ಗೋಣಿಕೊಪ್ಪ ವರದಿ, ಜು. 22: ಕೊಡಗು ಜಿಲ್ಲೆಯ ವನ್ಯಜೀವಿ ಗೌರವ ಪರಿಪಾಲಕರಾಗಿ ಕಾಕೂರು ಗ್ರಾಮದ ಕುಂಞಂಗಡ ಬೋಸ್ ಮಾದಪ್ಪ ಹಾಗೂ ಮಡಿಕೇರಿಯ ಕಂಬೇಯಂಡ ಸಿ. ಬಿದ್ದಪ್ಪ ಅವರುಗಳನ್ನು ನೇಮಕ ಮಾಡಲಾಗಿದೆ. ಅರಣ್ಯ, ಪರಿಸರ, ವನ್ಯಜೀವಿ ಇಲಾಖೆ ಅಧೀನ ಕಾರ್ಯದರ್ಶಿ ಕೆ. ಆರ್. ರಮೇಶ್ ಆದೇಶ ಹೊರಡಿಸಿದ್ದಾರೆ.