ವೀರಾಜಪೇಟೆ, ಜು. 22: ವೀರಾಜಪೇಟೆ ಕೊಡವ ಸಮಾಜದ 2019-22ನೇ ಸಾಲಿನ ಅಧ್ಯಕ್ಷರಾಗಿ ವಾಂಚಿರ ವಿಠಲ್ ನಾಣಯ್ಯ, ಕಾರ್ಯದಶಿಯಾಗಿ ಕುಲ್ಲಚಂಡ ಪೂಣಚ್ಚ, ಎರಡನೆ ಬಾರಿಗೆ ಆಯ್ಕೆಯಾಗಿದ್ದಾರೆ. ಭಾನುವಾರ ನಡೆದ ಆಡಳಿತ ಮಂಡಳಿ ಚುನಾವಣೆಯಲ್ಲಿ ಆಯ್ಕೆ ಪ್ರಕ್ರಿಯೆ ನಡೆಯಿತು. ಹಿಂದಿನ ಆಡಳಿತ ಮಂಡಳಿಯೆ ಅಧಿಕಾರ ಉಳಿಸಿಕೊಂಡಿದೆ. ಉಪಾಧ್ಯಕ್ಷರಾಗಿ ಕುಯಿಮಂಡ ಕಿರಣ್, ಮರಣನಿಧಿ ಕಾರ್ಯದರ್ಶಿಯಾಗಿ ಅಲ್ಲಪಂಡ ಚಿಣ್ಣಪ್ಪ, ಆಟೋಟ ಕಾರ್ಯದರ್ಶಿಯಾಗಿ ಕನ್ನಂಬಿರ ಚಿಣ್ಣಪ್ಪ (ಅವಿರೋಧ), ನಗರ ಪ್ರದೇಶಗಳ ನಿರ್ದೇಶಕರುಗಳಾಗಿ ಕೊಂಗಾಂಡ ಟಾಟ ನಾಣಯ್ಯ, ಕೂತಂಡ ಸುರೇಶ್ ಅಪ್ಪಯ್ಯ, ಐಚಂಡ ವಾಸು, ಚೇಂದ್ರಿಮಾಡ ಗಣೇಶ್ ನಂಜಪ್ಪ, ಗ್ರಾಮಾಂತರ ಪ್ರದೇಶಗಳ ನಿರ್ದೇಶಕರುಗಳಾಗಿ ಕೋಟೆರ ಗಣೇಶ್ ತಮ್ಮಯ್ಯ, ಕೊಂಗಂಡ ಧರ್ಮಜ ದೇವಯ್ಯ, ಮೇವಡ ಚಿಣ್ಣಪ್ಪ, ಮಹಿಳಾ ಕ್ಷೇತ್ರದಿಂದ ಬೊವ್ವೇರಿಯಂಡ ಆಶಾ ಸುಬ್ಬಯ್ಯ, ಮುಕ್ಕಾಟ್ಟಿರದಮಯಂತಿ, ಪಟ್ರಪಂಡ ಗೀತಾ ಬೆಳ್ಳಿಯಪ್ಪ(ಅವಿರೋಧ)ವಾಗಿ ಆಯ್ಕೆಯಾಗಿದ್ದಾರೆ. ಚುನಾವಣಾಧಿಕಾರಿಯಾಗಿ ವಕೀಲ ಮಂಡೆಪಂಡ ದಿನೇಶ್ ಕಾರ್ಯ ನಿರ್ವಹಿಸಿದರು. ಒಟ್ಟು 2260 ಸದಸ್ಯರಲ್ಲಿ 2014 ಸದಸ್ಯರ ಮತದಾನ ಹಕ್ಕು ಹೊಂದಿದ್ದರು. 1017 ಮತಗಳು ಚಲಾವಣೆಗೊಂಡವು.