ಮಡಿಕೇರಿ, ಜು. 24: ಭಾರತೀಯ ಹವಾಮಾನ ಇಲಾಖೆ ಜಿಲ್ಲೆಗೆ ಈ ಹಿಂದೆ ನೀಡಿದ್ದ ರೆಡ್ ಅಲರ್ಟ್ ಅನ್ನು ಹಿಂಪಡೆದಿದ್ದು, ಜಿಲ್ಲೆಯಲ್ಲಿ ತಾ. 25 ರಿಂದ 29ರ ಬೆಳಗ್ಗಿನವರೆಗೆ ಸಾಮಾನ್ಯ ಮಳೆಯಾಗಲಿದೆ ಹಾಗೂ ಜಿಲ್ಲೆಯ ಒಳನಾಡು ಪ್ರದೇಶಗಳಲ್ಲಿ ಅಲ್ಲಲ್ಲಿ ಭಾರೀ ಮಳೆಯಾಗುವ ನಿರೀಕ್ಷೆ ಇದೆ ಎಂದು ತಿಳಿಸಿದೆ.ಪ್ರಕೃತಿ ವಿಕೋಪ ಸಂಬಂಧಿತ ಯಾವದೇ ಸಮಸ್ಯೆಗಳಿಗೆ ದೂ. 08272-2210077 ಮತ್ತು ವಾಟ್ಸಪ್ ನಂ. 8550001077ನ್ನು ಸಂಪರ್ಕಿಸಲು ಜಿಲ್ಲಾಡಳಿತ ಕೋರಿದೆ.