ಮಡಿಕೇರಿ, ಜು. 24 : ಬೆಂಗಳೂರಿನ ಡಾ.ರಾಜಕುಮಾರ್ ಸಭಾಂಗಣದಲ್ಲಿ ನಡೆದ ಏಷ್ಯಾ ಪೆಸಿಫಿಕ್ ಇಂಟರ್‍ನ್ಯಾಷನಲ್ ಚಾಂಪಿಯನ್‍ಶಿಪ್ ದೇಹಧಾಡ್ರ್ಯ ಸ್ಪರ್ಧೆಯ ಮೂರೂ ವಿಭಾಗಗಳಲ್ಲಿ ಮಡಿಕೇರಿಯ ಸುರಭಿ ಹೊಟೇಲ್‍ನ ಸಿಬ್ಬಂದಿ ಗಣೇಶ್ ಪೂಜಾರಿ ಮೂರು ಬೆಳ್ಳಿಯ ಪದಕಗಳನ್ನು ಗೆದ್ದಿದ್ದಾರೆ. ಸ್ಪರ್ಧೆ ಆಯೋಜಿಸಿದ್ದ ಸಂಸ್ಥೆ ಗಣೇಶ್ ಅವರಿಗೆ ಮಿಸ್ಟರ್ ನ್ಯಾಚುರಲ್ ಏಷ್ಯಾ ಎಂಬ ಬಿರುದು ನೀಡಿ ಗೌರವಿಸಿದೆ.