ಮಡಿಕೇರಿ: ಮಡಿಕೇರಿ ರೋಟರಿ ಕ್ಲಬ್ ವತಿಯಿಂದ ವನಮಹೋತ್ಸದ ಅಂಗವಾಗಿ ರಾಜರಾಜೇಶ್ವರಿ ಶಿಕ್ಷಣ ಸಂಸ್ಥೆಯ ವ್ಯಾಪ್ತಿಯಲ್ಲಿ ಸಸಿಗಳನ್ನು ನೆಡಲಾಯಿತು.

ರಾಜರಾಜೇಶ್ವರಿ ಕಾಲೇಜು, ಸ್ವಾಗತ ಬೆಟ್ಟ ವ್ಯಾಪ್ತಿಯಲ್ಲಿ 200 ಸಸಿಗಳನ್ನು ರೋಟರಿ ಕ್ಲಬ್ ವತಿಯಿಂದ ನೆಡುವ ಕಾರ್ಯಕ್ರಮಕ್ಕೆ ಜಿಲ್ಲಾ ರೋಟರಿಯ ಮಾಜಿ ರಾಜ್ಯಪಾಲ ಮಾತಂಡ ಸುರೇಶ್ ಚಂಗಪ್ಪ ಚಾಲನೆ ನೀಡಿದರು.

ಈ ಸಂದರ್ಭ ಮಾತನಾಡಿದ ರೋಟರಿ ಕ್ಲಬ್ ಅಧ್ಯಕ್ಷ ರತನ್ ತಮ್ಮಯ್ಯ, ವನಮಹೋತ್ಸವವನ್ನು ಜುಲೈ ತಿಂಗಳಿನಲ್ಲಿ ಎಲ್ಲೆಡೆ ಆಯೋಜಿಸಲಾಗುತ್ತಿದೆ. ಸಮಾಜದ ನಾಗರಿಕರಿಗೆ, ಜಾನುವಾರುಗಳಿಗೆ ಅತ್ಯಗತ್ಯವಾಗಿ ಬೇಕಾಗಿರುವ ನೀರಿನ ಮೂಲವಾದ ಕಾಡನ್ನು ಸಂರಕ್ಷಿಸುವದು ಎಲ್ಲರ ಕರ್ತವ್ಯವಾಗಿದ್ದು, ಮರಗಳು ಕಡಮೆಯಾಗುತ್ತಿರುವ ಈನ ದಿನಗಳಲ್ಲಿ ಕಾಡು ಗಿಡಗಳನ್ನು ಹೆಚ್ಚು ಹೆಚ್ಚು ನೆಡುವ ಅಗತ್ಯವಾಗಿದೆ ಎಂದು ಹೇಳಿದರು. ಸಸಿಗಳನ್ನು ನೆಡುವ ಮೂಲಕ ವೃಕ್ಷ ಸಂಕುಲವನ್ನು ಹೆಚ್ಚಿಸುವ ಹೊಣೆಗಾರಿಕೆ ರೋಟರಿಯಂಥ ಸಾಮಾಜಿಕ ಸೇವಾ ಸಂಸ್ಥೆಯ ಮೇಲಿದೆ ಎಂದೂ ರತನ್ ಹೇಳಿದರು.

ಕಾರ್ಯಕ್ರಮದಲ್ಲಿ ಮಡಿಕೇರಿ ರೋಟರಿ ಸಂಸ್ಥೆಯ ಕಾರ್ಯದರ್ಶಿ ಕೆ.ಸಿ. ಕಾರ್ಯಪ್ಪ, ನಿರ್ದೇಶಕರುಗಳಾದ ಅನಿಲ್ ಕೃಷ್ಣಾನಿ, ಎಂ.ಎಂ.ಕಾಯ9ಪ್ಪ, ಲತಾರಾಘವನ್, ರಾಜರಾಜೇಶ್ವರಿ ಪಿಯು ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷ ದಕ್ಷಿಣ ವಾಸುದೇವ್, ಕಾರ್ಯದರ್ಶಿ ಸಚಿನ್ ವಾಸುದೇವ್, ಅರಣ್ಯ ಇಲಾಖೆಯ ಅಧಿಕಾರಿ ಜಗದೀಶ್, ಬಾಬುರಾವ್, ಸಿಬ್ಬಂದಿಗಳು, ಕಾಲೇಜಿನ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.ಮಡಿಕೇರಿ: ಮಡಿಕೇರಿ ಹಿಂದೂ ಮಲಯಾಳಿ ಸಂಘದ ವತಿಯಿಂದ ವನಮಹೋತ್ಸವದ ಅಂಗವಾಗಿ ಮಡಿಕೇರಿಯ ಕೇಂದ್ರಿಯ ವಿದ್ಯಾಲಯದಲ್ಲಿ ಸುಮಾರು 190 ವಿವಿಧ ಹಣ್ಣುಹಂಪಲುಗಳ ಗಿಡಗಳನ್ನು ನೆಡಲಾಯಿತು. ಸಂಘದ 35ರಿಂದ 40 ಮಂದಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಕೇಂದ್ರೀಯ ವಿದ್ಯಾಲಯದ ಪ್ರಾಂಶುಪಾಲರು ಹಾಗೂ ಇತರ ಶಿಕ್ಷಕರು ಕೂಡ ಹಾಗೂ ಶಾಲೆಯ ಸ್ಕೌಟ್ ಮತ್ತು ಗೈಡ್ಸ್ ವಿದ್ಯಾರ್ಥಿಗಳು ಕೈ ಜೋಡಿಸಿದರು.

ವನ ಮಹೋತ್ಸವದ ಅಂಗವಾಗಿ ಬಾದಾಮಿ, ನೇರಳೆ, ಮೈಸೂರು ನೆಲ್ಲಿಕಾಯಿ, ಜಂಬುನೇರಳೆ, ಹಲಸಿನ ಗಿಡಗಳನ್ನು ಶಾಲೆಯ ಆವರಣದಲ್ಲಿ ನೆಡಲಾಯಿತು.

ಸಂಘದ ಅಧ್ಯಕ್ಷ ಕೆ.ಎಸ್. ರಮೇಶ್, ಉಪಾಧ್ಯಕ್ಷ ಭರತ್, ಪ್ರಧಾನ ಕಾರ್ಯದರ್ಶಿ ಧರ್ಮೇಂದ್ರ, ಕಾರ್ಯದರ್ಶಿ ದಿನೇಶ್, ನಿರ್ದೇಶಕರುಗಳಾದ ಅಚ್ಚುತ, ಅಚ್ಚುತ ನಾಯರ್, ಮನೋರಂಜನ್, ದಿನೇಶ್ ನಾಯರ್, ರವಿ, ಅಪ್ಪು ಕುಟ್ಟ, ಪ್ರಮೋದ್, ರಾಜೇಶ್, ರಮೇಶ್ ಮಿಂಟ್, ಸುಬ್ರಮಣಿ, ಯುವ ಘಟಕದ ಅಧ್ಯಕ್ಷ ಸಂದೀಪ್, ಮಹಿಳಾ ಘಟಕದ ಅಧ್ಯಕೆÀ್ಷ ಲತಾ ರಾಜನ್, ರಮಿತ, ಶೋಭಾ, ಶ್ರೀಭ, ಸಂಗೀತ, ರಮ್ಯ ರಮೇಶ್, ರೇಷ್ಮಾ ಹಾಗೂ ಸಂಘದ ಪ್ರಮುಖರು ಭಾಗವಹಿಸಿದ್ದರು.