ಮಡಿಕೇರಿ, ಜು. 23: ಕೊಡಗು ಕರ್ನಾಟಕದ ಕಾಶ್ಮೀರ, ಹಾಗೇ ಪ್ರವಾಸಿಗರ ಸ್ವರ್ಗವಾಗಿದೆ. ದಿನನಿತ್ಯ ಸಾವಿರಾರು ದೇಶ-ವಿದೇಶದಿಂದ ಪ್ರವಾಸಿಗರು ಜಿಲ್ಲೆಗೆ ಭೇಟಿ ನೀಡಿ ಇಲ್ಲಿಯ ಪ್ರಕೃತಿಯನ್ನು ಸವಿದು ಸಂಭ್ರಮಿಸುತ್ತಾರೆ. ಜಿಲ್ಲೆಯ ಪ್ರಮುಖ ಪ್ರವಾಸಿ ತಾಣಗಳಲ್ಲಿ ಒಂದಾಗಿರುವ ಕುಶಾಲನಗರ ಸಮೀಪದ ನಂಜರಾಯಪಟ್ಟಣದ ಬಳಿಯಿರುವ ದುಬಾರೆ ಪ್ರವಾಸಿಗರನ್ನು ಮತ್ತೆ ತನ್ನತ್ತ ಸೆಳೆಯುತ್ತಿದೆ. ಒಂದೂವರೆ ವರ್ಷದ ಹಿಂದೆ ಜಿಲ್ಲಾಡಳಿತವು ಇಲ್ಲಿನ ರಿವರ್ ರ್ಯಾಫ್ಟಿಂಗ್‍ಗೆ ನಿರ್ಬಂಧ ವಿಧಿಸಿತ್ತು.

2018ರ ಜನವರಿಯಲ್ಲಿ ದುಬಾರೆಯಲ್ಲಿ ನಡೆದ ಅಹಿತಕರ ಘಟನೆ ಹಾಗೂ ಕಾವೇರಿ ನದಿಯ ವಿವಿಧ ಭಾಗಗಳಲ್ಲಿ ಕಾನೂನು ಬಾಹಿರವಾಗಿ ಯಾವದೇ ಮಾರ್ಗಸೂಚಿ ಮತ್ತು ಸುರಕ್ಷಾ ಕ್ರಮಕೈಗೊಳ್ಳದೆ ನಡೆಸುವದನ್ನು ಮನಗಂಡ ಅಂದಿನ ಜಿಲ್ಲಾಧಿಕಾರಿ ಶ್ರೀವಿದ್ಯಾ ಅವರು ರ್ಯಾಫ್ಟಿಂಗ್ ನಿಷೇಧಿಸಿ ಆದೇಶಿಸಿದ್ದರು. ಇದೀಗ ಜಲಕ್ರೀಡೆ ರಿವರ್ ರ್ಯಾಫ್ಟಿಂಗ್ ಮತ್ತೆ ಆರಂಭ ಗೊಂಡಿದ್ದು, ಪ್ರವಾಸಿಗರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.

ಪ್ರವಾಸಿಗರಿಲ್ಲದೇ ಬಿಕೋ ಎನ್ನುತ್ತಿದ್ದ ಜಿಲ್ಲೆಯ ಪ್ರಮುಖ ಪ್ರವಾಸಿ ತಾಣ ದುಬಾರೆಗೆ ಮತ್ತೆ ಪ್ರವಾಸಿಗರ ದಂಡೇ ಹರಿದು ಬರುತ್ತಿದೆ.

ಕಡಿವಾಣಕ್ಕೆ ಸಮಿತಿ ರಚನೆ: ದುಬಾರೆಯಲ್ಲಿ ಅನಧಿಕೃತ ಚಟುವಟಿP Éಗಳಿಗೆ ಕಡಿವಾಣ ಹಾಕಲು ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಸಮಿತಿ ರಚಸಿಲಾಗಿದೆ. ಸಮಿತಿಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಡಿಎಫ್‍ಒ, ಅಗ್ನಿ ಶಾಮಕ ಇಲಾಖೆ, ಲೋಕೋಪ ಯೋಗಿ ಇಲಾಖೆ, ಕಾವೇರಿ ನೀರಾವರಿ ನಿಗಮ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಪ್ರವಾಸೋದ್ಯಮ ಇಲಾಖೆ ಅಧಿಕಾರಿಗಳು ಹಾಗೂ ರ್ಯಾಫ್ಟಿಂಗ್ ಅಸೋಸಿಯೇಷನ್‍ನ ಪ್ರಮುಖರು ಸಮಿತಿಯಲ್ಲಿ ಇದ್ದಾರೆ. ಪ್ರವಾಸಿಗರ ಸುರಕ್ಷತಾ ದೃಷ್ಟಿಯಿಂದ ಒಂದು ಬೋಟಿನಲ್ಲಿ ಆರು ಜನರಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ಗರ್ಭಿಣಿಯರು ಮತ್ತು 6 ವರ್ಷದ ಕೆಳಗಿನ ವಯೋಮಿತಿಯ ಮಕ್ಕಳಿಗೆ ಅವಕಾಶವಿಲ್ಲ.

ವರ್ತಕರಲ್ಲಿ ಖುಷಿ: ದುಬಾರೆ ಯಲ್ಲಿ ರ್ಯಾಫ್ಟಿಂಗ್ ಕ್ರೀಡೆ ರದ್ದಾದರಿಂದ ಪ್ರವಾಸಿಗರಿಲ್ಲದೆ ವರ್ತಕರು ಸಂಕಷ್ಟ ದಲ್ಲಿದ್ದರು. ಇದೀಗ ಮತ್ತೆ ರ್ಯಾಫ್ಟಿಂಗ್ ಜಲಕ್ರೀಡೆ ಆರಂಭಗೊಂಡಿರು ವದರಿಂದ ವರ್ತಕರು ಖುಷಿಯಾಗಿ ದ್ದಾರೆ. ರ್ಯಾಫ್ಟಿಂಗ್ ಕ್ರೀಡೆಯಲ್ಲಿ ಜಿಲ್ಲಾ ಡಳಿತ ತೆಗೆದುಕೊಂಡ ಕಟ್ಟುನಿಟ್ಟಾದ ಕ್ರಮಕ್ಕೆ ಪ್ರವಾಸಿಗರು ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ.

- ಕೆ.ಎಂ. ಇಸ್ಮಾಯಿಲ್ ಕಂಡಕರೆ