ಗೋಣಿಕೊಪ್ಪ ವರದಿ, ಜು. 24: ವಿವಿಧ ಸಂಘ-ಸಂಸ್ಥೆಗಳು ಒಂದಾಗಿ ‘ರೂಟ್ಸ್ ಆಫ್ ಕೊಡಗು’ ಅಭಿಯಾನದ ಹೆಸರಿನಲ್ಲಿ ಗಿಡ ನೆಡುವ ಯೋಜನೆಗೆ ಹಲವು ಸಂಘ-ಸಂಸ್ಥೆಗಳು ಮುಂದಾಗಿದೆ.
ಪರಿಸರ ಸಂರಕ್ಷಣೆಯ ಮೂಲ ಉದ್ದೇಶ ಹೊಂದಿದ್ದು, ಕಾವೇರಿಗೆ ಬೇರಾಗೋಣ ಬನ್ನಿ ಎಂಬ ಘೋಷವಾಕ್ಯದೊಂದಿಗೆ ಜನರನ್ನು ಒಂದೆಡೆ ಸೇರಿಸಲು ಯೋಜನೆ ರೂಪಿಸಿಕೊಂಡಿದೆ. ಇದರಂತೆ ತಾ. 27 ರಂದು ಆನೆಚೌಕೂರು ಗೇಟ್ ವ್ಯಾಪ್ತಿಯ ಅರಣ್ಯ ಪ್ರದೇಶದಲ್ಲಿ ಸುಮಾರು 60 ಸಾವಿರ ಗಿಡಗಳನ್ನು ನೆಡುವ ಮೂಲಕ ಜಾಗೃತಿ ಮೂಡಿಸುವ ಕಾರ್ಯಕ್ಕೆ ಮುಂದಾಗಿದೆ.
ಈಗಾಗಲೇ ಜಿಲ್ಲೆಯಾದ್ಯಂತ 70 ಕ್ಕೂ ಹೆಚ್ಚು ಸಂಘ ಸಂಸ್ಥೆಗಳು ಕೈಜೋಡಿಸಿದೆ. ತಾ. 27 ರಂದು ಮೈಸೂರು-ಕೊಡಗು ಹೆದ್ದಾರಿಯ ಆನೆಚೌಕೂರು ಗಡಿಯಿಂದ ವನ್ಯಜೀವಿ ಹಾಗೂ ಸಾಮಾಜಿಕ ಅರಣ್ಯ ವ್ಯಾಪ್ತಿಯಲ್ಲಿ ಗಿಡ ನೆಡುವ ಕಾರ್ಯಕ್ಕೆ ಉತ್ಸಾಹಿ ಯುವ ಸಮೂಹ ಮುಂದಾಗಲಿದೆ. ಬೀಜದುಂಡೆ ಮೂಲಕ ಬಿತ್ತುವ ಕಾರ್ಯ ಕೂಡ ಇದರೊಂದಿಗೆ ನಡೆಯಲಿದೆ.
ಪರಿಸರ ಸಂರಕ್ಷಣೆಯ ಈ ಕೆಲಸದಲ್ಲಿ ಹಣ್ಣಿನ ಗಿಡಕ್ಕೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಬೆಂಗಳೂರಿನ ಸೇ ಟ್ರೀ ಆರ್ಗನೈಸೇಷನ್ ಸುಮಾರು 50 ಸಾವಿರ ಬೀಜದುಂಡೆ ನೀಡುತ್ತಿದೆ. ಅರಣ್ಯ ಇಲಾಖೆ ನೀಡಿರುವ 10 ಸಾವಿರ ಗಿಡಗಳನ್ನು ನೆಡಲಾಗುತ್ತಿದೆ.
ಕೊಡವಾಮೆ ಸಂಘಟನೆ ಮತ್ತು ಜಾವಾ ಎಜ್ಡಿ ಮೋಟಾರ್‍ಸೈಕಲ್ ಕ್ಲಬ್ ಸದಸ್ಯರುಗಳು ಗಿಡ ನೆಡುವ ಅಭಿಯಾನವನ್ನು ಕಳೆದ 3 ವರ್ಷಗಳಿಂದ ನಡೆಸುತ್ತಾ ಬಂದಿವೆ. ಅಭಿಯಾನಕ್ಕೆ ಮತ್ತಷ್ಟು ಮಹತ್ವ ನೀಡುವ ಯೋಜನೆಯಾಗಿ ಸಾರ್ವಜನಿಕವಾಗಿ ರೂಟ್ಸ್ ಆಫ್ ಕೊಡಗು ಕಾರ್ಯಕ್ರಮವನ್ನು ಜಾರಿಗೆ ತಂದಿದೆ.
ಸುಮಾರು 400 ಕ್ಕೂ ಹೆಚ್ಚು ಕಾರ್ಯಕರ್ತರು ಅಭಿಯಾನದಲ್ಲಿ ತೊಡಗಿಕೊಳ್ಳುವ ನಿರೀಕ್ಷೆಯಿದೆ. ವಿವಿಧ ಸಂಘ-ಸಂಸ್ಥೆಗಳು ಜವಬ್ದಾರಿ ನಿಭಾಯಿಸಲು ಒಪ್ಪಿಕೊಂಡಿವೆ. ಸುಮಾರು 70 ಸಂಘ-ಸಂಸ್ಥೆಗಳ ಸಹಯೋಗದಲ್ಲಿ ಮೂಲಕ ಗಿಡ ನೆಡಲಾಗುತ್ತಿದೆ. ಅರಣ್ಯ ಇಲಾಖೆ, ಕರ್ನಾಟಕ ಶಕ್ತಿ ಪಡೆ, ಗೋಣಿಕೊಪ್ಪ ಲಯನ್ಸ್ ಕ್ಲಬ್, ಕುಶಾಲನಗರ ರೋಟರಿ ಕ್ಲಬ್, ಟಾಟಾ ಕಾಫಿ, ತಾಮರ ರೆಸಾರ್ಟ್ ಅಭಿಯಾನಕ್ಕೆ ಹೆಚ್ಚು ಸಹಕಾರ ನೀಡುತ್ತಿದೆ. ಸ್ಥಳದಲ್ಲಿ ವಾಹನ ದಟ್ಟಣೆ ನಿಭಾಯಿಸಲು ಜಾವಾ ಎಜ್ಡಿ ಕ್ಲಬ್ ಸದಸ್ಯರುಗಳು ಹೊಣೆ ಹೊತ್ತುಕೊಂಡಿದ್ದಾರೆ. ಊಟ, ಕುಡಿಯುವ ನೀರು, ಕಾಫಿ, ಪಾನೀಯ, ಉಪಹಾರವನ್ನು ತಲಪಿಸುವ ಜವಬ್ದಾರಿಯನ್ನು ವಿವಿಧ ಸಂಘ-ಸಂಸ್ಥೆಗಳು ನಿಭಾಯಿಸುತ್ತಿದೆ.
ಅಂತರ್ಜಲ ಮಟ್ಟ ಪೋಷಿಸು ವದು, ಮಾನವ-ವನ್ಯಪ್ರಾಣಿಗಳ ಸಂಘರ್ಷ ತಪ್ಪಿಸಲು ಇದರಿಂದ ಪ್ರಯೋಜನವಾಗಲಿದೆ. ಖಾಸಗಿ ಕಾರ್ಯಕ್ರಮದಲ್ಲೂ ಕಾರ್ಯಕ್ರಮದ ನೆನಪಿಗಾಗಿ ಒಂದೊಂದು ಗಿಡ ನೆಡುವಂತೆ ಪ್ರೋತ್ಸಾಹ ನೀಡಲಾಗುತ್ತಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಕಾರ್ಯಕರ್ತ ಚೇಂದಂಡ ಶಮ್ಮಿ ಮಾದಯ್ಯ,
-ಸುದ್ದಿಪುತ್ರ