ಮಡಿಕೇರಿ, ಜು. 26: ಬ್ಯಾಂಕ್ ಆಫ್ ಬರೋಡ ತನ್ನ 112ನೇ ವರ್ಷಾಚರಣೆ ಪೂರೈಸಿದ ಹಿನ್ನೆಲೆ, ಕಾನೂರು ಶಾಖೆಯ ವ್ಯವಸ್ಥಾಪಕ ಸಾಗರ್ ಜಾದವ್ ಅವರು ಕಾನೂರು ಸರಕಾರಿ ಶಾಲೆಗೆ ಉಚಿತವಾಗಿ ಕುಡಿಯುವ ನೀರಿನ ಫಿಲ್ಟರ್, ಪ್ಲೇಟು ಹಾಗೂ ಕ್ರೀಡಾ ಸಾಮಗ್ರಿಗಳನ್ನು ವಿತರಿಸಿದರು. ಈ ಸಂದರ್ಭ ಸಿ.ಎಸ್. ಸೋಮಯ್ಯ, ಸಿ.ಎಚ್. ನಂಜಪ್ಪ, ಎ.ಎ. ವಿವೇಕ್, ಲತಾ ಹಾಗೂ ಕೆ.ಎನ್. ನಾಚಪ್ಪ ಉಪಸ್ಥಿತರಿದ್ದರು.