ಮಡಿಕೇರಿ, ಜು. 25: ವರ್ಷಗಳ ಹಿಂದೆ ತೆರೆ ಕಂಡಿದ್ದ “ರಂಗೀತರಂಗ” ಚಿತ್ರದಲ್ಲಿ ಕರಾವಳಿ ಸೊಗಡನ್ನು ತೋರಿಸಲಾಗಿತ್ತು. ಇದೀಗ ಸಂದೀಪ್ ಶೆಟ್ಟಿ ನಿರ್ದೇಶನ ಮಾಡಿರುವ ಹೊಸದೊಂದು ಚಿತ್ರದಲ್ಲೀ ಕೊಡಗಿನ ಸಂಸ್ಕೃತಿಯನ್ನು ಚಿತ್ರಿಸುವ ಪ್ರಯತ್ನ ಮಾಡಲಾಗಿದೆÉ. ಈ ಚಿತ್ರಕ್ಕೆ “ನಂದನವನದೋಳ್” ಎಂದು ಶೀರ್ಷಿಕೆಯನ್ನು ಇಟ್ಟಿದ್ದಾರೆ. ಅಂದಹಾಗೆ ಈ ಚಿತ್ರದ ಚಿತ್ರೀಕರಣ ಕೊಡಗಿನಲ್ಲಿ ಮಾಡಲಾಗಿದ್ದು. ಕೆಲವು ದೃಶ್ಯಗಳನ್ನು ಬೆಂಗಳೂರಿನಲ್ಲಿ ಸೆರೆ ಹಿಡಿಯಲಾಗಿದೆ. ವೃತ್ತಿಪರ ಕೊಲೆಗಾರನನ್ನು ಹುಡುಕುವ ಸಸ್ಪೆನ್ಸ್ ಥ್ರಿಲ್ಲರ್ ಕಥೆಯನ್ನು ಈ ಸಿನಿಮಾ ಒಳಗೊಂಡಿದೆ. ಶೂಟಿಂಗ್ ಎಲ್ಲಾ ಮುಗಿದು ಸೆನ್ಸಾರ್ ನಿಂದ ಸಿನಿಮಾಗೆ .”ಯು” ಪ್ರಮಾಣ ಪತ್ರ ಸಿಕ್ಕಿದೆ. ಈ ಚಿತ್ರವು ಕೊಡಗು ಸಂಸ್ಕೃತಿ ಮತ್ತು ಕ್ರೀಡೆ ಗಳ ಮೇಲೆ ಆಧಾರಿತವಾಗಿದೆ. ಜತೆಗೆ ಹಾಸ್ಯ ಮತ್ತು ಸಸ್ಪೆನ್ಸ್ ಕಥಾನಕ ವನ್ನು ಹೊಂದಿದೆ. “ನಂದನವನ ದೋಳ್” ಎಂಬದು ಸಿನಿಮಾ ದೊಳಗಿನ ಕಾದಂಬರಿಯ ಹೆಸರಾಗಿದೆ.

ಕೊಲೆಗಾರನನ್ನು ಹುಡುಕಲು ತನಿಖಾಧಿಕಾರಿಗಳಿಗೆ ಈ ಕಾದಂಬರಿ ಯಲ್ಲಿನ ಅಂಶಗಳು ಸಹಾಯವಾಗು ತ್ತದೆ. ಅದು ಹೇಗೆ ಎಂಬದನ್ನು ಸಿನಿಮಾದಲ್ಲೇ ನೋಡಬೇಕು ಎಂದು ಕುತೂಹಲ ಕಾಯ್ದುಕೊಳ್ಳುತ್ತಾರೆ ನಿರ್ದೇಶಕರು. ಕಾಂತೂರು ಮೂರ್ನಾಡಿನ ಯುವ ಪ್ರತಿಭೆ “ಭರತ್ ರೈ” ಇದರಲ್ಲಿ ಮುಖ್ಯ ಪಾತ್ರ ವಹಿಸಿ ದ್ದಾರೆ. ಈ ಸಿನಿಮಾದ ನಿರ್ಮಾಣ ವನ್ನು ಕಾಂತೂರಿನವರೇ ಆಗಿರುವ “ಶರಣ್ ಪೂಣಚ್ಚ ಅವರೆಮಾದಂಡ” ಅವರು ಮಾಡಿರುತ್ತಾರೆ ಹಾಗೂ ಈ ಚಿತ್ರವು ತಾ. 26 ರಂದು (ಇಂದು) ರಾಜ್ಯಾದ್ಯಂತ ಬಿಡುಗಡೆಗೊಳ್ಳಲಿದೆ.