ವರದಿ: ರಜಿತ ಕಾರ್ಯಪ್ಪ ವೀರಾಜಪೇಟೆ; ಜು. 25: ವೀರಾಜಪೇಟೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಹಾಗೂ ಶಾಂತ ಮಲ್ಲ ಸ್ವಾಮಿ ವಿದ್ಯಾಪೀಠದ ಸಹಯೋಗದಲ್ಲಿ ತಾ. 29 ರಂದು ನಡೆಯಲಿರುವ 8ನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನವು ಅರಮೇರಿ ಕಳಂಚೇರಿ ಮಠದ ಶ್ರೀ ಲಿಂಗರಾಜೇಂದ್ರ ಸಭಾಂಗಣದಲ್ಲಿ ನಡೆಯಲಿದೆ. ಈ ಸಂದರ್ಭದಲ್ಲಿ ದ್ವಜಾರೋಹಣ ಕಾರ್ಯಕ್ರಮ ಬೆಳಿಗ್ಗೆ 7.15ಕ್ಕೆ ನಡೆಯಲಿದ್ದು ರಾಷ್ಟ್ರ ಧ್ವಜಾರೋಹಣವನ್ನು ತಾಲೂಕು ತಹಶೀಲ್ದಾರ್ ಕೆ.ಪುರಂದರ ಹಾಗೂ ನಾಡಧ್ವಜವನ್ನು ಜಿಲ್ಲಾಧ್ಯಕ್ಷ ಲೋಕೇಶ್ ಸಾಗರ್ ಮತ್ತು ಪರಿಷತ್ ಧ್ವಜವನ್ನು ತಾಲೂಕು ಅಧ್ಯಕ್ಷ ಮಧೋಶ್ ಪೂವಯ್ಯ ನೆರವೇರಿಸಲಿದ್ದಾರೆ.ಬೆಳಿಗ್ಗೆ 8.45 ಕ್ಕೆ ಸ್ಮಾರಕ ದ್ವಾರಗಳಾದ ಮುಖ್ಯದ್ವಾರ ಕಾರ್ಗಿಲ್ ವೀರ ಪೆಮ್ಮಂಡ ಕಾವೇರಪ್ಪ ದ್ವಾರವನ್ನು ತಾಲೂಕು ಪಂಚಾಯತ್ ಸದಸ್ಯ ಬಿ.ಎಂ.ಗಣೇಶ್, ಸ್ವಾತಂತ್ರ್ಯ ಹೋರಾಟಗಾರ ಕೂವಲೇರ ಸೂಫಿ ಸ್ಮಾರಕ ದ್ವಾರವನ್ನು ತಾ.ಪಂ. ಸದಸ್ಯ ಮಾಳೇಟಿರ ಪ್ರಶಾಂತ್, ಜನಪದ ವೀರ ಮಹಿಳೆ ಅಳಮಂಡ ದೊಡ್ಡವ್ವ ಸ್ಮಾರಕ ದ್ವಾರ ತಾ.ಪಂ. ಸದಸ್ಯೆ ಆಲತಂಡ ಸೀತಮ್ಮ, ಉದ್ಘಾಟಿಸಲಿದ್ದಾರೆ.
ಬೆಳಿಗ್ಗೆ 9.30ಕ್ಕೆ ಮಡಿಕೇರಿ ವೀರಾಜಪೇಟೆ ಮುಖ್ಯ ರಸ್ತೆಯಿಂದ ಅರಮೇರಿ ಮಠದವರಗೆ ಮಂಗಳವಾದ್ಯ, ಕಳಸಗಳು, ಕಲಾತಂಡಗಳು ಬ್ಯಾಂಡ್ ಸೆಟ್ ಇತ್ಯಾದಿಗಳೊಂದಿಗೆ ಸಮ್ಮೇಳನಾಧ್ಯಕ್ಷೆ ನಾಯಕಂಡ ಬೇಬಿ ಚಿಣ್ಣಪ್ಪ ಅವರ ಮೆರವಣಿಗೆ ನಡೆಯಲಿದೆ. ಇದನ್ನು ಸ್ಥಳಿಯ ಜಿ.ಪಂ. ಸದಸ್ಯರಾದ ಮೂಕೊಂಡ ಶಶಿ ಸುಬ್ರಮಣಿ ಉದ್ಘಾಟಿಸಲಿದ್ದಾರೆ. ಕಲಾ ತಂಡಗಳ ಉದ್ಘಾಟನೆ ತಾ.ಪಂ. ಸದಸ್ಯ ಕುಟ್ಟಂಡ ಅಜಿತ್ ಕರುಂಬಯ್ಯ ಮಾಡಲಿದ್ದಾರೆ.
ಬೆಳಿಗ್ಗೆ 10.30ಕ್ಕೆ ಲಿಂಗೈಕ್ಯ ಶ್ರೀ ಶಾಂತಮಲ್ಲ ಸ್ವಾಮಿ ಮುಖ್ಯದ್ವಾರ, (ಸಭಾಂಗಣದ ಮುಂಭಾಗ)ವನ್ನು ಶಿಕ್ಷಣ ಮತ್ತು ಆರೀಗ್ಯ ಸ್ಥಾಯಿ ಸಮಿತಿ ಅಧ್ಯಕ್ಷರಾದ ನೆಲ್ಲಚಂಡ ಕಿರಣ್ ಉದ್ಘಾಟಿಸಲಿದ್ದಾರೆ.
ಸಾಹಿತಿ ಪುಗ್ಗೇರ ಕರುಂಬಯ್ಯ ಸ್ಮಾರಕ ಪುಸ್ತಕ ಮಳಿಗೆಯನ್ನು ಜಿ.ಪಂ. ಸದಸ್ಯೆ ಅಪ್ಪಂಡೇರಂಡ ಭವ್ಯ ಲಿಂಗೈಕ್ಯ ದೊಡ್ಡ ಮಹಂತಪ್ಪ ಸ್ವಾಮಿ ಸಭಾಂಗಣವನ್ನು ತಾ.ಪಂ. ಸದಸ್ಯೆ ಬೊಳ್ಳಚಂಡ ಸ್ಮಿತಾ ಪ್ರಕಾಶ್, ಮತ್ತು ಲಿಂಗೈಕ್ಯ ಸೋಮಶೇಖರ ಸ್ವಾಮಿ ವೇದಿಕೆಯ ಉದ್ಘಾಟನೆಯನ್ನು ಜಿ.ಪಂ. ಸದಸ್ಯ ಅಚ್ಚಪಂಡ ಮಹೇಶ್ ಗಣಪತಿ ಉದ್ಘಾಟಿಸಲಿದ್ದು ಈ ಸಂದರ್ಭದಲ್ಲಿ ಸ್ಥಳಿಯ ಪ್ರಮುಖರು, ಜನಪ್ರತಿನಿಧಿಗಳು ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ.
ಬೆಳಿಗ್ಗೆ 10.45ಕ್ಕೆ ಉದ್ಘಾಟನಾ ಸಮಾರಂಭ ನಡೆಯಲಿದ್ದು ಶಾಸಕ ಕೆ.ಜಿ. ಬೋಪಯ್ಯ ಉದ್ಘಾಟನೆ ನೆರವೇರಿಸಲಿದ್ದಾರೆ. ಸಮ್ಮೇಳ ನಾಧ್ಯಕ್ಷತೆಯನ್ನು ನಾಯಕಂಡ ಬೇಬಿ ಚಿಣ್ಣಪ್ಪ ವಹಿಸಲಿದ್ದಾರೆ. ಅರಮೇರಿ ಕಳಂಚೇರಿ ಮಠದ ಶಾಂತ ಮಲ್ಲಿಕಾರ್ಜುನ ಸ್ವಾಮಿಗಳು ಸಾನಿದ್ಯ ವಹಿಸಲಿದ್ದಾರೆ. ನಿಕಟ ಪೂರ್ವ ಸಮ್ಮೇಳನಾಧ್ಯಕ್ಷೆ ಕುಲ್ಲಚಂಡ ಚಿಪ್ಪ ಕಾರ್ಯಪ್ಪ ಉಪಸ್ಥಿತರಿರುತ್ತಾರೆ.
ಜಿ.ಪಂ. ಅಧ್ಯಕ್ಷ
(ಮೊದಲ ಪುಟದಿಂದ) ಹರೀಶ್ ಪುಸ್ತಕ ಬಿಡುಗಡೆ ಮಾಡಲಿದ್ದಾರೆ. ಮುಖ್ಯ ಅಥಿತಿಗಳಾಗಿ ಶಾಸಕ ಅಪ್ಪಚ್ಚು ರಂಜನ್, ವಿಧಾನ ಪರಿಷತ್ ಸದಸ್ಯರಾದ ಶಾಂತೆಯಂಡ ವೀಣಾ ಅಚ್ಚಯ್ಯ ಮತ್ತು ಮಂಡೇಪಂಡ ಸುನಿಲ್ ಸುಬ್ರಮಣಿ, ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಪೆಮ್ಮಂಡ ಕೆ. ಪೊನ್ನಪ್ಪ , ತಾ ಪಂ ಅಧ್ಯಕ್ಷೆ ಬೊಳ್ಳಚಂಡ ಸ್ಮಿತಾ ಪ್ರಕಾಶ್, ನೆಲ್ಲಿರ ಚಲನ್, ಕಾಂತಿ ಸತೀಶ್, ಮೂಕೊಂಡ ಶಶಿ ಸುಬ್ರಮಣಿ, ಅಮ್ಮಣಿಚಂಡ ರಾಜ ನಂಜಪ್ಪ, ಪೂಳಂಡ ವಿನು, ಪೂಳಂಡ ಮಾಚಯ್ಯ, ಉದಿಯಂಡ ಚಂಗಪ್ಪ, ಬಲ್ಲಚಂಡ ಸೋಮಣ್ಣ, ಕಾಣತಂಡ ಧನು, ಮತ್ತಿತರ ಗಣ್ಯ ಪ್ರಮುಖರು ಉಪಸ್ಥಿತರಿರುತ್ತಾರೆ. ಅಲ್ಲದೆ ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಲೋಕೇಶ್ ಸಾಗರ್ ಮತ್ತು ತಾಲೂಕು ಅಧ್ಯಕ್ಷ ಮುಲ್ಲೇಂಗಡ ಮಧೋಶ್ ಪೂವಯ್ಯ, ಮಡಿಕೇರಿ ತಾಲ್ಲೂಕು ಕ.ಸಾ.ಪ. ಅಧ್ಯಕ್ಷ ಕುಡೆಕಲ್ ಸಂತೋಷ್, ಸೋಮವಾರಪೇಟೆ ತಾಲ್ಲೂಕು ಅಧ್ಯಕ್ಷ ಎಸ್.ಡಿ.ವಿಜೇತ್, ಅಮ್ಮತ್ತಿ ಹೋಬಳಿ ಅಧ್ಯಕ್ಷ ಜಾನ್ಸನ್, ಪೊನ್ನಂಪೇಟೆ ತಾಲೂಕು ಅಧ್ಯಕ್ಷ ಚಂದ್ರಶೇಖರ್ ಉಪಸ್ಥಿತರಿರುತ್ತಾರೆ.
ಅಪರಾಹ್ನ 12.30ಕ್ಕೆ ವಿ.ಪೇ ಕಾವೇರಿ ಕಾಲೇಜಿನ ಪ್ರಾಂಶುಪಾಲರಾದ ಇಟ್ಟಿರ ಕಮಲಾಕ್ಷಿ ಬಿದ್ದಪ್ಪ ಅಧ್ಯಕ್ಷತೆಯಲ್ಲಿ ವಿಚಾರ ಗೋಷ್ಠಿ ನಡೆಯಲಿದೆ. ಕನ್ನಡ ಸಾಹಿತ್ಯಕ್ಕೆ ಕೊಡಗಿನವರ ಕೊಡುಗೆ ಈ ವಿಷಯದಲ್ಲಿ ಸಂತ ಅನ್ನಮ್ಮ ಕಾಲೇಜಿನ ಉಪನ್ಯಾಸಕರಾದ ಅರ್ಜುನ್ ಟಿ.ಎನ್, ಹಾಗೂ ಜನಪದ ಸಾಹಿತ್ಯದಲ್ಲಿ ಸ್ತ್ರೀಶಕ್ತಿ ವಿಷಯದಲ್ಲಿ ಕಾವೇರಿ ಕಾಲೇಜು ಉಪನ್ಯಾಸಕರಾದ ಕಾಳೇಂಗಡ ದಮಯಂತಿ ವಿಚಾರ ಮಂಡಿಸಲಿದ್ದಾರೆ. ಈ ಸಂದರ್ಭ ಮುಖ್ಯ ಅತಿಥಿಗಳಾಗಿ ಎಸ್ಎಂಎಸ್ ವಿದ್ಯಾಪೀಠದ ಪ್ರಾಂಶುಪಾಲೆ ಬಲ್ಲಚಂಡ ಕುಸುಮ್ ಟಿಟೋ ಉಪಸ್ಥಿತರಿರುವರು.
ನಂತರ 1.15ಕ್ಕೆ ಚಿತ್ರಕಲಾವಿದರಾದ ಬಿ.ಆರ್. ಸತೀಶ್ ನೇತೃತ್ವದಲ್ಲಿ ಕಾವ್ಯ ಕುಂಚ ಕಾರ್ಯಕ್ರಮ ನಡೆಯಲಿದೆ.
1.30ಕ್ಕೆ ಕವಿಗೋಷ್ಠಿ ಕಾರ್ಯಕ್ರಮ ಸಾಹಿತಿ ಪ್ರೊ ದಂಬೆಕೋಡಿ ಸುಶೀಲ ಅಧ್ಯಕ್ಷತೆಯಲ್ಲಿ ನಡೆಯಲಿದ್ದು, ಕನ್ನಡ ಜಾಗೃತಿ ಸಮಿತಿ ಕರ್ನಾಟಕ ಸರಕಾರದ ನಿರ್ದೇಶಕಿ ಮುಲ್ಲೇಂಗಡ ರೇವತಿ ಪೂವಯ್ಯ ಮುಖ್ಯ ಅತಿಥಿಗಳಾಗಿದ್ದಾರೆ. ಬಡಕಡ ರಜಿತ ಕಾರ್ಯಪ್ಪ, ತಾತಂಡ ರಾಣಿ ನಂಜಪ್ಪ, ನಳಿನಿ ಬಿಂದು, ಚೆಂಬಾಂಡ ಶಿವಿ ಭೀಮಯ್ಯ, ನಾ ಕನ್ನಡಿಗ, ವಿಮಲ ದಶರಥ, ವೈಲೇಶ್ ಪಿ.ಎಸ್, ಪುಷ್ಪಲತ ಶಿವಪ್ಪ, ಕು.ಹೇಮಾವತಿ ತಸ್ಲೀನಾ ಎಂ.ಎ. ಕವನ ವಾಚನ ಮಾಡಲಿದ್ದಾರೆ.
ಅಪರಾಹ್ನ 3 ಗಂಟೆಗೆ ಬಹಿರಂಗ ಅಧಿವೇಶನ ವಿ.ಪೇ ತಾಲೂಕು ಸಾಹಿತ್ಯ ಪರಿಷತ್ ಅಧ್ಯಕ್ಷ ಮಧೋಶ್ ಪೂವಯ್ಯ ಅಧ್ಯಕ್ಷತೆಯಲ್ಲಿ ನಡೆಯಲಿದೆ. ಗೌರವ ಕಾರ್ಯದರ್ಶಿಗಳಾದ ಆರ್ ಸುಬ್ರಮಣಿ, ಮತ್ತು ನಳೀನಾಕ್ಷಿ ಕೋಶಾಧಿಕಾರಿ ಪ್ರವೀಣ್ ಚಂಗಪ್ಪ ನಿರ್ಣಯ ಮಂಡನೆ ಮಾಡಲಿದ್ದಾರೆ.
ಸನ್ಮಾನ ಮತ್ತು ಸಮಾರೋಪ ಸಮಾರಂಭ 3.30ಕ್ಕೆ ತಾಲೂಕು ಅಧ್ಯಕ್ಷ ಮಧೋಶ್ ಪೂವಯ್ಯ ಅಧ್ಯಕ್ಷತೆಯಲ್ಲಿ ನಡೆಯಲಿದೆ. ಆಶಯ ನುಡಿಯನ್ನು ಸಮ್ಮೇಳನಾಧ್ಯಕ್ಷೆ ಬೇಬಿ ಚಿಣ್ಣಪ್ಪ ನುಡಿಯಲಿದ್ದಾರೆ. ಸಾಹಿತ್ಯ ಸಮ್ಮೇಳನದ ಸ್ವಾಗತ ಸಮಿತಿ ಅಧ್ಯಕ್ಷ ಕೆ.ಜಿ. ಬೋಪಯ್ಯ , ತಾ.ಪಂ. ಅಧ್ಯಕ್ಷೆ ಬೊಳ್ಳಚಂಡ ಸ್ಮಿತಾ ಪ್ರಕಾಶ್, ತಾಲೂಕು ತಹಶೀಲ್ದಾರ್ ಕೆ. ಪುರಂದರ, ತಾ.ಪಂ. ಕಾರ್ಯನಿರ್ವಾಹಣಾಧಿಕಾರಿ ಹೆಚ್.ಎಂ. ಷಣ್ಮುಗಂ, ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀ ಶೈಲ ಬೀಳಗಿ, ಡಿವೈ.ಎಸ್.ಪಿ. ನಾಗಪ್ಪ, ತಾಲೂಕು ವೈದ್ಯಾಧಿಕಾರಿ ಡಾ. ಯತಿರಾಜ್ ಸರಕಾರಿ ನೌಕರರ ಸಂಘದ ಅಧ್ಯಕ್ಞ ಬಿ.ಎಸ್. ಗುರುರಾಜ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಇ. ಸುರೇಂದ್ರ ಮುಖ್ಯ ಅತಿಥಿಗಳಾಗಿ ಪಾಲ್ಗೋಳ್ಳಲಿದ್ದಾರೆ.
ಜಿಲ್ಲಾಧ್ಯಕ್ಷ ಲೋಕೇಶ್ಸಾಗರ್ ಜಿಲ್ಲಾಧ್ಯಕ್ಷರ ನುಡಿಯಾಡಲಿದ್ದಾರೆ. ಜಿ.ಕ.ಸಾ.ಪ. ಗೌರವ ಕಾರ್ಯದರ್ಶಿಗಳಾದ ಮೇಚೀರ ಸುಭಾಷ್ ನಾಣಯ್ಯ, ಹಾಗೂ ಕೆ.ಎಸ್ ರಮೇಶ್ ಗೌರವ ಕೋಶಾಧಿಕಾರಿ ಎಸ್.ಎ. ಮುರಳಿಧರ್, ಜಿಲ್ಲಾ ನಿರ್ದೆಶಕರುಗಳಾದ ಪಾರ್ಥ ಚಿಣ್ಣಪ್ಪ, ರೆಜಿತ್ಕುಮಾರ್ ಎಂ.ಎಸ್. ವೆಂಕಟೇಶ್ ಉಪಸ್ಥಿತರಿರುವರು.
ಈ ಸಂದರ್ಭ, ಶತಾಯುಷಿಗಳಾದ ಕಾಣತಂಡ ಬೊಳ್ಯವ್ವ, ಸಾಹಿತ್ಯ ಕ್ಷೇತ್ರದಲ್ಲಿ ಮುಲ್ಲೇಂಗಡ ಬೇಬಿ ಚೋಂದಮ್ಮ, ಸಾಮಾಜಿಕ ಕ್ಷೇತ್ರ ಪುಟ್ಟಿಚಂಡ ಅಯ್ಯಣ್ಣ ಮತ್ತು ಮಾತಂಡ ಕಂಬು ಉತ್ತಯ್ಯ, ಜಾನಪದ ಕ್ಷೇತ್ರ ಚಟ್ಟಕುಟ್ಟಡ ಬೊಳ್ಯಪ್ಪ ಮತ್ತು ಬೀಕಚಂಡ ನಂಜಪ್ಪ, ಕ್ರೀಡಾ ಕ್ಷೇತ್ರದಲ್ಲಿ ಬಿ.ಬಿ. ಜಾಜಿ, ಕೃಷಿ ಕ್ಷೇತ್ರ ಬಿ.ಕೆ. ರಮೇಶ್ ಮತ್ತು ಕೆ.ಎ. ಹಂಸ, ಪತ್ರಿಕೋದ್ಯಮ ಡಿ. ಮಂಜುನಾಥ್, ಶಿಕ್ಷಣ ಕ್ಷೇತ್ರ ಪಿ. ಲಕ್ಷ್ಮೀನಾರಾಯಣ ಮತ್ತು ಪಿ.ಜಿ. ಪಾರ್ವತಿ ಮತ್ತು ಸೇವಾ ಕ್ಷೇತ್ರದಲ್ಲಿ ಸದಾಶಿವ ಗೌಡ ಇವರನ್ನು ಸನ್ಮಾನಿಸಲಿದ್ದಾರೆ.