ಸಿದ್ದಾಪುರ, ಜು. 24: ನೆಲ್ಯಹುದಿಕೇರಿ ಗ್ರಾಮದ ನಾಲ್ಕನೇ ವಾರ್ಡಿನ ಬಡಾವಣೆಗೆ ತೆರಳುವ ನೂತನ ಕಾಂಕ್ರಿಟ್ ರಸ್ತೆ ಹಾಗೂ ಬಡಾವಣೆ ನಾಮಫಲಕ ಅಳವಡಿಸುವ ಕಾರ್ಯಕ್ರಮವನ್ನು ಜಿ.ಪಂ ಸದಸ್ಯೆ ಸುನಿತಾ ಮಂಜುನಾಥ್ ಉದ್ಘಾಟಿಸಿದರು.

ಮುಖ್ಯಮಂತ್ರಿಗಳ ವಿಶೇಷ ಅನುದಾನದಡಿಯಲ್ಲಿ 6ಲಕ್ಷ ವೆಚ್ಚದಲ್ಲಿ 120 ಮೀಟರ್ ಕಾಂಕ್ರಿಟ್ ರಸ್ತೆ ನಿರ್ಮಾಣವಾಗಿದೆ. ಅಲ್ಲದೆ ಬಡಾವಣೆಗೆ ಎ.ಪಿ.ಜೆ ಅಬ್ದುಲ್ ಕಲಾಂ ಬಡಾವಣೆ ಎಂಬದಾಗಿ ಹೆಸರಿಟ್ಟು, ನಾಮಫಲಕವನ್ನು ಗ್ರಾ.ಪಂ ಸದಸ್ಯರುಗಳಾದ ಅಪ್ಸಲ್ ,ಮೈನ,ಬಿಂದು ಅನಾವರಣಗೊಳಿಸಿದರು.

ಕಾರ್ಯಕ್ರಮದಲ್ಲಿ ಜಿ.ಪಂ ಸದಸ್ಯೆ ಸುನಿತಾ ಮಂಜುನಾಥ್, ಗ್ರಾ.ಪಂ ಸದಸ್ಯರಾದ ಮೈನ, ಅಪ್ಸಲ್, ಬಿಂದು ಅವರನ್ನು ಸನ್ಮಾನಿಸಲಾಯಿತು. ಈ ಸಂದÀರ್ಭದಲ್ಲಿ ಗ್ರಾ.ಪಂ ಅಧ್ಯಕ್ಷೆ ಪದ್ಮಾವತಿ, ಉಪಾಧ್ಯಕ್ಷೆ ಸಫಿಯಾ, ತಾ.ಪಂ ಸದಸ್ಯೆ ಸುಹದಾ, ಪಿ.ಡಿ.ಓ ಚಂದ್ರಶೇಖರ್ ಹಾಜರಿದ್ದರು.