ಚೆಟ್ಟಳ್ಳಿ, ಜು. 24: ಭಾರತ ಸರ್ಕಾರದ ನೆಹರೂ ಯುವ ಕೇಂದ್ರ ಮಡಿಕೇರಿ (ಯುವಜನ ವ್ಯವಹಾರ ಹಾಗೂ ಕ್ರೀಡಾ ಸಚಿವಾಲಯ) ಇವರ ಸಂಯುಕ್ತ ಆಶ್ರಯದಲ್ಲಿ ಕೊಡಗಿನ ಯುವಕ ಸಂಘ ಹಾಗೂ ಯುವತಿ ಮಂಡಳಿಯ ಪದಾಧಿಕಾರಿಗಳಿಗೆ ನೆರೆಹೊರೆ ಯುವಜನ ಸಂಸತ್ ಕಾರ್ಯಕ್ರಮ ಹಾಗೂ ಯುವ ಸಂಘದ ಸದೃಢ ಕಾರ್ಯಕ್ರಮ ಮಡಿಕೇರಿಯ ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣದ ಸಮೀಪದ ಸಮುದ್ರ ಹೊಟೇಲ್ ಸಭಾಂಗಣದಲ್ಲಿ ನಡೆಯಿತು.
ಈ ಸಂದರ್ಭ ಜಿಲ್ಲಾ ಉದ್ಯೋಗ ಮತ್ತು ವಿನಿಮಯ ಅಧಿಕಾರಿ ಜಗನ್ನಾಥ ಮಾತನಾಡಿ, ದೇಶದ ಅಭಿವೃದ್ಧಿ ಕೆಲಸಗಳಲ್ಲಿ ಯುವಕ ಸಂಘಗಳ ಪಾತ್ರ ಮುಖ್ಯ. ಯುವಕ ಸಂಘಗಳು ಸಮಾಜ ಸೇವೆಗಳಲ್ಲಿ ತೊಡಗಿಕೊಳ್ಳಬೇಕು. ಹಾಗೂ ಸರ್ಕಾರದಿಂದ ದೊರಕುವ ಅನೇಕ ಉದ್ಯೋಗ ಅವಕಾಶಗಳನ್ನು ಯುವಕ-ಯುವತಿಯರು ಸದುಪಯೋಗ ಪಡೆಸಿಕೊಳ್ಳಬೇಕು ಎಂದರು.
ಈ ಸಂದರ್ಭ ಮಡಿಕೇರಿಯ ನೆಹರು ಯುವ ಕೇಂದ್ರದ ಜಿಲ್ಲಾ ಯುವಜನ ಸಮನ್ವಯಾಧಿಕಾರಿ ಬಿ.ಆಲಿ. ಸಬ್ರಿನ್ ದೇಶದ ಅಭಿವೃದ್ಧಿಯಲ್ಲಿ ಯುವಕ-ಯುವತಿಯರ ಪಾತ್ರದ ಬಗ್ಗೆ ತಿಳಿಸಿದರು. ಈ ಸಂದರ್ಭ ನೆಹರು ಯುವ ಕೇಂದ್ರದ ಲೆಕ್ಕಾಧಿಕಾರಿ ಚಿಂದಿಗಿರಿ ಗೌಡ, ಮಹೇಶ್.ಬಿ, ಸಿಬ್ಬಂದಿಗಳಾದ ಫ್ರಾನ್ಸಿಸ್, ದೀಪ್ತಿ, ಮಾಜಿ ರಾಷ್ಟ್ರೀಯ ಯುವ ಕಾರ್ಯಕರ್ತ ವಿವೇಕ್ ಎಂ.ಬಿ., ನೂತನ ರಾಷ್ಟ್ರೀಯ ಯುವ ಕಾರ್ಯಕರ್ತರಾದ ಚರಣ್, ಲಕ್ಷ್ಮಿಕಾಂತ್.ಕೆ, ಮೇರಿ, ಅಶ್ವಿನಿ, ಪ್ರಜ್ವಲ್, ಸಂತು ಮತ್ತಿತರರು ಹಾಜರಿದ್ದರು.