ಸೋಮವಾರಪೇಟೆ, ಜು. 24: ಇಲ್ಲಿನ ಲೋಕೋಪಯೋಗಿ ಇಲಾಖೆಯಲ್ಲಿ ಕಳೆದ ಒಂದು ವರ್ಷಗಳಿಂದ ಸಹಾಯಕ ಕಾರ್ಯಪಾಲಕ ಅಭಿಯಂತರರಾಗಿ ಕಾರ್ಯ ನಿರ್ವಹಿಸಿ ಇದೀಗ ವರ್ಗಾವಣೆಗೊಂಡಿರುವ ಶಿವಕುಮಾರ್ ಅವರನ್ನು ಇಲಾಖೆಯ ಇತರ ಅಭಿಯಂತರರು ಹಾಗೂ ಗುತ್ತಿಗೆದಾರರ ಸಂಘದ ಪದಾಧಿಕಾರಿಗಳು ಬೀಳ್ಕೊಟ್ಟರು.

ಕಳೆದ ಒಂದು ವರ್ಷದ ಅವಧಿಯಲ್ಲಿ ತಾಲೂಕಿನಲ್ಲಿ ಕಾರ್ಯ ನಿರ್ವಹಿಸಿದ ಅನುಭವವನ್ನು ಹಂಚಿಕೊಂಡ ಅಭಿಯಂತರ ಶಿವಕುಮಾರ್, ಪ್ರಾಕೃತಿಕ ವಿಕೋಪ ಸಂದರ್ಭ ಭೂಕುಸಿತಕ್ಕೆ ಒಳಗಾದ ಸೋಮವಾರಪೇಟೆ-ಮಡಿಕೇರಿ ರಾಜ್ಯ ಹೆದ್ದಾರಿ, ಹಾನಗಲ್ಲು-ದುದ್ದುಗಲ್ಲು ರಸ್ತೆ ಸೇರಿದಂತೆ ಇನ್ನಿತರ ರಸ್ತೆಗಳನ್ನು ಸಮರೋ ಪಾದಿ ಕಾಮಗಾರಿಯ ಮೂಲಕ ಪುನರ್ ನಿರ್ಮಾಣ ಮಾಡಲು ಸಹಕರಿಸಿದ ಸರ್ಕಾರ, ಜನಪ್ರತಿನಿಧಿ ಗಳು, ಅಭಿಯಂತರರು ಹಾಗೂ ಗುತ್ತಿಗೆದಾರರ ಶ್ರಮವನ್ನು ಶ್ಲಾಘಿಸಿದರು.

ಇಲ್ಲಿನ ಲೋಕೋಪಯೋಗಿ ಇಲಾಖಾ ಕಚೇರಿಯಲ್ಲಿ ಆಯೋಜಿ ಸಿದ್ದ ಕಾರ್ಯಕ್ರಮದಲ್ಲಿ ಅಭಿಯಂv Àರರುಗಳಾದ ಪೀಟರ್ ಶೈಜನ್, ರಮಣಗೌಡ, ವೆಂಕಟೇಶ್ ನಾಯಕ್, ವಿಜಯಕುಮಾರ್ ಸೇರಿದಂತೆ ಸಿಬ್ಬಂದಿಗಳು, ಗುತ್ತಿಗೆ ದಾರರ ಸಂಘದ ಅಧ್ಯಕ್ಷ ಸಣ್ಣೇಗೌಡ ಸೇರಿದಂತೆ ಪದಾಧಿಕಾರಿಗಳು ಉಪಸ್ಥಿತರಿದ್ದರು.