ಮಡಿಕೇರಿ, ಜು. 25: ಕೊಡಗು ಜಿಲ್ಲಾ ಬ್ರಾಹ್ಮಣರ ಕ್ಷೇಮಾಭಿವೃದ್ಧಿ ಸಂಘದ 26ನೇ ವಾರ್ಷಿಕ ಮಹಾಸಭೆಯು ಸಂಘದ ಅಧ್ಯಕ್ಷ ಕೃಷ್ಣಮೂರ್ತಿ ತೋಟಂತಿಲ್ಲಾಯ ಅವರ ಅಧ್ಯಕ್ಷತೆಯಲ್ಲಿ ಗೋಣಿಕೊಪ್ಪಲಿನ ಕೈಕೇರಿಯ ‘ವಿಪ್ರ ಸಭಾಭವನ’ದಲ್ಲಿ ನಡೆಯಿತು.

ಅಧ್ಯಕ್ಷ ಭಾಷಣದ ನಂತರ ಸಂಘದ ಕಾರ್ಯದರ್ಶಿಯಾದ ಸದಾನಂದ ಪುರೋಹಿತ್ ಅವರು ವಾರ್ಷಿಕ ವರದಿ, ಸಂಘದ ಇತ್ತೀಚಿನ ಬೆಳವಣಿಗೆಗಳ ಕುರಿತಾದ ವರದಿಯನ್ನು ಓದಿದರು. ಖಜಾಂಚಿ ಯೋಗೇಶ್ ಪಡಂತಾಯ ಅವರು ವಾರ್ಷಿಕ ಆಯವ್ಯಯದ ವರದಿ ನೀಡಿದರು.

ಅದೇ ದಿನ ಸಂಜೆ 6 ಗಂಟೆಯಿಂದ ಪುರೋಹಿತರಾದ ಗಿರೀಶ್ ಪಡಂತಾಯ ಅವರ ನೇತೃತ್ವದಲ್ಲಿ ಸಂಘದ ವತಿಯಿಂದ ಶ್ರೀ ದುರ್ಗಾದೀಪ ನಮಸ್ಕಾರ ಪೂಜೆಯು ಜರುಗಿತು. ಗೋಣಿಕೊಪ್ಪಲಿನ ಶ್ರೀ ಭಗವತಿ ವಿಪ್ರ ಮಹಿಳಾ ಸಂಘದ ಸದಸ್ಯರು ಶ್ರೀ ಲಲಿತಾ ಸಹಸ್ರನಾಮ, ಅಷ್ಟಲಕ್ಷ್ಮಿ ಸ್ತೋತ್ರದ ಜೊತೆಗೆ ಭಜನಾ ಕಾರ್ಯಕ್ರಮವನ್ನು ನೀಡಿದರು.

ಸಂಘದ ಸದಸ್ಯರೆಲ್ಲರೂ ಕಾರ್ಯಕ್ರಮದ ಯಶಸ್ವಿಗೆ ಸಹಕರಿಸಿದರು. ಪೂಜಾ ನಂತರ ಭೋಜನ ವ್ಯವಸ್ಥೆಯನ್ನು ಏರ್ಪಡಿಸಲಾಗಿತ್ತು.