ಗೋಣಿಕೊಪ್ಪಲು, ಜು. 22: ಕೊಡಗು-ಕೇರಳದ ಗಡಿಭಾಗ ಮಾಕುಟ್ಟ ದಿನೇ ದಿನೇ ತನ್ನ ಅಸ್ತಿತ್ವ ಕಳೆದುಕೊಳ್ಳುವತ್ತ ಸಾಗಿದೆ. ಮಾಕುಟ್ಟದಲ್ಲಿ ಇರುವ ಒಟ್ಟು ಮತದಾರರು 44 ಮಾತ್ರ. ಆದರೆ, ಇಲ್ಲಿನ ಸರ್ಕಾರಿ ಮಲಯಾಳಂ ಶಾಲೆ, ಅರಣ್ಯ ಇಲಾಖೆ, ಪೆÇಲೀಸರು, ಹೊಟೇಲ್ ಮಾಲೀಕರು, ‘ಪೆÇೀರ್ಟ್ ಲ್ಯಾಂಡ್ ರಬ್ಬರ್ ಎಸ್ಟೇಟ್’ ಕಾರ್ಮಿಕರು ಒಳಗೊಂಡಂತೆ ಅಂದಾಜು 100ರಷ್ಟು ಜನಸಂಖ್ಯೆಯಿ ರಬಹುದು. ರಾಜ್ಯ ಸರ್ಕಾರಕ್ಕೆ ಸೇರಿದ ಇಲ್ಲಿನ ಕಿರಿಯ ಪ್ರಾಥಮಿಕ ಮಲಯಾಳಂ ಶಾಲೆಯಲ್ಲಿ ಕೇವಲ 6 ವಿದ್ಯಾರ್ಥಿಗಳು, ಓರ್ವ ಶಿಕ್ಷಕ, ಓರ್ವ ಗುತ್ತಿಗೆ ಆಧಾರದ ಶಿಕ್ಷಕಿ ಇದ್ದಾರೆ. ಇಲ್ಲಿನ ರಬ್ಬರ್ ತೋಟದ ಕಾರ್ಮಿಕರ ಸಂಖ್ಯೆ ಕಡಿಮೆಯಾದಂತೆ ಇಲ್ಲಿನ ಶಾಲಾ ಮಕ್ಕಳ ಹಾಜರಾತಿ ಯೂ ಕುಂಟುತ್ತಾ ಬಂದಿದೆ. ದಿನನಿತ್ಯ ಮಾಕುಟ್ಟ ಅಂತರಾಜ್ಯ ಹೆದ್ದಾರಿಯಲ್ಲಿ ಹಗಲೂ-ಇರುಳು ಸಾವಿರಾರು ವಾಹನಗಳು ಓಡಾಟ ಮಾಡುತ್ತಿವೆ. ಭಾರೀ ಸರಕು ಸಾಗಾಟ ವಾಹನಗಳು, ಹುಲ್ಲುಲಾರಿ, ಅನಿಲ ಲಾರಿ, ಇಟ್ಟಿಗೆ, ಕಲ್ಲು, ಜಲ್ಲಿಯನ್ನು ಹೊತ್ತ ಲಾರಿಗಳು, ಟಿಪ್ಪರ್ಗಳು ಇದೇ ರಸ್ತೆ ಮಾರ್ಗ ದಿನನಿತ್ಯ ಓಡಾಟ ನಡೆಸಿವೆ. ರಸ್ತೆಯ ಗುಣಮಟ್ಟ ಕುಸಿಯಲು ಉದ್ದೇಶಿತ ರಸ್ತೆಯ ಮೇಲೆ ಹೆಚ್ಚುತ್ತಿರುವ ವಾಹನಗಳ ಒತ್ತಡವೂ ಕಾರಣವಾಗಿದೆ. ಇದೇ ಮಾಕುಟ್ಟ ರಸ್ತೆಯ ತಿರುವಿನಲ್ಲಿ ದಿನನಿತ್ಯ ಸಣ್ಣಪುಟ್ಟ ಅಪಘಾತಗಳೂ ಸಂಭವಿಸುತ್ತಲೇ ಇದೆ. ಆದರೆ ಗಾಯಾಳುಗಳಿಗೆ ಪ್ರಥಮ ಚಿಕಿತ್ಸೆ ನೀಡಲು ಇಲ್ಲಿದ್ದ ಏಕೈಕ ಉಪ ಆರೋಗ್ಯ ಕೇಂದ್ರ ಇದೀಗ ಮಾಯ ವಾಗಿದೆ. ಸ್ವಾತಂತ್ರ್ಯಪೂರ್ವ ದಿಂದಲೂ ಇದ್ದ ಅಂಚೆ ಕಚೇರಿಯೂ ಇದೀಗ ಮಾಯವಾಗಿದೆ. ಒಟ್ಟಿನಲ್ಲಿ ಕರ್ನಾಟಕ
(ಮೊದಲ ಪುಟದಿಂದ) ರಾಜ್ಯಕ್ಕೆ ಸೇರಿದ ಮಾಕುಟ್ಟ ದಿನೇ ದಿನೇ ಸರ್ಕಾರಿ ಸೇವೆ, ಅತ್ಯಗತ್ಯ ಆರೋಗ್ಯ ಸೇವೆಯಿಂದ ವಂಚಿತವಾಗುತ್ತಿದೆ.
ಮಾಕುಟ್ಟ ಪೆÇಲೀಸ್ ಚೆಕ್ಪೆÇೀಸ್ಟ್ನ ಮುಂದೆ ಸಾಗಿದರೆ ಸರ್ಕಾರಿ ಕಟ್ಟಡದಲ್ಲಿ ಉಪ ಆರೋಗ್ಯ ಕೇಂದ್ರವಿತ್ತು. ‘ಸ್ನೇಹಾ ಕ್ಲಿನಿಕ್’ ಎಂಬ ಫಲಕವೂ ಅಲ್ಲಿತ್ತು. ಇದೀಗ ಇಲ್ಲಿನ ಜನತೆ ಯಾವದೇ ಅನಾರೋಗ್ಯಕ್ಕೆ ತುತ್ತಾದಲ್ಲಿ ತುರ್ತು ಚಿಕಿತ್ಸೆ ಲಭ್ಯವಿಲ್ಲ. ವೀರಾಜಪೇಟೆ ತಾಲೂಕು ಆಸ್ಪತ್ರೆ ಅಥವಾ ಕೇರಳದ ವಳ್ಳಿತೋಡು ಆಸ್ಪತ್ರೆಯನ್ನು ಅವಲಂಭಿಸಬೇಕಾದ ಅನಿವಾರ್ಯತೆ ಕಳೆದ ಒಂದು ವರ್ಷದಿಂದಲೂ ಏರ್ಪಟ್ಟಿದೆ.
ಆಸ್ಪತ್ರೆ ಸ್ಥಳಾಂತರ : ಕಳೆದ ವರ್ಷ ಜೂ.13 ರಂದು ಮಾಕುಟ್ಟ ಅಭಯಾರಣ್ಯದ ಬೆಟ್ಟಗುಡ್ಡಗಳಲ್ಲಿ ಜಲಸ್ಫೋಟ ಉಂಟಾದ ನಂತರ ಮಾಕುಟ್ಟ ಚೀಪೆಹೊಳೆಯಲ್ಲಿ ಕಂಡು ಕೇಳರಿಯದ ಪ್ರವಾಹ, ಸಾವು-ನೋವು ಸಂಭವಿಸಿದ ನಂತರ ಮಾಕುಟ್ಟ ಎಂದರೆ ಹೆದರುವ ಸ್ಥಿತಿ ನಿರ್ಮಾಣವಾಗಿದೆ. ಈಗಲೂ ಇಲ್ಲಿನ ಪ್ರಯಾಣ ಅಪಾಯದ ಕರೆಗಂಟೆಯನ್ನು ಬಾರಿಸುತ್ತಿದೆ. ಹಾಗಂತ ನಿರ್ಲಕ್ಷಿಸುವಂತಿಲ್ಲ. ಇಲ್ಲಿನ ಜನತೆಗೆ ಅಗತ್ಯ ಆರೋಗ್ಯ ಸೇವೆ ಒದಗಿಸುವದು ಸರ್ಕಾರದ ಕರ್ತವ್ಯ. ಇಲ್ಲಿ ಅರಣ್ಯ ಇಲಾಖೆಯ ಸುಮಾರು 50 ಮಂದಿ ಸಿಬ್ಬಂದಿಗಳು, ಕೆಲವು ಪೆÇಲೀಸರು, ಆದಿವಾಸಿಗಳು, ಮಾಕುಟ್ಟ ರಸ್ತೆಯನ್ನು ವ್ಯಾಪಾರಕ್ಕಾಗಿ ಅವಲಂಬಿಸಿರುವ ದೈನಂದಿನ ವ್ಯಾಪಾರಿಗಳು, ಪ್ರಯಾಣಿಕರು, ಪ್ರವಾಸಿಗರಿಗೆ ಆರೋಗ್ಯ ಉಪಕೇಂದ್ರ ಅಗತ್ಯವಾಗಿದೆ. ಕೆಲವು ಸರ್ಕಾರಿ ಕಚೇರಿಗಳಿರುವದರಿಂದ ಅಂಚೆಕಚೇರಿ ಯೂ ಅಗತ್ಯವಿದೆ. ಇದೀಗ ಇಲ್ಲಿನ ಅಂಚೆಕಚೇರಿ ಕಳೆದ ಬಾರಿಯ ಜಲಸ್ಫೋಟದ ನಂತರ ಬೇಟೋಳಿ ಗ್ರಾ.ಪಂ.ಕಟ್ಟಡಕ್ಕೆ ಸ್ಥಳಾಂತರಗೊಂಡಿದೆ. ಇಲ್ಲಿನ ಉಪ ಆರೋಗ್ಯ ಕೇಂದ್ರಕ್ಕೆ ಕಳೆದ ವರ್ಷದವರೆಗೂ ವೈದ್ಯರು. ಕಿರಿಯ ಆರೋಗ್ಯ ಸಹಾಯಕರು ವಾರದಲ್ಲಿ ಮೂರುದಿನ ಲಭ್ಯವಿರುತ್ತಿದ್ದರು. ಇದೀಗ ಮೊಟಕುಗೊಂಡಿರುವದಾಗಿ ಇಲ್ಲಿನ ಗ್ರಾಮಸ್ಥರ ಆರೋಪ. ಈ ಬಗ್ಗೆ ‘ಶಕ್ತಿ’ ಪರವಾಗಿ ತಾಲೂಕು ಆರೋಗ್ಯಾಧಿ ಕಾರಿ ಡಾ.ಯತಿರಾಜ್ ಅವರನ್ನು ಪ್ರಶ್ನಿಸಿದಾಗ ಕಿರಿಯ ಆರೋಗ್ಯ ಸಹಾಯಕಿ ಕಾಮಿನಿ ಎಂಬವರನ್ನು ಮಾಕುಟ್ಟ, ಬೇಟೋಳಿ, ಅರ್ಜಿ ಹಾಗೂ ಬಾಳುಗೋಡುವಿಗೆ ನಿಯೋಜಿಸಲಾಗಿದೆ. ಅಲ್ಲಿ ರೋಗಿಗಳ ಸಂಖ್ಯೆ ಕಡಿಮೆ ಇರುವ ಹಿನ್ನೆಲೆ ತಿಂಗಳಿಗೊಮ್ಮೆ ಸಂಚಾರಿ ಆರೋಗ್ಯ ಘಟಕವನ್ನು ಕಳುಹಿಸಲಾಗುತ್ತಿದೆ. ಕೇವಲ ಮೂರು ಅಥವಾ ನಾಲ್ಕು ರೋಗಿಗಳು ಮಾತ್ರ ಸಿಗುತ್ತಾರೆ ಎಂದು ವಿವರಿಸುತ್ತಾರೆ.
ಇದೀಗ ಕಾಡು ಬೆಳೆದು ನಿಂತ ಉಪ ಆರೋಗ್ಯ ಕೇಂದ್ರದ ಬಗ್ಗೆ ಪ್ರಶ್ನಿಸಿದ ಸಂದರ್ಭ ಶೀಘ್ರದಲ್ಲಿ ಆಸ್ಪತ್ರೆಯ ಸುತ್ತಲೂ ಬೆಳೆದ ಕಾಡು ಕಡಿದು ಸಾರ್ವಜನಿಕರ ಉಪಯೋಗಕ್ಕೆ ಎಂದಿನಂತೆ ಅವಕಾಶ ಕಲ್ಪಿಸಲಾಗುವದು ಎಂದು ಮಾಹಿತಿ ನೀಡಿದ್ದಾರೆ. ತಿಂಗಳಿಗೆ ಎರಡು ಬಾರಿ (ವೈದ್ಯರನ್ನು ಹೊಂದಿರುವ) ಸಂಚಾರಿ ಮೊಬೈಲ್ ಘಟಕವನ್ನು ಮಾಕುಟ್ಟಕ್ಕೆ ಕಳುಹಿಸಿ, ಆರೋಗ್ಯ ಸೇವೆ ಒದಗಿಸಲಾಗುವದು ಎಂದು ಮಾಹಿತಿ ನೀಡಿದ್ದಾರೆ.
ಕೇರಳಮಯ : ಮಾಕುಟ್ಟ ಇದೀಗ ಕೇರಳಮಯವಾಗುತ್ತಿದ್ದು ಬಹುತೇಕ ಇಲ್ಲಿನ ಜನ ಕೇರಳವನ್ನೇ ಅವಲಂಬಿಸುವದು ಕಂಡುಬಂದಿದೆ. ಇಲ್ಲಿನ ಮಳಯಾಳಂ ಸರ್ಕಾರಿ ಶಾಲೆಯ ಸುಪರ್ದಿಯಲ್ಲಿ ಸುಮಾರು ಮೂರು ಎಕರೆ ನಿವೇಶನವಿದ್ದು , ಸಮಾಜ ಕಲ್ಯಾಣ ಇಲಾಖೆ ಮೂಲಕ ವಸತಿ ಶಾಲೆ ನಿರ್ಮಾಣವಾದಲ್ಲಿ ವಿದ್ಯಾರ್ಥಿಗಳ ಹಾಜರಾತಿ ಹೆಚ್ಚುವದಲ್ಲದೆ, ಪ್ರಾಥಮಿಕ ಶಾಲೆಯನ್ನು ಮುಂದೆ ಮುಚ್ಚಬೇಕಾದ ಪ್ರಮೇಯ ಬರುವದಿಲ್ಲ. ಈ ನಿಟ್ಟಿನಲ್ಲಿ ಈ ಹಿಂದಿನ ಬಿಇಓ ಪಾಂಡು ಉತ್ಸುಕ ರಾಗಿದ್ದರೂ, ಅವರ ವರ್ಗಾವಣೆ ನಂತರ ಈ ಬಗ್ಗೆ ಇಲ್ಲಿನ ಜನಪ್ರತಿನಿದಿ üಗಳಿಂದಾಗಲಿ, ಅಧಿಕಾರಿಗಳಿಂದಾಗಲಿ ಸೂಕ್ತ ಸ್ಪಂದನ ಸಿಕ್ಕಿಲ್ಲ.
ಮಾಕುಟ್ಟದ ಬೃಹ್ಮಗಿರಿ ವನ್ಯಜೀವಿ ವಲಯ ಪ್ರವಾಸಿ ಮಾಹಿತಿ ಕೇಂದ್ರವಾಗಿ, ಚಾರಣಕ್ಕೆ ಅನುಗುಣವಾದ ಬೆಟ್ಟಗುಡ್ಡಗಳು, ವಿವಿಧ ಪ್ರಭೇದದ ಮರಗಿಡಗಳು, ಬರಪೆÇಳೆಗೆ ಅಡ್ಡಲಾಗಿ ನಿರ್ಮಾಣಗೊಂಡ ತೂಗು ಸೇತುವೆ, ಸುಮಾರು ರೂ.220 ಕೋಟಿ ವೆಚ್ಚದಲ್ಲಿ ನಿರ್ಮಾಣವಾದ ಭರೂಕ ಮಿನಿವಿದ್ಯುತ್ ಸ್ಥಾವರ ವೀಕ್ಷಣೆ ಮಾಡಲು ಇಲ್ಲಿ ಅವಕಾಶವಿದೆ.
ಮಾಕುಟ್ಟ ದಿನೇ ದಿನೇ ಜಿಲ್ಲಾಡಳಿತದ ನಿರ್ಲಕ್ಷ್ಯಕ್ಕೆ ಒಳಗಾದಂತೆ ಕಂಡುಬರುತ್ತಿದೆ. ಇಲ್ಲಿನ ಚೆಕ್ಪೆÇೀಸ್ಟ್ನಲ್ಲಿ ಸೂಕ್ತ ಆರ್.ಟಿ.ಓ. ಅಧಿಕಾರಿಗಳು ಇಲ್ಲದಿರುವ ಹಿನ್ನೆಲೆ ಪರವಾನಗಿ ಇಲ್ಲದ ಕೇರಳದ ವಾಹನಗಳು ದಿನನಿತ್ಯ ಕರ್ನಾಟಕ ಪ್ರವೇಶಿಸಿ, ಸುಮಾರು 60 ಕಿ.ಮೀ.ವರೆಗೂ ಓಡಾಟ ನಡೆಸುವದರಿಂದ ರಾಜ್ಯ ಸರ್ಕಾರದ ಬೊಕ್ಕಸಕ್ಕೆ ವರ್ಷಂಪ್ರತಿ ಲಕ್ಷಾಂತರ ಆದಾಯ ನಷ್ಟವಾಗುತ್ತಿದೆ. ಅದೇ ನಮ್ಮ ಕರ್ನಾಟಕದ ವಾಹನಗಳು ಕೇರಳ ಪ್ರವೇಶಿಸುತ್ತಿದ್ದಂತೆ ಅಲ್ಲಿನ ಪೆÇಲೀಸರು, ಆರ್.ಟಿ.ಓ. ಅಧಿಕಾರಿ ಗಳು ಕ್ರಮ ಕೈಗೊಂಡು ದಂಡ ವಿಧಿಸುವದು ಕಂಡು ಬರುತ್ತಿದೆ. ಮಾಕುಟ್ಟ ವ್ಯಾಪ್ತಿಗೆ ತಿಂಗಳಿಗೆ ಒಮ್ಮೆ ಸಂಚಾರಿ ನ್ಯಾಯಬೆಲೆ ಅಂಗಡಿ ತೆರಳಿ ಅಲ್ಲಿನ ಜನರಿಗೆ ಪಡಿತರ ವಿತರಣೆ ಮಾಡುವಲ್ಲಿಯೂ ವಿಳಂಬವಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ.
ಇಲ್ಲಿನ ಜನಸಂಖ್ಯೆ 100ಕ್ಕೂ ಕಮ್ಮಿ ಇದ್ದರೂ ಕನಿಷ್ಟ ವಾರದಲ್ಲಿ ಮೂರು ದಿನವಾದರೂ ಕಿರಿಯ ಆರೋಗ್ಯ ಸಹಾಯಕರ ಸೇವೆ ಅಗತ್ಯ ಎಂದು ಮಾಕುಟ್ಟ ನಿವಾಸಿಗಳು ಮನವಿ ಮಾಡಿದ್ದಾರೆ. ಅಂಚೆ ಟಪಾಲಿಗೆ ಹಾಕಲು, ವೃದ್ಧಾಪ್ಯ ವೇತನ ಇತ್ಯಾದಿ ಹೊಂದಲು ಇಲ್ಲಿನ ಅರ್ಹರು ವೀರಾಜಪೇಟೆ ಅಥವಾ ಬೇಟೋಳಿಗೆ ತೆರಳ ಬೇಕಾದ ಅನಿವಾರ್ಯತೆ ಎದು ರಾಗಿದೆ.ಇದೀಗ ಮಾಕುಟ್ಟ ವ್ಯಾಪ್ತಿಯಲ್ಲಿ ಮಳೆಯ ಅಬ್ಬರ ಆರಂಭವಾಗಿದ್ದರೂ, ಕಳೆದ ಸಾಲಿಗಿಂತಲೂ ಶೇ.50 ರಷ್ಟು ಮಳೆ ತೀವ್ರತೆ ಕುಸಿತಗೊಂಡಿದೆ ಎನ್ನಲಾಗಿದೆ. ಒಟ್ಟಿನಲ್ಲಿ ಹಲವು ಸಮಸ್ಯೆಗಳಿರುವ ಮಾಕುಟ್ಟದಲ್ಲಿ ಸೂಕ್ತ ವ್ಯವಸ್ಥೆ ಕಲ್ಪಿಸಲು ಕಂದಾಯ ಇಲಾಖೆ, ಜಿಲ್ಲಾ ಡಳಿತ, ಜಿಲ್ಲಾ ಆರೋಗ್ಯ ಇಲಾಖೆ ಮನಸ್ಸು ಮಾಡಬೇಕಾಗಿದೆ.
-ವರದಿ: ಟಿ.ಎಲ್.ಶ್ರೀನಿವಾಸ್