ವೀರಾಜಪೇಟೆ, ಜು. 24: ವೀರಾಜಪೇಟೆ ತಾಲೂಕು ಸೇವಾ ಸಿಂಧು ಕೇಂದ್ರದವರು ಸರಕಾರ ನಿಗದಿ ಪಡಿಸಿದ ದರವನ್ನು ಪಡೆಯಬೇಕು. ಈ ಮೂಲಕ ಸಾರ್ವಜನಿಕರಿಗೆ ಯಾವ ತೊಂದರೆ ಆಗದಂತೆ ಸೇವೆ ನೀಡಬೇಕು. ಸಾರ್ವಜನಿಕರು ಈ ಕೆಳಗೆ ನೀಡಿರುವ ನಿಗದಿತ ದರವನ್ನು ಮಾತ್ರ ಪಾವತಿಸುವಂತೆ ವೀರಾಜಪೇಟೆ ತಾಲೂಕು ತಹಶೀಲ್ದಾರ್ ಕೆ. ಪುರಂದರ ಪತ್ರಿಕಾ ಪ್ರಕಟಣೆಯಲ್ಲಿ ಕೋರಿದ್ದಾರೆ.

ಕೃಷಿ ಕುಟುಂಬ ಸದಸ್ಯ ಪ್ರಮಾಣ ಪತ್ರ 55 ರೂ, ಕೃಷಿ ಕಾರ್ಮಿಕ ಪ್ರಮಾಣ ಪತ್ರ 45 ರೂ ,ಜಾತಿ ಮತ್ತು ಆದಾಯ ಪ್ರಮಾಣ ಪತ್ರ 55 ರೂ, ಜಮೀನು ಹೊಂದಿರುವ ಪ್ರಮಾಣ ಪತ್ರ 50 ರೂ ಜಾತಿಪ್ರಮಾಣ ಪತ್ರ 50ರೂ, ಆದಾಯ ಪ್ರಮಾಣ ಪತ್ರ 35ರೂ, ಬೆಳೆ ದೃಢೀಕರಣ ಪತ್ರ 60, ವಾಸ ಸ್ಥಳದ ಪ್ರಮಾಣ ಪತ್ರ 50 ರೂ, ಭೂರಹಿತ ಪ್ರಮಾಣಪತ್ರ 45 ರೂ, ಸಣ್ಣ ಮತ್ತು ದೊಡ್ಡ ರೈತ ಪ್ರಮಾಣ ಪತ್ರ 50 ರೂ , ಸಾಲ ತೀರಿಸುವ ಶಕ್ತಿಯ ಬಗ್ಗೆ ದೃಡಿಕರಣ ಪತ್ರ 45 ರೂ, ಒಬಿಸಿ ಪ್ರಮಾಣ ಪತ್ರ 50 ರೂ , ಜೀವಂತವಿರುವ ಪ್ರಮಾಣ ಪತ್ರ 50 ರೂ, ಸರಕಾರಿ ಕೆಲಸದಲ್ಲಿ ಇಲ್ಲದ ಪ್ರಮಾಣ ಪತ್ರ 50 ರೂ, ನಿರುದ್ಯೋಗ ಪ್ರಮಾಣ ಪತ್ರ 45 ರೂ, ವಿಧವಾ ಪ್ರಮಾಣ ಪತ್ರ 45 ರೂ, ಭೂ ಹಿಡುವಳಿ ಪ್ರಮಾಣ ಪತ್ರ 50 ರೂ, ಅನುಕಂಪದ ಪ್ರಮಾಣ ಪತ್ರ 50 ರೂ, ಕೆನೆಪದರ ಅಲ್ಲದ ಪ್ರಮಾಣ ಪತ್ರ 50 ರೂ , ನಂಬಿಕೆಗೆ ಅರ್ಹ ಪ್ರಮಾಣ ಪತ್ರ 45 ರೂ, ಟೆನೆನ್ಸಿ ಇಲ್ಲ ಪ್ರಮಾಣಪತ್ರ 50 ರೂ, ಪಿಂಚಣಿದಾರರ ಜೀವನ ಪ್ರಮಾಣ ಪತ್ರ 50 ರೂ, ಜನಸಂಖ್ಯಾ ಪ್ರಮಾಣ ಪತ್ರ 50 ರೂ, ವಂಶ ವೃಕ್ಷ 50 ರೂ, ಮರು ವಿವಾಹವಾಗಿಲ್ಲ ಪ್ರಮಾಣ ಪತ್ರ 50 ರೂ, ಗೇಣಿರಹಿತ ದೃಢೀಕರಣ ಪತ್ರ 45 ರೂ. ಬೋನಾಫೈಡ್ ಪ್ರಮಾಣ ಪತ್ರ 50 ರೂ, ದ್ರಾವಣ ಪ್ರಮಾಣ ಪತ್ರ 50 ರೂ, ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಓ.ಟಿ.ಸಿ 30 ರೂ,ಜಾತಿ ಪ್ರಮಾಣ ಪತ್ರ (ಎಸ್.ಟಿ - ಎಸ್.ಸಿ) 30 ರೂ., ಆದಾಯ ದೃಡಿಕರಣ ಪ್ರಮಾಣ ಪತ್ರ ಒ.ಟಿ.ಸಿ 30 ರೂ, ನಿವಾಸಿ ದೃಢೀಕರಣ ಪತ್ರ ಒ.ಟಿ.ಸಿ 30 ರೂ. ಹಿರಿಯ ನಾಗರೀಕ ಚೀಟಿ 40 ರೂ ಮತ್ತು ಪಡಿತರ ಚೀಟಿ ಆನ್ ಲೈನ್ ಅರ್ಜಿ 50 ರೂ ಮಾತ್ರ ನೀಡುವಂತೆ ತಹಶೀಲ್ದಾರ್ ವಿನಂತಿಸಿದ್ದಾರೆ.