ಶ್ರೀಹರಿಕೋಟಾ, ಜು. 22: ಜಿಎಸ್ಎಲ್ ವಿ-ಎಂಕೆಐಐ-ಎಂ1 ಚಂದ್ರಯಾನ -2 ಅನ್ನು ಯಶಸ್ವಿಯಾಗಿ ನಭಕ್ಕೆ ಚಿಮ್ಮಿಸಿದ್ದು, ಚಂದ್ರನ ದಕ್ಷಿಣ ಧ್ರುವದಲ್ಲಿ ಇಳಿಯಲು ಭಾರತದ ಒಂದು ಐತಿಹಾಸಿಕ ಪ್ರಯಾಣ ಆರಂಭವಾಗಿದೆ ಎಂದು ಇಸ್ರೋ ಅಧ್ಯಕ್ಷ ಡಾ. ಕೆ. ಶಿವನ್ ಹೇಳಿದ್ದಾರೆ. ಶ್ರೀಹರಿಕೋಟಾದ ಬಾಹ್ಯಾಕಾಶ ಕೇಂದ್ರದಲ್ಲಿ ಮಧ್ಯಾಹ್ನ 2.43ಕ್ಕೆ ಚಂದ್ರಯಾನ -2ರ ಯಶಸ್ವಿ ಉಡಾವಣೆ ನಂತರ ವಿಜ್ಞಾನಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ಇಂದು ಭಾರತದ ಬಾಹ್ಯಾಕಾಶ ವಿಜ್ಞಾನ ಮತ್ತು ತಂತ್ರಜ್ಞಾನದ ಐತಿಹಾಸಿಕ ದಿನ ಎಂದು ಬಣ್ಣಿಸಿದರು.ಜಿಎಸ್ಎಲ್ ವಿ-ಎಂಕೆಐಐ-ಎಂ1 ಚಂದ್ರಯಾನ -2 ಉಡಾವಣೆ ಯಶಸ್ವಿಯಾಗಿದೆ ಎಂದು ಹೇಳಲು ಅತ್ಯಂತ ಸಂತಸವಾಗುತ್ತದೆ ಮುಂದಿನ 48 ದಿನಗಳ ದೀರ್ಘ ಪಯಣದ ಅವಧಿಯಲ್ಲಿ ಒಟ್ಟು 3.44 ಲಕ್ಷ ಕಿಲೋಮೀಟರ್ ದೂರ ಕ್ರಮಿಸಲಿದ್ದು, ಸೆಪ್ಟೆಂಬರ್ 7 ರಂದು ಚಂದ್ರನ ದಕ್ಷಿಣ ಧ್ರುವದಲ್ಲಿ ನೌಕೆ ಇಳಿಯಲಿದೆ ಎಂದು ಹೇಳಿದರು. ವಾಸ್ತವವಾಗಿ ಇದು ಚಂದ್ರನತ್ತ ಐತಿಹಾಸಿಕ ಪಯಣ.
ಚಂದ್ರನ ಮೇಲಿನ ದಕ್ಷಿಣ ಧ್ರುವದ ಮೇಲಿಳಿದು, ಇದುವರೆಗೂ ಅನ್ವೇಷಿಸಿಲ್ಲದ ಅನ್ವೇಷಣೆಯನ್ನು ವೈಜ್ಞಾನಿಕ ಪ್ರಯೋಗಗಳನ್ನು ನಡೆಸಲಾಗು ವದು ಎಂದರು. ಗಂಭೀರ ತಾಂತ್ರಿಕ ದೋಷದ ಕಾರಣ ತಾ. 15 ರಂದು ನಡೆಸಬೇಕಿದ್ದ ಚಂದ್ರಯಾನ-2ರ ಉಡಾವಣೆ ಯನ್ನು ಮುಂದೂಡ ಲಾಗಿತ್ತು. ಇಸ್ರೋ ವಿಜ್ಞಾನಿಗಳ ತಂಡವು ಹಾರುವ ಬಣ್ಣಗಳೊಂದಿಗೆ ಪುಟಿದೆದ್ದಿತು ಎಂದು ಕೆ. ಶಿವನ್ ಸಂತಸ ವ್ಯಕ್ತಪಡಿಸಿದರು.