ಸಂಪಾಜೆ, ಜು. 22: ಎನ್‍ಡಿಆರ್‍ಎಫ್ ಅಧಿಕಾರಿ ವರ್ಗ ಹಾಗೂ ತಂಡದವರು ಸಂಪಾಜೆ ಗ್ರಾಮ ಪಂಚಾಯತಿಗೆ ಆಗಮಿಸಿ ಪ್ರಕೃತಿ ವಿಕೋಪದ ನಿರ್ವಹಣೆಯ ಬಗ್ಗೆ ಪಂಚಾಯಿತಿ ಸಭಾಂಗಣದಲ್ಲಿ ಅಣಕು ಪ್ರದರ್ಶನ ಹಾಗೂ ಮಾಹಿತಿ ನೀಡಿದರು.

ನೋಡೆಲ್ ಅಧಿಕಾರಿಯವರಾದ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಮಚ್ಚಾಡೋ, ಸಂಪಾಜೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಕುಮಾರ್ ಚೆದ್ಕಾರ್, ಉಪಾಧ್ಯಕ್ಷ ಸುಂದರ್ ಬಿ.ಆರ್, ಪಂಚಾಯಿತಿ ಸದಸ್ಯರುಗಳು, ಯುನಿಸೆಫ್ ಸಮಾಲೋಚಕ ಪ್ರಭಾತ್ ಕಲ್ಕುರ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಶೋಭರಾಣಿ ಪಿ.ಎಲ್. ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.