ಕೂಡಿಗೆ, ಜು. 25 : ಕೂಡಿಗೆ ಗ್ರಾಮ ಪಂಚಾಯ್ತಿ ಹುದುಗೂರು ಗ್ರಾಮದ ಶ್ರೀ ಉಮಾಮಹೇಶ್ವರ ಕ್ಷೇತ್ರದಲ್ಲಿ ಕ್ಷೇತ್ರದ ಚೈತನ್ಯ ಅಭಿವೃದ್ಧಿಗಾಗಿ ಗಾಯತ್ರಿ ಹೋಮ ಯಜ್ಞವು ತಾ.28 ರಂದು ನಡೆಯಲಿದೆ.

ಬೆಳಗ್ಗೆ 6 ಗಂಟೆಯಿಂದ ಸಂಜೆ 6ರ ವರೆಗೆ ಕ್ಷೇತ್ರದ ಅಭಿವೃದ್ಧಿಗಾಗಿ ಹಾಗೂ ಗ್ರಾಮದ ಭಕ್ತಾದಿಗಳ ಪೂರ್ವಜನ್ಮ ಮತ್ತು ಪ್ರಸಕ್ತ ಜನ್ಮದಲ್ಲಿ ಅರಿತೋ, ಅರಿಯದೆಯೋ ಮಾಡಿದ ಕರ್ಮ ದೋಷ ನಿವಾರಣೆಯೊಂದಿಗೆ ಶಾಪ ಧುರಿತ ನಿವಾರಣೆಯ ಸಲುವಾಗಿ ಗಾಯತ್ರಿ ಹೋಮ ಯಜ್ಞವು ಶ್ರದ್ಧಾಭಕ್ತಿಯಿಂದ ನಡೆಯಲಿದ್ದು, ಭಕ್ತಾದಿಗಳಿಗೆ ಪ್ರಸಾದ ವಿನಿಯೋಗ ಏರ್ಪಡಿಸಲಾಗಿದೆ ಎಂದು ದೇವಾಲಯ ಸಮಿತಿಯ ಅಧ್ಯಕ್ಷ ಟಿ.ಎಂ.ಚಾಮಿ ತಿಳಿಸಿದ್ದಾರೆ.