗಿ ಅಧಿಕಾರ ಸ್ವೀಕರಿಸಿದರು.

ಮುಖ್ಯ ಅತಿಥಿಯಾಗಿ ಮಾಜೀ ಪ್ರಾಂತೀಯ ಅಧ್ಯಕ್ಷ ಬಿದ್ದಂಡ ಗಣಪತಿ ಉಪಸ್ಥಿತರಿದ್ದು, ಕ್ಲಬ್‍ನ ವಿಧಿ ವಿಧಾನಗಳನ್ನು ಬೋಧಿಸಿದರು. ಕ್ಲಬ್‍ನ ನೂತನ ಸದಸ್ಯರಾಗಿ ಬಡುವಂಡ ಬಿಂದು ಬೋಪಣ್ಣ, ಚೌರೀರ ಸುನಿ ಅಚ್ಚಯ್ಯ, ಬಡುವಂಡ ಕನ್ನು ಅಪ್ಪಚ್ಚು, ಪೆಮ್ಮಡಿಯಂಡ ಇಂದಿರಾ ಅಪ್ಪಣ್ಣ, ಬಿದ್ದಂಡ ಸಂಗೀತ ಮುತ್ತಣ್ಣ ಹಾಗೂ ಮಚ್ಚಾರಂಡ ಸುಬ್ರಮಣಿ ಅವರುಗಳು ಪ್ರತಿಜ್ಞಾ ವಿಧಿ ಸ್ವೀಕರಿಸಿದರು. ಕಂದಾಯ ಜಿಲ್ಲೆಯ ಎಲ್ಲಾ ಕ್ಲಬ್‍ನ ಸದಸ್ಯರು ಹಾಗೂ ಮಂಗಳೂರಿನ ಸದಸ್ಯರು ಹಾಜರಿದ್ದರು.