ಮಡಿಕೇರಿ, ಜು. 22: ರೈತರು ಸಹಕಾರ ಸಂಘ, ಸಹಕಾರ ಬ್ಯಾಂಕುಗಳಿಂದ ಅಲ್ಪಾವಧಿ ಬೆಳೆ ಸಾಲ ಪಡೆದು 2018ರ ಜುಲೈ, 10 ಕ್ಕೆ ಸುಸ್ತಿಯಾಗಿರುವ ಸಾಲಗಳಿಗೆ ಹಾಗೂ 2018ರ ಜುಲೈ, 10 ಕ್ಕೆ ಚಾಲ್ತಿ ಇದ್ದು, ಈಗಾಗಲೇ ಗಡುವು ಮುಗಿದಿರುವ ಸಾಲಗಳಿಗೆ ರೂ.1 ಲಕ್ಷಗಳಿಗಿಂತ ಹೆಚ್ಚಿನ ಅಸಲು ಮತ್ತು ಮರುಪಾವತಿ ದಿನಾಂಕದವರೆಗಿನ ಸಂಪೂರ್ಣ ಬಡ್ಡಿಯನ್ನು ರೈತರು ಮರುಪಾವತಿಸಿ ರೂ. 1 ಲಕ್ಷಗಳವರೆಗಿನ ಸಾಲ ಮನ್ನಾ ಸೌಲಭ್ಯ ಪಡೆಯಲು 2019ರ ಜುಲೈ, 31 ರವರೆಗೆ ಕಾಲಾವಕಾಶ ನೀಡಲಾಗಿದೆ. ಸರ್ಕಾರದ ಸಾಲ ಮನ್ನಾ ಯೋಜನೆಯು ಅತ್ಯಂತ ಮಹತ್ವದ ಯೋಜನೆಯಾಗಿದ್ದು, ರೈತ ಸದಸ್ಯರು ತಮ್ಮ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ, ಬ್ಯಾಂಕುಗಳಿಗೆ ಭೇಟಿ ನೀಡಿ ಈ ಯೋಜನೆಯ ಸೌಲಭ್ಯ ಪಡೆಯಬಹುದು ಎಂದು ಸಹಕಾರ ಸಂಘಗಳ ಉಪ ನಿಬಂಧಕರು ಕೋರಿದ್ದಾರೆ.