*ಗೋಣಿಕೊಪ್ಪಲು, ಜು. 22: ಇಲ್ಲಿನ ಕೂರ್ಗ್ ಪಬ್ಲಿಕ್ ಶಾಲೆಯ 6ನೇ ತರಗತಿ ವಿದ್ಯಾರ್ಥಿನಿ ದಿವ್ಯಾಭೀಮಯ್ಯ 14ರ ವಯೋಮಾನದ ರಾಜ್ಯಮಟ್ಟದ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಜಯಗಳಿಸಿ ಚಾಂಪಿಯನ್ ಪ್ರಶಸ್ತಿ ಪಡೆದುಕೊಂಡಿದ್ದಾರೆ.

ಬೆಂಗಳೂರಿನ ಹೆಸರು ಘಟ್ಟದಲ್ಲಿ ನಡೆದ ಐಸಿಎಸ್‍ಇ ನ್ಯಾಷನಲ್ ಸ್ಪೋಟ್ರ್ಸ್ ಅಂಡ್ ಗೇಮ್ಸ್‍ನ ರೀಜನಲ್ ಮಟ್ಟದ ಟೂರ್ನಿಯಲ್ಲಿ ಉತ್ತಮ ಸಾಧನೆ ತೋರಿದ ದಿವ್ಯಾ ಭೀಮಯ್ಯ ಆಗಸ್ಟ್ಟ್ 20ರಂದು ಬೆಂಗಳೂರಿನಲ್ಲಿ ನಡೆಯುವ ರಾಷ್ಟ್ರಮಟ್ಟದ ಟೂರ್ನಿಯಲ್ಲಿ ಪಾಲ್ಗೊಳ್ಳಲಿದ್ದಾರೆ. ಈಕೆ ಕಾಪ್ಸ್ ಶಾಲೆಯ ಶಿಕ್ಷಕ ಭೀಮಯ್ಯ ಹಾಗೂ ಕುಸುಮಾ ದಂಪತಿಯ ಪುತ್ರಿ.