ವೀರಾಜಪೇಟೆ, ಜು. 22: ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಕುಟ್ಟಂದಿ ಪ್ರಾಥಮಿಕ ಆರೋಗ್ಯ ಕೇಂದ್ರದ ಆಶ್ರಯದಲ್ಲಿ ಬೇಟೋಳಿ ಉಪಕೇಂದ್ರ ರಾಮನಗರ ಅಂಗನವಾಡಿಯಲ್ಲಿ ಆರೋಗ್ಯವಂತ ಶಿಶುಗಳ ಪ್ರದರ್ಶನ ಮತ್ತು ಮಾಹಿತಿ ಕಾರ್ಯಾಗಾರ ನಡೆಯಿತು.

ಗ್ರಾಮದ ಬಿ.ಡಿ. ಮೋಹಿನಿ ಕಾರ್ಯಕ್ರಮ ಉದ್ಘಾಟಿಸಿದರು. ಮೇಲ್ವಿಚಾರಕಿ ದಮಯಂತಿ ಹಾಗೂ ಕಿರಿಯ ಮಹಿಳಾ ಆರೋಗ್ಯ ಸಹಾಯಕಿ ಬಿ.ಆರ್. ಮಾಯಮ್ಮ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಿದರು. ಆಶಾ ಕಾರ್ಯಕರ್ತೆ ಶೀಲಾಮಣಿ, ಅಂಗನವಾಡಿ ಕಾರ್ಯಕರ್ತೆ ರತಿ, ಕೆ.ಕೆ. ರಮಿತಾ ಉಪಸ್ಥಿತರಿದ್ದರು. ಈ ಸಂದರ್ಭ ಆರೋಗ್ಯವಂತ ಶಿಶುಗಳಿಗೆ ಬಹುಮಾನ ನೀಡಲಾಯಿತು. ಅಜಿಲ್ (ಪ್ರ), ಮೊಹಮದ್ ರಬೀಲ್ (ದ್ವಿ), ಇಂಪನ (ತೃ) ಸ್ಥಾನ ಪಡೆದುಕೊಂಡರು.