ಸೋಮವಾರಪೇಟೆ, ಜು. 23: ಇಲ್ಲಿನ ರೋಟರಿ ಸಂಸ್ಥೆಯ ವತಿಯಿಂದ ಬೇಳೂರಿನ ಚಿತ್ರದುರ್ಗ ಮುರುಘರಾಜೇಂದ್ರ ಮಠದ ವೃದ್ಧಾಶ್ರಮದಲ್ಲಿರುವ ಹಿರಿಯ ನಾಗರಿಕರಿಗೆ ಬ್ಲಾಂಕೆಟ್, ಪ್ರಥಮ ಚಿಕಿತ್ಸಾ ಕಿಟ್ ಹಾಗೂ ನೀರಿನ ಫಿಲ್ಟರ್ ವಿತರಿಸಲಾಯಿತು. ರೋಟರಿಯ ಕಾರ್ಯಕ್ರಮಗಳಾದ ‘ಸೇವ್ ಎ ಲೈಫ್’ ಮತ್ತು ‘ಜೀವನ್ ಸಂಧ್ಯಾ’ ಕಾರ್ಯಕ್ರಮದಡಿ ನೊಂದವರಿಗೆ ಸಹಾಯ ಮಾಡಲಾಗುತ್ತಿದೆ ಎಂದು ರೋಟರಿ ಅಧ್ಯಕ್ಷ ಡಿ.ಪಿ.ರಮೇಶ್ ಹೇಳಿದರು. ಈ ಸಂದರ್ಭ ಸಹಾಯಕ ರಾಜ್ಯಪಾಲ ಪಿ.ನಾಗೇಶ್, ಮಾಜಿ ಅಧ್ಯಕ್ಷ ಪಿ.ಕೆ.ರವಿ, ಕಾರ್ಯದರ್ಶಿ ಎಚ್.ಸಿ.ಲೋಕೇಶ್ ಉಪಸ್ಥಿತರಿದ್ದರು.