ಮಡಿಕೇರಿ, ಜು. 24: ವಿಶ್ವ ಹಿಂದೂ ಪರಿಷದ್, ಭಜರಂಗದಳ ವತಿಯಿಂದ ಕಾರ್ಗಿಲ್ ವಿಜಯ್ ದಿವಸ್ ರಕ್ತದಾನ ಶಿಬಿರ ತಾ. 26 ರಂದು (ನಾಳೆ) ಬೆಳಿಗ್ಗೆ 9.30 ಗಂಟೆಗೆ ಮಡಿಕೇರಿಯ ಸೈನಿಕ ಯುದ್ಧ ಸ್ಮಾರಕದ ಎದುರು ನಡೆಯಲಿವೆ. ಮುಖ್ಯ ಅತಿಥಿಗಳಾಗಿ ಸುಬೇದಾರ್ ಮೇಜರ್ (ನಿ) ಬಿ.ಎನ್. ಆನಂದ (ಹಾನರ್ ಗ್ರೂಪ್ ಕ್ಯಾಪ್ಟನ್) ಮಾಜಿ ಸೈನ್ಯಾಧಿಕಾರಿಗಳು, ಗಣ್ಯರು ಹಾಗೂ ಸಂಘ ಸಂಸ್ಥೆಗಳ ಪ್ರಮುಖರು ಭಾಗವಹಿಸಲಿದ್ದಾರೆ. ರಕ್ತದಾನ ಶಿಬಿರ ಬೆಳಿಗ್ಗೆ 11 ಗಂಟೆಗೆ ಅಶ್ವಿನಿ ಆಸ್ಪತ್ರೆ ಸಭಾಂಗಣದಲ್ಲಿ ನಡೆಯಲಿದ್ದು; ಉದ್ಘಾಟನೆಯನ್ನು ಡಾ. ಬಿ.ಸಿ. ನವೀನ್‍ಕುಮಾರ್ ನೆರವೇರಿಸ ಲಿದ್ದಾರೆ.