ಶ್ರೀಮಂಗಲ, ಜು. 24: ಕೊಡಗು ಜಿಲ್ಲೆಯ ಮೂಲಕ ಯಾವದೇ ರೈಲ್ವೆ ಯೋಜನೆ ಅಗತ್ಯವಿಲ್ಲ. ಜಿಲ್ಲೆಯ ಮೂಲಕ ಉದ್ದೇಶಿತ ಏಳು ರಾಷ್ಟ್ರೀಯ ಹೆದ್ದಾರಿ ಯೋಜನೆ ಆತಂಕಕಾರಿಯಾಗಿದ್ದು, 260 ಅಡಿ ಅಗಲದ ಚತುಷ್ಪಥÀ ರಸ್ತೆಗೆ ವಿರೋಧ ವ್ಯಕ್ತವಾಗಿದ್ದು, 50 ಅಡಿ ಅಗಲದ ದ್ವಿಪಥ ಹೆದ್ದಾರಿ ಅಭಿವೃದ್ಧಿ ಪಡಿಸಬೇಕು ಎಂದು ಕೊಡಗು ಮಾರಕ ಯೋಜನೆ ವಿರೋಧಿ ಹೋರಾಟ ವೇದಿಕೆ ನೇತೃತ್ವದಲ್ಲಿ 25 ಕ್ಕೂ ಅಧಿಕ ಸಂಘ ಸಂಸ್ಥೆಗಳ ಪ್ರಮುಖರ ಉಪಸ್ಥಿತಿಯಲ್ಲಿ ನಡೆದ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.ಗೋಣಿಕೊಪ್ಪ ಸ್ಪೈಸ್‍ರಾಕ್ ಹೋಟೆಲ್ ಸಭಾಂಗಣದಲ್ಲಿ ವೇದಿಕೆಯ ಅಧ್ಯಕ್ಷ ರಾಜೀವ್ ಬೋಪಯ್ಯವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಯಿತು. ಸಭೆಯಲ್ಲಿ ನೆರೆ ರಾಜ್ಯದ ಸೌಕರ್ಯಕ್ಕಾಗಿ ಮತ್ತು ಪ್ರವಾಸೋದ್ಯಮದ ಅಭಿವೃದ್ಧಿಗಾಗಿ ಕೊಡಗನ್ನು ಬಲಿಕೊಡುವ ಯೋಜನೆ ಕೈಬಿಡಬೇಕು. ಪ್ರವಾಸೋದ್ಯಮಕ್ಕಾಗಿ ಕೊಡಗು ಹೊಂದಾಣಿಕೆಯಾಗಬೇಕಿಲ್ಲ. ಬದಲಿಗೆ ಕೊಡಗಿನ ಇತಿಮಿತಿ ಅರಿತು ಪ್ರವಾಸೋದ್ಯಮ ಹೊಂದಿಕೆಯಾಗಬೇಕೆಂದು ವೇದಿಕೆಯ ಅಧ್ಯಕ್ಷ ರಾಜೀವ್ ಬೋಪಯ್ಯ ಹೇಳಿದರು. ಈಗಾಗಲೇ ಪತ್ರಿಕೆಗಳಲ್ಲಿ ಹೆದ್ದಾರಿ ಪ್ರಾಧಿಕಾರವು ಸಾರ್ವಜನಿಕ ಪ್ರಕಟಣೆ ನೀಡಿದ್ದು, (ಮೊದಲ ಪುಟದಿಂದ) ಚತುಷ್ಪಥ ಹೆದ್ದಾರಿಗೆ ರಸ್ತೆ ಮಧ್ಯದಿಂದ ತಲಾ ಎರಡು ಬದಿ 130 ಅಡಿ (ಒಟ್ಟು 260 ಅಡಿ) ಜಾಗ ಸರ್ವೆ ಮಾಡಿ, ಗುರುತಿಸಿ, ಜಾಗ ಸ್ವಾಧೀನ ಪಡಿಸಿಕೊಳ್ಳಲು ಪ್ರಕ್ರಿಯೆಗೆ ಚಾಲನೆ ನೀಡಿದೆ. ಇದರಲ್ಲಿ ಮಡಿಕೇರಿ, ಸಿದ್ದಾಪುರ, ಅಮ್ಮತ್ತಿ, ಗೋಣಿಕೊಪ್ಪ, ಪೊನ್ನಂಪೇಟೆ, ಶ್ರೀಮಂಗಲ, ಕುಟ್ಟ ಮೂಲಕ ಮಾನಂದವಾಡಿ ಹೆದ್ದಾರಿಗೆ 260 ಅಡಿ ಜಾಗ ಸ್ವಾಧೀನÀಕ್ಕೆ ಸಾರ್ವಜನಿಕ ಪ್ರಕಟಣೆಯನ್ನು ಹೆದ್ದಾರಿ ಪ್ರಾಧಿಕಾರ ಪ್ರಕಟಿಸಿದೆ. ಈ ಯೋಜನೆ ಅನುಷ್ಠಾನವಾದರೆ ಜಿಲ್ಲೆಯ ರಸ್ತೆಬದಿಯಲ್ಲಿ ಆಸ್ತಿ ಪಾಸ್ತಿ ಹೊಂದಿರುವ ಬಹಳಷ್ಟು ಜನ ಬೀದಿಗೆ ಬೀಳಲಿದ್ದು, ಕೊಡಗಿನ ಪರಿಸರ ಸಹಿಸಿಕೊಳ್ಳುವಷ್ಟು ಮತ್ತು ಇಲ್ಲಿನ ಜನರ ಅಗತ್ಯಕ್ಕೆ ತಕ್ಕಂತಹ ಅಭಿವೃದ್ಧಿ ಬೇಕಾಗಿದೆಯೇ ಹೊರತು ಜಿಲ್ಲೆಯನ್ನು ವಿನಾಶದಂಚಿಗೆ ದೂಡುವ ಯೋಜನೆಗಳು ಅಗತ್ಯ ಇಲ್ಲ. ಈಗ ಇರುವ 25 ಅಡಿ ರಸ್ತೆಗಳನ್ನು ಇನ್ನೂ 25 ಅಡಿ ಸೇರಿಸಿ ಅಭಿವೃದ್ಧಿ ಪಡಿಸಿದರೆ ಸಾಕಾಗುತ್ತದೆ. ಈ ನಿಟ್ಟಿನಲ್ಲಿ ಜಿಲ್ಲೆಯ ಜನರು ಹೆದ್ದಾರಿಯಿಂದ ಆಸ್ತಿ ಪಾಸ್ತಿ ಕಳೆದುಕೊಳ್ಳುವ ಜನರ ಭಾವನೆಯನ್ನು ಅರಿತು ಜಿಲ್ಲೆಯ ಎಲ್ಲಾ ಜನರು ಬೆಂಬಲ ನೀಡಬೇಕೆಂದು ಹೇಳಿದರು.
ಕೇರಳ ರಾಜ್ಯದ ಅನುಕೂಲಕ್ಕಾಗಿ ಕೊಡಗಿನ ಮೂಲಕ ಚತುಷ್ಪಥÀ ರಸ್ತೆ ನಿರ್ಮಿಸಲು ಕೇರಳ ರಾಜ್ಯದ ಜನತೆ 60 ಸಾವಿರ ಸಹಿ ಮಾಡಿ ಕೇಂದ್ರ ಹಾಗೂ ರಾಜ್ಯ ಸರಕಾರದ ಮೇಲೆ ಒತ್ತಡ ತರುತ್ತಿವೆ. ಆದರೆ ಕೇರಳ ರಾಜ್ಯದಲ್ಲಿ 260 ಅಡಿ ಅಗಲದ ಹೆದ್ದಾರಿಗಳೇ ಇಲ್ಲ. ಕೊಡಗಿನ ಗಡಿಭಾಗದವರೆಗೆ 260 ಅಡಿ ಹೆದ್ದಾರಿ ಅವರಿಗೆ ಬೇಕು. ಕೇರಳದ ಒಳಗೆ ಕೇವಲ 25 ಅಡಿಯ ಹೆದ್ದಾರಿಗಳಿವೆ ಎಂದ ಅವರು ರಾಜ್ಯ ಸರಕಾರ ನೆರೆ ರಾಜ್ಯದ ಸೌಕರ್ಯಕ್ಕಾಗಿ ಕೊಡಗನ್ನು ಬಲಿಕೊಡಬಾರದು ಎಂದು ಹೇಳಿದರು.
ಗೋಣಿಕೊಪ್ಪ ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ಸುನೀಲ್ ಮಾದಪ್ಪ ಮಾತನಾಡಿ, ಗೋಣಿಕೊಪ್ಪ ಪಟ್ಟಣದಲ್ಲಿ ರಸ್ತೆ ಅಗಲೀಕರಣ ಮಾಡಿದರೆÉ ಬಹಳಷ್ಟು ಕಟ್ಟಡಗಳನ್ನು ಒಡೆಯಬೆಕಾಗುತ್ತದೆ. ಇದನ್ನು ತಪ್ಪಿಸಲು ಚೇಂಬರ್ ಆಫ್ ಕಾಮರ್ಸ್‍ನಿಂದ ಏಕಮುಖ ಸಂಚಾರಕ್ಕೆ ಅವಕಾಶ ಕಲ್ಪಿಸಿ ಇಲ್ಲಿನ ಕಟ್ಟಡ ಕೆಡವುದನ್ನು ತಪ್ಪಿಸಲು ಕ್ರಮ ಕೈಗೊಳ್ಳಲಾಗಿದೆ. ಹೀಗಿರುವಾಗ 80 ಮೀ ಅಗಲದ ಹೆದ್ದಾರಿ ರೂಪಿಸಿದರೆ ರಸ್ತೆ ಬದಿಯಲ್ಲಿ ಕಟ್ಟಡಗಳನ್ನು ಹೊಂದಿರುವವರು ದೊಡ್ಡ ಮಟ್ಟದ ನಷ್ಟ ಅನುಭವಿಸುತ್ತಾರೆ. ಅತೀ ವಿಸ್ತಾರದ ರಸ್ತೆ ಜಿಲ್ಲೆಗೆ ಅನಗತ್ಯವಾಗಿದೆ ಎಂದ ಅವರು ಅದರ ಬದಲು 15 ಮೀ ಅಗಲದ ಹೆದ್ದಾರಿ ಸಾಕಾಗುತ್ತದೆ ಎಂದು ಹೇಳಿದರು.
ಸಮಾಜ ಸೇವಕ ಐನಂಡ ಜಪ್ಪು ಅಚ್ಚಪ್ಪ ಮಾತನಾಡಿ 260 ಅಡಿ ಅಗಲದ ಹೆದ್ದಾರಿಯಿಂದ ಜಿಲ್ಲೆ ನಾಶವಾಗಲಿದೆ. ಇಲ್ಲಿನ ಸಾಂಸ್ಕøತಿಕ ಹಿನ್ನಲೆಗೂ ಧಕ್ಕೆಯಾಗಲಿದೆ. ಮಡಿಕೇರಿ-ಕುಶಾಲನಗರ ಹೆದ್ದಾರಿ ನಡುವೆ ಅಪಘಾತಗಳು ಹೆಚ್ಚಾಗುತ್ತಿರುವದರಿಂದ ಮತ್ತು ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಲು ಚತುಷ್ಪಥ ರಸ್ತೆ ಯೋಜನೆ ರೂಪಿಸಲಾಗುತ್ತಿದೆ ಎಂದು ಪ್ರತಿಪಾದಿಸಲಾಗುತ್ತಿದೆ. ಆದರೆ ಅಗ್ರಾ-ದೆಹಲಿ ನಡುವೆ ಯಮುನಾ ಎಕ್ಸ್‍ಪ್ರೆಸ್ ಹೆದ್ದಾರಿ 10 ಪಥ ಹೆದ್ದಾರಿಯಾಗಿದ್ದು, ಒಂದು ವರ್ಷದಲ್ಲಿ ಇಲ್ಲಿ 6 ಸಾವಿರ ಮೇಲ್ಪಟ್ಟು ಅಪಘಾತಗಳಾಗಿವೆ. ಹೆದ್ದಾರಿಗಳು ವೈಜ್ಞಾನಿಕವಾಗಿರಬೇಕೇ ಹೊರತು ಪರಿಸರ ಹಾಗೂ ಜನರ ಆಸ್ತಿಪಾಸ್ತಿ ನಾಶ ಮಾಡುವ ಹೆದ್ದಾರಿ ಯೋಜನೆ ಸರಿಯಲ್ಲ. ಅಂಡಮಾನ್‍ನಿಂದ ಪೋರ್ಟ್‍ಬ್ಲೇರ್‍ಗೆ ಗ್ರಾಂಡ್ ಟ್ರಂಕ್ ರಾಷ್ಟ್ರೀಯ ಹೆದ್ದಾರಿ ಸಣ್ಣ ರಸ್ತೆಯಾಗಿದ್ದು,ಇದೇ ರೀತಿ ತಮಿಳುನಾಡು, ಕೇರಳ ರಾಜ್ಯಗಳಲ್ಲಿಯೂ ದ್ವಿಪಥದ ರಾಷ್ಟ್ರೀಯ ಹೆದ್ದಾರಿ ಇದೆ. ಹಾಗಿರುವಾಗ ಕೊಡಗಿನ ನಡುವೆ ಚತುಷ್ಪಥÀ ರಸ್ತೆಯ ಅಗತ್ಯವಿಲ್ಲ ಎಂದು ಹೇಳಿದರು.
ಪೊನ್ನಂಪೇಟೆ ಹಿರಿಯ ನಾಗರಿಕ ವೇದಿಕೆಯ ಉಪಾಧ್ಯಕ್ಷ ಚೆಪ್ಪುಡಿರ ಸೋಮಯ್ಯ ಮಾತನಾಡಿ, ಕೊಡಗಿನಿಂದ ಕೇರಳಕ್ಕೆ ಅಥವಾ ನೆರೆ ಜಿಲ್ಲೆಗೆ ಒಂದೇ ರಸ್ತೆಯಿಲ್ಲ. ಹಲವಾರು ರಸ್ತೆ ಇರುವದರಿಂದ ಚತುಷ್ಪಥÀ ರಸ್ತೆಯ ಅಗತ್ಯತೆ ಇಲ್ಲ. ದ್ವಿಪಥ ರಸ್ತೆ ಮಾಡುವ ಮೂಲಕ ಇಲ್ಲಿನ ಜನರ ಆಸ್ತಿ ಪಾಸ್ತಿಗೆ ಹೆಚ್ಚಿನ ಹಾನಿಯಾಗುವದನ್ನು ತಡೆಗಟ್ಟಬಹುದು ಎಂದು ಹೇಳಿದರು.
ಜನಪ್ರತಿನಿಧಿಗಳಿಗೆ ಪತ್ರ: ದಕ್ಷಿಣ ಕೊಡಗಿನ ಕೊಂಗಣಪೊಳೆ- ಕಕ್ಕಟ್ಟ್‍ಪೊಳೆ ನದಿ ತಿರುವು ಯೋಜನೆ ಬಗ್ಗೆ ಮಾಹಿತಿ ನೀಡಲು ಒತ್ತಾಯ.
ಕೊಡಗಿನೊಳಗೆ ಹೆದ್ದಾರಿ ಮತ್ತು ರೈಲ್ವೆ ಮಾರ್ಗ ರೂಪಿಸುವ ಬಗ್ಗೆ ಸಂಸದ ಪ್ರತಾಪ್ ಸಿಂಹ ಶಾಸಕರುಗಳಾದ ಕೆ.ಜಿ. ಬೋಪಯ್ಯ, ಅಪ್ಪಚ್ಚು ರಂಜನ್, ವಿಧಾನ ಪರಿಷತ್ ಸದಸ್ಯರುಗಳಾದ ವೀಣಾ ಅಚ್ಚಯ್ಯ, ಸುನೀಲ್ ಸುಬ್ರಮಣಿ ಅವರಿಗೆ ಪತ್ರ ಬರೆದು ಈ ಯೋಜನೆ ಶಾಶ್ವತವಾಗಿ ತಡೆಹಿಡಿದು ಇರುವ ರಸ್ತೆಯನ್ನೇ ದ್ವಿಪಥ ರಸ್ತೆ ಮಾಡಿ ಅಭಿವೃದ್ಧಿಪಡಿಸಲು ಮನವಿ ಮಾಡಲಾಯಿತು.
ದ.ಕೊಡಗಿನ ಕಕ್ಕಟ್ಟ್‍ಪೊಳೆ ಮತ್ತು ಕೊಂಗಣಪೊಳೆ ನದಿಗಳನ್ನು ತಿರುವು ಮಾಡಿ ನದಿ ನೀರನ್ನು ಬೆಂಗಳೂರಿಗೆ ಕುಡಿಯುವ ನೀರಿಗಾಗಿ ಹರಿಸಲು ಯೋಜನೆ ರೂಪಿಸಲಾಗುತ್ತಿದೆ. ಈ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಜಿಲ್ಲೆಯ ಜನಪ್ರತಿನಿಧಿಗಳು ಕೊಡಗಿನ ಜನರಿಗೆ ನೀಡುವಂತಾಗಬೇಕೆಂದು ಪತ್ರದಲ್ಲಿ ಕೇಳಲಾಗಿದೆ.
ವೇದಿಕೆಯಲ್ಲಿ ಕರ್ನಲ್ ಸಿ.ಪಿ. ಮುತ್ತಣ್ಣ, ಸಭೆಯಲ್ಲಿ ಪೊನ್ನಂಪೇಟೆ ಕೊಡವ ಸಮಾಜದ ಕಾರ್ಯದರ್ಶಿ ಪೊನ್ನಿಮಾಡ ಸುರೇಶ್, ಮಾಜಿ ಅಧ್ಯಕ್ಷ ಚೆಪ್ಪುಡಿರ ಪೊನ್ನಪ್ಪ, ಪೊನ್ನಂಪೇಟೆ ನಾಡು ಮಾಜಿ ಸೈನಿಕರ ಅಧ್ಯಕ್ಷ ಐನಂಡ ಮಂದಣ್ಣ, ಕೊಡಗು-ಹಿಂದೂ ಮಲೆಯಾಳಿ ಸಮಾಜದ ಅಧ್ಯಕ್ಷ ಶರತ್‍ಕಾಂತ್, ಪೊನ್ನಂಪೇಟೆ ಹಿರಿಯ ನಾಗರಿಕ ಸಮಿತಿಯ ಅಧ್ಯಕ್ಷ ಕೊಕ್ಕಳಿಚಂಡ ಪೂಣಚ್ಚ, ಎರ್ಮು ಹಾಜಿ, ಕಾವೇರಿ ಸೇನೆ ಸಂಚಾಲಕ ರವಿ ಚಂಗಪ್ಪ, ಫೀ.ಮಾ. ಕಾರ್ಯಪ್ಪ-ಜನರಲ್ ತಿಮ್ಮಯ್ಯ ಫೊರಂನ ಮೇಜರ್ ಬಿ.ಎ. ನಂಜಪ್ಪ, ಅಖಿಲ ಕೊಡವ ಸಮಾಜದ ಮಂಡೇಪಂಡ ಸುಗುಣ ಮುತ್ತಣ್ಣ, ಗೋಣಿಕೊಪ್ಪ ಕೊಡವ ಸಮಾಜದ ಕಾರ್ಯದರ್ಶಿ ಸಿ.ಡಿ. ಮಾದಪ್ಪ, ಯುಕೋ ಸಂಘಟನೆಯ ಸಂಚಾಲಕ ಮಂಜು ಚಿಣ್ಣಪ್ಪ, ಜಿಲ್ಲಾ ಸಾರ್ವಜನಿಕ ಹಿತರಕ್ಷಓಂ ಸಮಿತಿ ಪ್ರ. ಕಾರ್ಯದರ್ಶಿ ಸತೀಶ್ ದೇವಯ್ಯ, ಗೋಣಿಕೊಪ್ಪ ಲಯನ್ಸ್ ಕ್ಲಬ್ ಅಧ್ಯಕ್ಷೆ ನೀತಿ ಪೂಣಚ್ಚ, ಮಾಜಿ ಅಧ್ಯಕ್ಷ ಸ್ಮರಣ್ ಸುಭಾಶ್, ಕೊಡಗು ವನ್ಯ ಜೀವಿ ಸಂಘದ ಕಾರ್ಯದರ್ಶಿ ಅಪ್ಪಾರಂಡ ತರುಣ್ ಕಾರ್ಯಪ್ಪ, ಕೊಡಗು ಬೆಳೆಗಾರರ ಒಕ್ಕೂಟದ ತಾಂತ್ರಿಕ ಸಲಹೆಗಾರ ಶೆರಿ ಸುಬ್ಬಯ್ಯ, ಬೊಳ್ಳೇರ ರಾಜಾ ಸುಬ್ಬಯ್ಯ, ಬೆಳೆಗಾರ ಒಕ್ಕೂಟದ ಮಹಿಳಾ ಘಟಕದ ಯಮುನಾ ಚಂಗಪ್ಪ, ಇ.ಹೆಚ್. ಫೌಂಡೇಶನ್‍ನ ಕೊಟ್ಟಂಗಡ ಶೈಲಾ, ಗೋಣಿಕೊಪ್ಪ ಕೊಡವ ಸಮಾಜದ ಕಾರ್ಯದರ್ಶಿ ಸಿ.ಡಿ. ಮಾದಪ್ಪ,ಕಾನೂನು ಸಲಹೆಗಾರ ಮತ್ರಂಡ ಅಪ್ಪಚ್ಚು, ಅಮ್ಮತ್ತಿ ರೈತ ಸಂಘದ ಅಧ್ಯಕ್ಷ ಕಾವಡಿಚಂಡ ಗಣಪತಿ, ಕೊಡಗು ರೈತ ಸಂಘ ಪ್ರೊ. ನಂಜುಂಡ ಸ್ವಾಮಿ ಬಣದ Pಳ್ಳಿಚಂಡ ಧನು, ಆರ್ಟ್ ಆಫ್ ಲೀವಿಂಗ್‍ನ ಡಾನ್ ರಾಜಪ್ಪ, ಗೋಣಿಕೊಪ್ಪ ಚೇಂಬರ್ ಆಫ್ ಕಾಮರ್ಸ್‍ನ ಚೇಂದಂಡ ಸುಮಿ ಸುಬ್ಬಯ್ಯ, ಗೋಣಿಕೊಪ್ಪ ಕಾವೇರಿ ಕಾಲೇಜು ಹಳೆ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ವಾಣಿ, ಪೊನ್ನಂಪೇಟೆ ಎ.ಪಿ.ಸಿ.ಎಂ.ಎಸ್ ಮಾಜಿ ಅಧ್ಯಕ್ಷ ಮಲ್ಲಮಾಡ ಪ್ರಭು ಪೂಣಚ್ಚ, ಕ್‍ಗ್ಗಟ್ ನಾಡ್ ಹಿತರಕ್ಷಣಾ ಬಳಗದ ಚಿರಿಯಪಂಡ ರಾಜಾ ನಂಜಪ್ಪ, ಚೂರಿಕಾಡು ಕೊಡವ ವೆಲ್‍ಫೆರ್ ಅಸೋಸಿಯೇಷನ್‍ನ ಅಳಮೇಂಗಡ ಮೋಟಯ್ಯ, ನಾಲ್ಕೇರಿ ಶ್ರೀ ಕೃಷ್ಣ ಸಂಘದ ಗುಡಿಯಂಗಡ ನಾಚಪ್ಪ, ಜಿ.ಪಂ. ಮಾಜಿ ಸದಸ್ಯ ರಂಜನ್ ಚಂಗಪ್ಪ, ಕನ್ನಿ ಕಾವೇರಿ ಟ್ರಸ್ಟ್‍ನ ಚೇಂದಂಡ ಚುಮ್ಮಿ ಪೂವಯ್ಯ, ವಾಲ್ನೂರು ಬಸವನ ದೇವರ ಬನ ಸಂರಕ್ಷಣ ಟ್ರಸ್ಟ್‍ನ ಚೇಂದಂಡ ಜಫ್ರಿ, ನಾಪೊಕ್ಲು ಸತ್ಯಾನ್ವೇಷಣೆ ಸಮಿತಿಯ ಕೇಟೋಳಿರ ಸನ್ನಿ ಸೋಮಣ್ಣ, ಕಡಗದಾಳು ಕಾವೇರಿ ಸೇನೆಯ ಶಿವಕುಮಾರ್, ಸೇರಿದಂತೆ 30ಕ್ಕೂ ಅಧಿಕ ಸಂಘಟನೆಗಳ ಪ್ರಮುಖರು ಸಭೆಯಲ್ಲಿ ಪಾಲ್ಗೊಂಡು ಮುಂದಿನ ನಡೆ ಬಗ್ಗೆ ಕಾರ್ಯಕ್ರಮ ರೂಪಿಸಲು ಸಮಿತಿಯನ್ನು ರಚಿಸಲಾಯಿತು.