ಮಡಿಕೇರಿ, ಜು. 24: ಕೇಕ್ ತಯಾರಿಕೆ ಮತ್ತು ಆಹಾರ ತಯಾರಿಸುವ ವಿಧಾನವನ್ನು ನೆಹರು ಯುವ ಕೇಂದ್ರದಿಂದ ಗೃಹಿಣಿಯರಿಗೆ ಉಚಿತ ತರಬೇತಿ ಮೂಲಕ ನೀಡಲಿದೆ ಎಂದು ಜಿಲ್ಲಾ ಯುವ ಸಂಯೋಜಕ ಅಲಿ ಸಬ್ರಿನ್ ತಿಳಿಸಿದ್ದಾರೆ.

ಯುವ ವ್ಯವಹಾರಗಳ ಸಚಿವಾಲಯ ಮತ್ತು ರಾಷ್ಟ್ರೀಯ ಕೌಶಲ್ಯ ಅಭಿವೃದ್ಧಿ ಮಂಡಳಿಯ ಸಹಯೋಗದೊಂದಿಗೆ ತರಬೇತಿ ನೀಡಲಾಗುವದು. 3 ದಿನಗಳ ತರಬೇತಿಯಲ್ಲಿ 6 ಬಗೆಯ ಕೇಕ್, ಹಣ್ಣು ಸಂಸ್ಕರಣೆ ಮತ್ತು ಪಾನೀಯಗಳ ತರಬೇತಿ ಸಂಪೂರ್ಣವಾಗಿ ಉಚಿತವಾಗಿದ್ದರೂ ಕಚ್ಚಾ ವಸ್ತುಗಳಿಗೆ ರೂ. 300 ಪಾವತಿಸಬೇಕು. ಹಾಜರಾಗಲೂ ಆಸಕ್ತಿ ಇರುವವರು 8277326103 ಈ ಸಂಖ್ಯೆಗೆ ಕರೆ ಮಾಡಿ ನೊಂದಾಯಿಸಿಕೊಳ್ಳಲು ನೆಹರು ಯುವ ಕೇಂದ್ರದ ಪ್ರಕಟಣೆ ತಿಳಿಸಿದೆ.