ಕುಶಾಲನಗರ, ಜು. 24 : ಮಹಿಳೆಯರು ಸ್ವಯಂ ಉದ್ಯೋಗದಲ್ಲಿ ತೊಡಗಿಸಿಕೊಂಡು ಉಳಿತಾಯಕ್ಕೆ ಒತ್ತು ನೀಡಬೇಕೆಂದು ಕೂಡಿಗೆಯ ಕಾಬ್ಸೆಟ್ ನಿರ್ದೇಶಕ ಡಾ.ಜಿ.ಸುರೇಶ್ ಕರೆ ನೀಡಿದ್ದಾರೆ.

ಅವರು ಮಾದಾಪಟ್ಟಣ ಗ್ರಾಮದ ಸಮುದಾಯ ಭವನದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಿಶು ಅಭಿವೃದ್ಧಿ ಯೋಜನೆ, ತಾಲೂಕು ಸ್ತ್ರೀಶಕ್ತಿ ಒಕ್ಕೂಟ ಸಹಯೋಗದಲ್ಲಿ ನಡೆದ ಸ್ತ್ರೀ ಶಕ್ತಿ ಸಂಘಗಳ ಬಲವರ್ಧನೆಗಾಗಿ ನಡೆದ ತರಬೇತಿ ಕಾರ್ಯಾಗಾರದಲ್ಲಿ ಪಾಲ್ಗೊಂಡು ಮಾತನಾಡಿದರು.

ಸ್ವಾವಲಂಬಿ ಬದುಕು ಕಾಣುವ ಮೂಲಕ ಉತ್ತಮ ಜೀವನ ನಿರ್ವಹಣೆ ಸಾಧ್ಯ ಎಂದ ಸುರೇಶ್, ಉದ್ಯೋಗಿಗಳನ್ನು ಸೃಷ್ಠಿಸುವ ತರಬೇತಿಗೆ ಆದ್ಯತೆ ನೀಡಬೇಕೆಂದರು.

ಕಾರ್ಯಕ್ರಮದಲ್ಲಿ ಪಾಲ್ಗೊಂಡ ಕೃಷಿ ಇಲಾಖೆ ಸಹಾಯಕ ನಿರ್ದೇ ಶಕ ಎಚ್.ಎಸ್. ರಾಜಶೇಖರ್, ತೋಟಗಾರಿಕಾ ಇಲಾಖೆ ಸಹಾಯಕ ಅಧಿಕಾರಿ ಕಾವ್ಯ, ಆರೋಗ್ಯ ಇಲಾಖೆಯ ತಾಲೂಕು ಶಿಕ್ಷಣಾಧಿಕಾರಿ ಎಚ್.ಕೆ.ಶಾಂತಿ, ಡಿಸಿಸಿ ಬ್ಯಾಂಕ್ ಮಡಿಕೇರಿಯ ಉಪ ಪ್ರಧಾನ ವ್ಯವಸ್ಥಾಪಕ ರಾದ ಜಿ.ಎಂ. ಭೋಜಮ್ಮ, ಕಾವೇರಿ ನದಿ ಸ್ವಚ್ಛತಾ ಆಂದೋ ಲನ ಸಂಚಾಲಕÀ ಎಂ.ಎನ್. ಚಂದ್ರ ಮೋಹನ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮೇಲ್ವಿಚಾರಕಿ ನಿರ್ಮಲ ಉಪಸ್ಥಿತರಿದ್ದು ಕಾರ್ಯಾಗಾರದಲ್ಲಿ ಉಪನ್ಯಾಸ ನೀಡಿದರು. ತಾಲೂಕು ಬ್ಲಾಕ್ ಸ್ತ್ರೀಶಕ್ತಿ ಸಂಘದ ಕಾರ್ಯದರ್ಶಿ ಹೇಮಲತಾ, ಆರೋಗ್ಯ ಕಾರ್ಯಕರ್ತೆ ಎಚ್.ಕೆ.ಭವಾನಿ, ಅಂಗನವಾಡಿ ಕಾರ್ಯಕರ್ತೆ ನಾಗಮಣಿ, ಅಂಜಲಿ ಲೋಬೋ ಮತ್ತಿತರರು ಇದ್ದರು.