ಸೋಮವಾರಪೇಟೆ, ಜು. 26: ಗೌಡಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದ ಚೌಡ್ಲು ಉಪಕೇಂದ್ರದ ವತಿಯಿಂದ ಗಾಂಧಿನಗರ ಅಂಗವಾಡಿ ಕೇಂದ್ರದಲ್ಲಿ ಆರೋಗ್ಯವಂತ ಶಿಶು ಪ್ರದರ್ಶನ ಕಾರ್ಯಕ್ರಮ ನಡೆಯಿತು.
ಗರ್ಭಿಣಿಯರ ಆರೈಕೆ, ಕುಟುಂಬ ಯೋಜನೆಯ ತಾತ್ಕಾಲಿಕ ಮತ್ತು ಶಾಶ್ವತ ವಿಧಾನಗಳು, ಸಾಂಕ್ರಾಮಿಕ ರೋಗಗಳ ನಿಯಂತ್ರಣ, ಡೆಂಗ್ಯೂ, ನಿಫಾ ವೈರಸ್ ಬಗ್ಗೆ ಮಾಹಿತಿ ನೀಡಲಾಯಿತು. ಕಾರ್ಯಕ್ರಮದಲ್ಲಿ ಚೌಡ್ಲು ಗ್ರಾ. ಪಂ.ಸದಸ್ಯರಾದ ಮಂಜುಳ ಸುಬ್ರಮಣಿ, ಧರ್ಮ, ವಿ.ಹೆಚ್.ಎನ್.ಎಸ್.ಸಿ ಸದಸ್ಯೆ ಸುಜಾತ, ಗೌಡಳ್ಳಿ ಆರೋಗ್ಯ ಕೇಂದ್ರದ ಆರೋಗ್ಯ ಸಹಾಯಕರಾದ ಕೆ.ಪಿ. ಮಹೇಶ್, ಬಿ.ವಿ. ಇಂದಿರಾ, ಬಿ.ಎ. ಲಲಿತ, ದಿವ್ಯ ಮತ್ತಿತರರು ಇದ್ದರು.